ಕಾಯಕದಲ್ಲಿ ಭಾವಶುದ್ಧ ಅತಿ ಮುಖ್ಯ
Team Udayavani, Aug 15, 2021, 6:50 PM IST
ಹೊಸದುರ್ಗ: ನುಲಿಯ ಚಂದಯ್ಯನವರು ಹನ್ನೆರಡನೇ ಶತಮಾನದ ಶರಣರ ಕಣ್ಮಣಿಯಾಗಿದ್ದರು. ಅವರದು ಹುಲ್ಲು ಕೊಯ್ದು ಹಗ್ಗ ಮಾಡಿ ಮಾರುವ ಕಾಯಕ. ಹಗ್ಗವೇ ಅವರ ಆಧ್ಯಾತ್ಮ ಜೀವನದ ಸೇತುವೆಯಾಗಿತ್ತು ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 14ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ನುಲಿಯ ಚಂದಯ್ಯನವರು ವಿಜಯಪುರ ಜಿಲ್ಲೆಯ ಶಿವಣಿಗಿ ಗ್ರಾಮದವರು. ಕಲ್ಯಾಣ ಕ್ರಾಂತಿಯ ನಂತರ ಅಕ್ಕ ನಾಗಲಾಂಬಿಕೆಯ ಜೊತೆ ಬಂದ ಅವರು ಹೊಳಲ್ಕೆರೆ ತಾಲೂಕು ನುಲೇನೂರಿನಲ್ಲಿ ಲಿಂಗೈಕ್ಯರಾದ ಕುರುಹುಗಳಿವೆ ಎಂದರು. ಶರಣರ ಜೀವನ ಪರಿಯೇ ಲೋಕೋತ್ತರವಾದುದು.
ಚಂದಯ್ಯ ಕಾಯಕಕ್ಕೆ ವಿಶೇಷ ಒತ್ತು ನೀಡಿದವರು. ಶಿವನಿಗೇ ಹಗ್ಗ ಮಾರುವ ಕಾಯಕ ವಹಿಸಿದ್ದು ಗಮನಾರ್ಹ. ಕಾಯಕ ಯಾವುದೇ ಆಗಿದ್ದರೂ ಅದರಲ್ಲಿ ಭಾವ ಶುದ್ಧಿ ಮುಖ್ಯ. ಕಾಯಕ ಗುರು ಲಿಂಗ ಜಂಗಮಕ್ಕೂ ಕಡ್ಡಾಯ. ಕಾಯಕದಿಂದಲೇ ಗುರುವಿಗೆ ಜೀವನ್ಮುಕ್ತಿ, ಕಾಯಕದಿಂದಲೇ ಲಿಂಗದ ಶಿಲೆಯ ಕುಲ ಹರಿವುದು ಎಂದು ತಿಳಿಸಿದರು. ಒಮ್ಮೆ ಚಂದಯ್ಯನವರು ಹುಲ್ಲು ಕೊಯ್ಯುವಾಗ ಬಿದ್ದು ಹೋದ ಲಿಂಗವನ್ನು ಹುಡುಕದೆ ಕಾಯಕವನ್ನು ಮುಂದುವರಿಸುವರು. ಆಗ ಲಿಂಗಯ್ಯನೇ ವ್ಯಕ್ತಿ ರೂಪ ತಾಳಿ ತನ್ನನ್ನು ಸ್ವೀಕರಿಸುವಂತೆ ಅಂಗಲಾಚಿದರೂ ಚಂದಯ್ಯ ತಿರಸ್ಕರಿಸುವನು. ಲಿಂಗ ಅಂಗದ ಆತ್ಮ. ಆತ್ಮ ಹೋದ ಮೇಲೆ ಅಂಗಕ್ಕೆ ಬೆಲೆಯಿಲ್ಲ. ಲಿಂಗವನ್ನು ಧರಿಸಿಕೋ ಎಂದು ಮಡಿವಾಳ ಮಾಚಿದೇವರು ಹೇಳಿದಾಗ, ಚಂದಯ್ಯ ಲಿಂಗಯ್ಯ ಹಗ್ಗ ಮಾರುವ ಕಾಯಕ ಮಾಡುವುದಾದರೆ ಮಾತ್ರ ಎಂದು ಒಪ್ಪಿಗೆ ಸೂಚಿಸುವರು.
ಲಿಂಗಯ್ಯ ಹಗ್ಗ ಮಾರಿ ಹೆಚ್ಚಿಗೆ ಹಣ ತಂದಾಗ ಕಾಯಕಕ್ಕೆ ತಕ್ಕ ಪ್ರತಿಫಲ ಮಾತ್ರ ಸಾಕು ಎಂದು ತಿರಸ್ಕರಿಸುವರು. ಇದೇ ವಿಚಾರ ಅನುಭವ ಮಂಟಪದಲ್ಲಿಯೂ ಚರ್ಚೆಯಾಗಿ ಲಿಂಗಯ್ಯನನ್ನು ಧರಿಸುವಹಾಗೆ ಮಾಡಿದರು. ಭಕ್ತನಿಗೆ ಸತ್ಯ ಶುದ್ಧ ಕಾಯಕ ಮತ್ತು ಕಾಯಕಕ್ಕೆ ತಕ್ಕ ಪ್ರತಿಫಲ ಮುಖ್ಯವೇ ಹೊರತು ಅನ್ಯ ಮಾರ್ಗದಿಂದ ಬಂದ ಸಂಪತ್ತಲ್ಲ ಎನ್ನುವುದು ಈ ಘಟನೆಯಿಂದ ವೇದ್ಯವಾಗುತ್ತದೆ ಎಂದರು.
ಬದುಕಿಗೆ ಇಹ-ಪರಗಳೆಂಬ ಎರಡು ಮುಖಗಳಿವೆ. ಲಿಂಗತತ್ವಕ್ಕೆ ಚ್ಯುತಿ ತಾರದಂತೆ ಬದುಕಿದರದೇ ಮುಕ್ತಿಯ ಸಾಧನ. ಕಾಯಕ ದಾಸೋಹ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಮತ್ತೂಂದಿಲ್ಲ. ಜಂಗಮ ತƒಪ್ತಿಯೇ ಲಿಂಗ ತƒಪ್ತಿ. ಮನುಷ್ಯ ಏನೇ ಮಾಡಿದರೂ ಭಾವಶುದ್ಧವಾಗಿರಬೇಕು. ಅರ್ಥವಿಲ್ಲದ ವ್ಯರ್ಥ ಮಾತುಗಳನ್ನಾಡಿದರೆ ಚಂದೇಶ್ವರ ಲಿಂಗ ಒಪ್ಪುವುದಿಲ್ಲ ಎನ್ನುವುದು ಚಂದಯ್ಯನವರ ಸ್ಪಷ್ಟ ನಿಲುವು ಎಂದರು. ಉಪನ್ಯಾಸ ಮಾಲಿಕೆಯಲ್ಲಿ “ನುಲಿಯ ಚಂದಯ್ಯ’ ವಿಷಯದ ಕುರಿತು ಲೇಖಕ, ನಾಟಕಕಾರ ಬೆಂಗಳೂರಿನ ಹನುಮಂತ ಹಾಲಿಗೇರಿ ಮಾತನಾಡಿದರು.
12ನೇ ಶತಮಾನದಲ್ಲಿ ಬಾಳಿ ಬದುಕಿ ಕಾಯಕಕ್ಕೆ ಹೆಸರಾದ ನುಲಿಯ ಚಂದಯ್ಯನ ಹುಟ್ಟೂರು ವಿಜಯಪುರ ಜಿಲ್ಲೆಯ ಶಿವಣಿಗಿ. ಅಲ್ಲಿ ಅವರು ಹಗ್ಗ ಹೊಸೆದು ಮಾರುವ ಕಾಯಕ ಮಾಡಿಕೊಂಡಿದ್ದರು. ಕಲ್ಯಾಣದ ವಚನ ಪ್ರಭೆಯ ಬೆಳಕಿಗೆ ಮಾರು ಹೋಗಿ ಕಲ್ಯಾಣಕ್ಕೆ ಬರುವರು. ಬಂದು ಅಲ್ಲಿಯೂ ತಮ್ಮ ಹಗ್ಗ ಹೊಸೆದು ಮಾರುವ ಕಾಯಕ ಮಾಡುತ್ತಲೇ ಶರಣರ ಸಾಂಗತ್ಯ ಬೆಳೆಸುತ್ತಾರೆ.
ಪರಿಣಾಮವಾಗಿ ಇತರ ಶರಣರಂತೆ ಚಂದಯ್ಯನವರೂ “ಚಂದೇಶ್ವರಲಿಂಗ’ ಎನ್ನುವ ಅಂಕಿತದಲ್ಲಿ ನೂರಾರು ವಚನಗಳನ್ನು ರಚಿಸುತ್ತಾರೆ. ಆದರೆ ಇಂದು ಕೇವಲ 48 ವಚನಗಳು ಮಾತ್ರ ಲಭ್ಯವಾಗಿವೆ ಎಂದು ತಿಳಿಸಿದರು. ಶಿವಮೊಗ್ಗದ ಸಹನಾ ಚೇತನ್ ಸ್ವಾಗತಿಸಿದರು.
ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ, ಎಚ್.ಎಸ್. ನಾಗರಾಜ್ ವಚನಗೀತೆಗಳನ್ನು ಹಾಡಿದರು. ಶರಣ್ ತಬಲಾ ಸಾಥ್ ನೀಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತನಾಟ್ಯ ಶಾಲೆಯ ಸುಪ್ರಭೆ ಡಿ.ಎಸ್., ಮುಕ್ತ ಡಿ.ಜೆ. ವಚನ ನೃತ್ಯ ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.