ಜೈನ ಧರ್ಮ ಶಾಂತಿ-ಸಮಾನತೆ ಸಂಕೇತ
ನಗರದ 1008 ಪಾಶ್ವನಾಥ ಜಿನಮಂದಿರದಲ್ಲಿ ಮೈತ್ರಿಧಾಮ ಬಾಹುಬಲಿಗೆ ಅಭಿಷೇಕ ನೆರವೇರಿಸಲಾಯಿತು.
Team Udayavani, Feb 19, 2021, 3:38 PM IST
ಚಳ್ಳಕೆರೆ: ಪುಣ್ಯಭೂಮಿ ಭಾರತದಲ್ಲಿ ಎಲ್ಲಾ ರೀತಿಯ ಧಾರ್ಮಿಕ ಆಚರಣೆಗಳನ್ನು ಅನುಸರಿಸಲಾಗುತ್ತಿದೆ. ಸಮಾನತೆ ಮತ್ತು ಶಾಂತಿಯುತ ವಾತಾವರಣಕ್ಕೆ ಜೈನ ಧರ್ಮವೂ ಸಹಕಾರಿಯಾಗಿದೆ. ಜೈನ ಧರ್ಮ ಶಾಂತಿ, ಸಹಬಾಳ್ವೆ, ಸಹನೆ, ಸಮಾನತೆಯ ಸಂಕೇತವಾಗಿದೆ ಎಂದು ಮೂಡಬಿದರೆಯ ಜಗದ್ಗುರು ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ 1008 ಪಾರ್ಶ್ವನಾಥ ಜಿನಮಂದಿರದಲ್ಲಿ ತಾಲೂಕು ಜೈನ ಸಮುದಾಯ ಸಂಘ ಮತ್ತು ಭಗವಾನ್ ಬಾಹುಬಲಿ ದಿಗಂಬರ ಜೈನ ಟ್ರಸ್ಟ್
ವತಿಯಿಂದ ಹಮ್ಮಿಕೊಂಡಿದ್ದ ಮೈತ್ರಿಧಾಮ ಬಾಹುಬಲಿ ಮಹಾಸ್ವಾಮಿಯ ಪ್ರಥಮ ಪ್ರತಿಷ್ಠೆಯ ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೈನ ಧರ್ಮದ ಪರಂಪರೆ ಮತ್ತು ಧಾರ್ಮಿಕ ಹಿತಾಸಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಭಕ್ತಿಪೂರ್ವಕವಾದ ಧಾರ್ಮಿಕ
ಕಾರ್ಯಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.
ತಾಲೂಕು ಜೈನ ಸಂಘದ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಡಿ. ಸುಧಾಕರ ಅಧ್ಯಕ್ಷತೆ ವಹಿಸಿದ್ದರು. ಜೈನ ಸಂಘದ ಗೌರವಾಧ್ಯಕ್ಷ ಡಿ. ಅಂಬಣ್ಣ, ಭಗವಾನ್ ಬಾಹುಬಲಿ ದಿಗಂಬರ ಜೈನ ಟ್ರಸ್ಟ್ ಅಧ್ಯಕ್ಷ ಡಿ. ಭರತ್‌ರಾಜ್, ಡಾ| ವಿಜಯೇಂದ್ರ, ಎನ್.ಜೆ. ವೆಂಕಟೇಶ್, ಎನ್. ಪದ್ಮಾವತಿ, ಗೌರಿಪುರ ಡಿ. ಪಾರ್ಶ್ವನಾಥ, ಪದ್ಮಾ, ದರ್ಶನ್, ಚೇತನ್, ವಿಮುಕ್ತಿ, ಡಿ. ಪ್ರಭಾಕರ, ನಾಗರಾಜು, ಡಿ. ರತ್ನರಾಜು, ಎನ್.ಜೆ. ವೆಂಕಟೇಶ್, ಹರ್ಷಿಣಿ ಸುಧಾಕರ ಮೊದಲಾದವರು ಪಾಲ್ಗೊಂಡಿದ್ದರು. ಪುರೋಹಿತರಾದ ಚಂದ್ರಕಾಂತ್ ಪಂಡಿತ್, ಪ್ರದೀಪ್‌ಕುಮಾರ್
ಪೂಜಾ ಕಾರ್ಯ ನಡೆಸಿಕೊಟ್ಟರು.
ಓದಿ : ಫೆ.22ರಿಂದ ಆರರಿಂದ ಎಂಟನೇ ತರಗತಿ ಶಾಲಾರಂಭ: ಸರ್ಕಾರದಿಂದ ಅಧಿಕೃತ ಆದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.