ಸಂವಿಧಾನದ ಆಶೋತ್ತರ ನಿತ್ಯೋತ್ಸವವಾಗಲಿ
ಶ್ರೀರಾಮ ಮಂದಿರ ತಾಂತ್ರಿಕ ಸಮಿತಿಯಲ್ಲಿ ಜಿಲ್ಲೆಯ ಪ್ರೊ| ಸೀತಾರಾಮ್ ಇರುವುದು ಸಂತಸ
Team Udayavani, Jan 27, 2021, 3:27 PM IST
ಚಿತ್ರದುರ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದತಾಂತ್ರಿಕ ಸಮಿತಿಯಲ್ಲಿ ಚಿತ್ರದುರ್ಗ ಜಿಲ್ಲೆ ತಳುಕುಮೂಲದ ಗುವಾಹಟಿ ಐಐಟಿ ನಿರ್ದೇಶಕಪ್ರೊ.ಟಿ.ಜಿ. ಸೀತಾರಾಮ್ ಇರುವುದು ಜಿಲ್ಲೆಗೆಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ
ಬಿ.ಶ್ರೀರಾಮುಲು ಹೇಳಿದರು.
ಜಿಲ್ಲಾಡಳಿತದಿಂದ ಪೊಲೀಸ್ ಕವಾಯತುಮೈದಾನದಲ್ಲಿ ಮಂಗಳವಾರ ನಡೆದ 72ನೇ ಭಾರತಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ
ನೆರವೇರಿಸಿ ಮಾತನಾಡಿದ ಅವರು, ಯುವಕರಲ್ಲಿ ದೇಶಪ್ರೇಮ ಬೆಳೆಸಲು, ದೇಶವನ್ನು ಅಭಿವೃದ್ಧಿ ಪಥದಲ್ಲಿಒಯ್ಯಲು, ಸಂವಿಧಾನದ ಆಶೋತ್ತರಗಳ ಆಚರಣೆನಿತ್ಯೋತ್ಸವ ಆಗಬೇಕು. ಗಣರಾಜ್ಯೋತ್ಸವ ಜನರಉತ್ಸವ ಇದು ಒಂದು ದಿನಕ್ಕೆ ಸೀಮಿತವಾಗಬಾರದುಎಂದರು.
ಸಂವಿಧಾನದ ಬಲದಿಂದಲೇ ಇಂದು ನಮ್ಮ ದೇಶಜಗತ್ತಿನ ಸುಭದ್ರ ಆರ್ಥಿಕತೆಗಳಲ್ಲಿ ಒಂದಾಗಿದೆ.ಸರ್ಕಾರದ ಬಾಗಿಲಿಗೆ ಜನಸಾಮಾನ್ಯರು ಬರಬಾರದು.ಜನ ಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರಹೋಗಬೇಕು. ಪ್ರತಿ ಹಳ್ಳಿಯು ಅಭಿವೃದ್ಧಿಯ ಕತೆಹೇಳಬೇಕು ಎಂಬುದು ಸಂವಿಧಾನದ ಆಶಯವಾಗಿದೆಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಉತ್ತಮ ಮನೆ ಕಟ್ಟಿಕೊಳ್ಳುವ ಮೂಲಕ ಪ್ರಧಾನಿಮೋದಿ ಅವರಿಂದ ಪ್ರಶಂಸೆ ಪಡೆದ ಚಳ್ಳಕೆರೆಯಬಿ.ಸಿ.ಪಂಕಜಾ ಬಡವರು ಸ್ವಾಭಿಮಾನದಿಂದಬಾಳಬಹುದು ಎಂದು ತೋರಿಸಿದ್ದಾರೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.
ಬಾಹ್ಯಾಕಾಶ ಸಂಸ್ಥೆ ಇಸ್ರೋ, ಡಿಆರ್‌ಡಿಒ, ಬಾರ್ಕ್‌ಹಾಗೂ ಇಸ್ರೋ ಕೇಂದ್ರಗಳ ನಂತರ ಜಿಲ್ಲೆಯಲ್ಲಿಗಗನಯಾತ್ರಿಗಳ ತರಬೇತಿ ಕೇಂದ್ರ ಆರಂಭವಾಗಲಿದೆ.ಇದು ಈ ಭಾಗದ ಯುವಕರಿಗೆ ಸ್ಪೂರ್ತಿ ತುಂಬಲಿದೆ.ಜೆನೆರಿಕ್ ಆಧಾರ್ ಅನ್ನೋ ಫಾರ್ಮ್ ಸ್ಟಾಟ್‌ಅಪ್ ರಾಜ್ಯದ ತನ್ನ ಮೊದಲ ಅಗ್ಗದ ದರ ಔಷಧಮಳಿಗೆಯನ್ನು ಜಿಲ್ಲೆಯಲ್ಲಿ ಆರಂಭಿಸಿದೆ ಎಂದರು.
ಸಂವಿಧಾನದ ಆಶಯಕ್ಕೆ ರಾಜ್ಯ ಸರ್ಕಾರವುಬದ್ಧವಾಗಿದ್ದು, ಸಮಾಜ ಕಲ್ಯಾಣ ಸೇರಿದಂತೆಹಲವು ಯೋಜನೆಗಳನ್ನು ರೂಪಿಸುತ್ತಿದೆ. ಎಸ್‌ಸಿ,
ಎಸ್‌ಟಿ ಸಮುದಾಯಗಳ ಅಭಿವೃದ್ಧಿಗಾಗಿ ಎಸ್‌ಸಿಪಿ,ಟಿಎಸ್‌ಪಿ ಅನುದಾನವನ್ನು ಸುಮಾರು 25 ಸಾವಿರಕೋಟಿ ರೂ. ಮೀಸಲಿಡಲಾಗಿದೆ. ಇದರ ಸಂಪೂರ್ಣಬಳಕೆಗೆ ಅದ್ಯತೆ ನೀಡಲಾಗಿದೆ. ಸಮಾಜ ಕಲ್ಯಾಣಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ 4 ಸಾವಿರದ500 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗಳಕೆರೆ ತುಂಬಿಸುವುದು, ಕುಡಿಯುವ ನೀರಿನಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು,ತುಂಗಾಭದ್ರಾ ಜಲಾಶಯದ ಹಿನ್ನೀರಿನಿಂದತುರುವನೂರು ಹೋಬಳಿ, ಚಳ್ಳಕೆರೆ, ಮೊಳಕಾಲ್ಮೂರುತಾಲೂಕಿನ ಗ್ರಾಮಗಳಿಗೆ ನೀರು ಒದಗಿಸಲುಸರ್ಕಾರ ಬದ್ಧವಾಗಿದೆ. ಜಿಲ್ಲೆಯ ನಗರ ಸ್ಥಳೀಯಸಂಸ್ಥೆಗಳ ನಗರೋತ್ಥಾನ ಯೋಜನೆಯಡಿ 98ರಪೈಕಿ 77 ಕಾಮಗಾರಿಗಳು ಪೂರ್ಣಗೊಂಡಿವೆ ಎಂದುಹೇಳಿದರು.
ಗಣರಾಜ್ಯೋತ್ಸವದಲ್ಲಿ ಸಶಸ್ತ್ರ ಮೀಸಲು ಪಡೆ,ನಾಗರಿಕ ಪೊಲೀಸ್ ತುಕುಡಿ, ಗೃಹರಕ್ಷಕ ದಳ,ಅಬಕಾರಿ, ಅರಣ್ಯ ಇಲಾಖೆ ತುಕುಡಿ, ಎನ್‌ಸಿಸಿ
ತುಕುಡಿ ಹಾಗೂ ವಿದ್ಯಾವಿಕಾಸ ಬಾಲಕಿಯರಪ್ರೌಢಶಾಲೆ ಮಕ್ಕಳಿಂದ ಆಕರ್ಷಕ ಪಥ ಸಂಚಲನನಡೆಯಿತು.
ಇದೇ ವೇಳೆ 2020-21ನೇ ಸಾಲಿನ ಹಿಂಗಾರು ಬೆಳೆಸಮೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದಖಾಸಗಿ ನಿವಾಸಿಗಳಾದ (ಪಿ.ಆರ್) ಚಿತ್ರದುರ್ಗದಟಿ.ಪ್ರಭು ಕುಮಾರ್, ಹೊಳಲ್ಕೆರೆಯ ವಿಜಯಜೆ.ಡಿ, ಹೊಸದುರ್ಗದ ಯೋಗೇಶ್ ಎಚ್.ಪಿ,ಚಳ್ಳಕೆರೆಯ ಸಿ.ತಿಪ್ಪೇಸ್ವಾಮಿ, ಹಿರಿಯೂರಿನಲಕ್ಷ್ಮಪ್ಪ, ಮೊಳಕಾಲ್ಮೂರಿನ ಸುರೇಶ್ ಅವರನ್ನುಗೌರವಿಸಲಾಯಿತು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕಯೋಜನೆಯಡಿ ಉತ್ತಮ ಸೇವೆ ಸಲ್ಲಿಸಿರುವ ಜಿಲ್ಲಾಆರೋಗ್ಯಾಧಿ ಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಬಸವರಾಜ್, ಚಳ್ಳಕೆರೆ ಸಾರ್ವಜನಿಕಆಸ್ಪತ್ರೆಯ ವೈದ್ಯಾ ಧಿಕಾರಿ ಡಾ.ವೆಂಕಟೇಶ್ ಹಾಗೂಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಡಾ.ಪಾಲಾಕ್ಷಯ್ಯ ಅವರನ್ನು ಗೌರವಿಸಲಾಯಿತು.ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆಶಶಿಕಲಾ ಸುರೇಶ್‌ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ್, ನಗರಸಭೆ ಅಧ್ಯಕ್ಷೆತಿಪ್ಪಮ್ಮ, ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ,ಜಿಪಂ ಸಿಇಒ ಡಾ.ಕೆ.ನಂದಿನಿದೇವಿ, ಎಸ್‌ಪಿ ಜಿ.ರಾ ಧಿಕಾ, ಅಪರ ಜಿಲ್ಲಾ ಧಿಕಾರಿ ಬಾಲಕೃಷ್ಣ, ನಗರಸಭೆಆಯುಕ್ತ ಜೆ.ಟಿ.ಹನುಮಂತರಾಜು ಮತ್ತಿತರರು
ಉಪಸ್ಥಿತರಿದ್ದರು.
ಓದಿ : ಖಾತೆ ಬದಲಾವಣೆ ಗೊಂದಲ ಇದ್ದರೂ ಸರ್ಕಾರಕ್ಕೆ ತೊಂದರೆ ಇಲ್ಲ: ಡಿಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.