ಹಿರೇಕೆರೆ ಕಾವಲಿನಲ್ಲಿ ಸರಳ ಸಿಡಿ ಆಚರಣೆ
ನಾಯಕನಹಟ್ಟಿ: ಹಿರೇಕೆರೆ ಕಾವಲಿನಲ್ಲಿ ಸಿಡಿ ಉತ್ಸವ ಜರುಗಿತು.
Team Udayavani, Feb 25, 2021, 3:54 PM IST
ನಾಯಕನಹಟ್ಟಿ: ಹಿರೇಕೆರೆ ಕಾವಲಿನಲ್ಲಿ ಚೌಡೇಶ್ವರಿ ರಥೋತ್ಸವದ ಅಂಗವಾಗಿ ಬುಧವಾರ ಸಿಡಿ ಉತ್ಸವ ಜರುಗಿತು. ಸರಕಾರ ಸಿಡಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಉತ್ಸವನ್ನು ಸಾಂಪ್ರದಾಯಿಕ ರೂಪದಲ್ಲಿ ಆಚರಿಸಲಾಯಿತು. ಭಕ್ತರು ಸಿಡಿ ಮರವನೇರಿ ಸಿಡಿಯಾಡುವ ನಿಷೇಧ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಜರುಗಿತು. ಚೌಡೇಶ್ವರಿ ಮೂರ್ತಿಯ ಬೃಹತ್ ಪಂಚಲೋಹದ ವಿಗ್ರಹವನ್ನು ಮೆರವಣಿಗೆಯ ಮೂಲಕ ತಂದು ಸಿಡಿಯಾಡುವ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಯಿತು.ಸಿಡಿಯಾಡುವ ವ್ಯಕ್ತಿಯನ್ನು ಸಿಡಿ ಮರಕ್ಕೆ ಕಟ್ಟದೆ ಸಿಡಿ ಆಚರಣೆ ನಡೆಸಲಾಯಿತು.
ವ್ಯಕ್ತಿಗೆ ಬದಲಾಗಿ ಕೇವಲ ಸಿಡಿ ಕಂಬವನ್ನು ಸುತ್ತಿಸಲಾಯಿತು. ಅದರಡಿಯಲ್ಲಿ ಎತ್ತಿನ ಗಾಡಿಯಲ್ಲಿ ಸಿಡಿಯಾಡುವ ವ್ಯಕ್ತಿಯನ್ನು ವೃತ್ತಾಕಾರವಾಗಿ ಸುತ್ತಿಸಲಾಯಿತು. ಸಿಡಿ ಉತ್ಸವದಲ್ಲಿ ಎತ್ತಿನಹಟ್ಟಿ ಗೊಲ್ಲಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದವರು ಸಿಡಿಯಾಡುವುದು ವಿಶೇಷವಾಗಿದೆ. ಸಿಡಿ ಮರದ ಕೆಳಗಿದ್ದ ದಲಿತ ಸಮುದಾಯದ ಯುವಕ ಭಂಡಾರ ಬೇವಿನಸೊಪ್ಪ ಹೂವುಗಳನ್ನು ಭಕ್ತರ ಮೇಲೆ ಎಸೆದರು. ಸಿಡಿ ಕಂಬವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಪ್ರದಕ್ಷಿಣೆ ವೇಳೆ ಭಕ್ತರು ಬಾಳೆಹಣ್ಣು, ಮಂಡಕ್ಕಿ, ಹೂವುಗಳನ್ನು ಸಿಡಿಗಾರನಿಗೆ ಎಸೆದು ಹರಕೆ ಸಲ್ಲಿಸಿದರು.
ಸುತ್ತಲಿನ ಗ್ರಾಮಗಳು ಸೇರಿದಂತೆ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಜಾತ್ರಾ ಪ್ರದೇಶದಲ್ಲಿ ನೀರು, ನೆರಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ, ಪಪಂ ಅಧ್ಯಕ್ಷ ಎನ್. ಮಹಾಂತಣ್ಣ, ಸದಸ್ಯರಾದ ಬಸಣ್ಣ, ಹನುಮಣ್ಣ, ದೇವರಾಜ್ ಮತ್ತಿತರರು ಇದ್ದರು. ಎರಡು ದಿನಗಳ ಚೌಡೇಶ್ವರಿ ರಥೋತ್ಸವ, ಸಿಡಿ ಉತ್ಸವದೊಂದಿಗೆ ಸಂಪನ್ನಗೊಂಡಿತು.
ಓದಿ : ಲಾರಿ-ಬಸ್ ಮುಖಾಮುಖಿ ಢಿಕ್ಕಿ: ಬಸ್ ಚಾಲಕ, ನಿರ್ವಾಹಕ ಸೇರಿ 7 ಜನರಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.