ಸಂತ ಪರಂಪರೆಯಿಂದ ಸಮಾಜ ರಕ್ಷಣೆ
Team Udayavani, Aug 27, 2021, 12:45 PM IST
ಚಿತ್ರದುರ್ಗ: ಭಾರತದ ನೆಲಕ್ಕೆ ಸಂತರು, ಸ್ವಾಮಿಗಳು, ಅವಿಭಾಜ್ಯ ಅಂಗ . ಸ್ವಾಮಿಗಳು ಇಲ್ಲದಿದ್ದರೆ ಸಮಾಜ ಅಸ್ತವ್ಯಸ್ತವಾಗುತ್ತಿತ್ತು. ಸಮಾಜ ದುರ್ಬಲ ಆಗಬಾರದು, ದುರ್ಮಾರ್ಗದ ಕಡೆಗೆ ಹೋಗಬಾರದೆಂದು ಶತಮಾನಗಳಿಂದ ಸಂತ ಪರಂಪರೆ ಸಮಾಜವನ್ನು ಕಾಯುವ ಕೆಲಸ ಮಾಡುತ್ತಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಟೀಚರ್ಸ್ ಕಾಲೋನಿಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ನಿವಾಸದ ಬಳಿ ನಡೆದ “ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂತರು ಸಾತ್ವಿಕರು ಸ್ವಾಮಿಗಳು ಮಠಾಧೀಶರು ಸಾತ್ವಿಕತೆಯ ಹಿನ್ನೆಲೆಯಲ್ಲಿ ಸಮಾಜಕ್ಕೆ ಬದುಕನ್ನು ಕಟ್ಟಿ ಕೊಡುತ್ತಾರೆ. ಜನರನ್ನು ಅಕ್ಷರ ಸಂಸ್ಕೃತಿಗೆ ಒಳಪಡಿಸಿದ್ದು ಮಠ ಸಂಸ್ಕೃತಿ. ಸಂತರಿಗೆ ತಮ್ಮದೇ ಆದ ಹೊಣೆಗಾರಿಕೆ ಇದ್ದು, ಅವುಗಳ ಜೊತೆ ಸಾಗಬೇಕು ಎಂದರು. ಮಾನವ ಬದುಕಿನಲ್ಲಿ ಕಷ್ಟ ನಷ್ಟ ಎರಡೂ ಇದೆ. ಜನರು ಕಷ್ಟಗಳಲ್ಲಿ ಕಣ್ಣೀರು ಹಾಕುವಾಗ ಸಂತರು, ಶರಣರು, ಮೌಲ್ವಿಗಳು, ಬಿಕ್ಕುಗಳು, ಜೈನ ಮುನಿಗಳು, ಪಾದ್ರಿಗಳು, ಸಿಖ್ ಧರ್ಮ¨ ಅನುಯಾಯಿಗಳು ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಸುಖವನ್ನು ಅನುಭವಿಸಲು ಸಾವಿರಾರು ಜನ ರಿದ್ದಾರೆ, ಆದರೆ ದುಃಖದ ಸಂದರ್ಭದಲ್ಲಿ ದೂರ ಸರಿಯುತ್ತಾರೆ. ಸಮಾಜಸೇವೆ ಮಾಡುವ ಉದ್ದೇಶದಿಂದ ಧಾರ್ಮಿಕ ಕೇಂದ್ರಗಳಿವೆ. ಸಂಕಷ್ಟದ ಸಂದರ್ಭದಲ್ಲಿ ನಾವು ಸೇವೆ ಮಾಡಬೇಕು. ಪ್ರತಿಯೊಬ್ಬರಿಗೂ ತಮ್ಮದೇ ಆದ ಗುರಿ ಇರಬೇಕು. ಸಮಾಜ ದುರ್ಬಲ ಆಗಬಾರದು ಮತ್ತು ದುರ್ಮಾರ್ಗ¨ ಕಡೆಗೂ ಹೋಗಬಾರದು ಎಂದು ತಿಳಿಸಿದರು.
ಹೆಬ್ಟಾಳದ ಶ್ರೀ ಮಹಾಂತ ರುದ್ರಸ್ವಾಮಿಗಳು, ನಾಯಕನಹಟ್ಟಿಯ ಶ್ರೀ ತಿಪ್ಪೆ ರುದ್ರ ಸ್ವಾಮಿಗಳು, ಶ್ರೀ ಜಯವಿಭವ ಸ್ವಾಮಿಗಳು ಅನೇಕ ರೀತಿಯ ದಾಸೋಹ ಪರಂಪರೆಯನ್ನು ಮಾಡಿದ್ದಾರೆ. ಕಟ್ಟೆ ಕಟ್ಟೆಗಳನ್ನು ಕಟ್ಟಿಸಿದರು. ಸಂಕಷ್ಟದಲ್ಲಿರುವವರಿಗೆ ಗಂಜಿ ಕೇಂದ್ರ ಸ್ಥಾಪಿಸಿದರು.
1962ರಲ್ಲಿ ಚೀನಾ ಮತ್ತು ಭಾರತ ಯುದ œವಾದಾಗ ಶ್ರೀಮಠದಲ್ಲಿದ್ದ ಬಂಗಾರದ ಕಿರೀಟವನ್ನು ಭಾರತ ಸರ್ಕಾರಕ್ಕೆ ದಾನ ಕೊಟ್ಟ ಪೂಜ್ಯರು ಜಯವಿಭವ ಸ್ವಾಮಿಗಳು ಎಂದು ಸ್ಮರಿಸಿದರು. ಹಾವೇರಿ ಜಿಲ್ಲೆ ಅಗಡಿಯ ಪ್ರಭುಸ್ವಾಮಿ ಮಠದ ಶ್ರೀ ಗುರುಸಿದ್ಧ ಸ್ವಾಮಿಗಳುಮಾತನಾಡಿ, ಸಂತರು ತಾವು ನೋವನ್ನು ಉಂಡು ಸಮಾಜಕ್ಕೆ ಒಳಿತನ್ನು ಮಾಡುತ್ತಾರೆ. 12ನೇ ಶತಮಾನದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಬಸವಾದಿ ರಣರು ಮೇಲೆತ್ತುವ ಕೆಲಸ ಮಾಡಿದರು. ಇಂದಿನ ದಿನಗಳಲ್ಲಿ ಮಠಮಾನ್ಯಗಳು ಇಲ್ಲದೇ ಹೋಗಿದ್ದರೆ ಸಮಾಜ ಅಧಃಪತನಕ್ಕೆ ಜಾರುತ್ತಿತ್ತು ಎಂದರು. ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ ಮಾತನಾಡಿ, ದಕ್ಷಿಣ ಭಾಗದಲ್ಲಿ ಸ್ವಾಮೀಜಿಗಳಿಗೆ ಚ್ಚಿನ ಮನ್ನಣೆ ಸಿಕ್ಕಿದೆ. ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುತ್ತಿರುವ ಮುರುಘಾ ಶರಣರು ಜನೋಪಯೋಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಭೋವಿ ಗುರುಪೀಠ¨ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹಾವೇರಿ ಹೊಸಮಠ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಶಿರಸಂಗಿ ಮುರುಘಾ ಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು ಇದ್ದರು. ಕಾರ್ಯಕ್ರಮದ ದಾಸೋಹಿ ಕೆ. ಮಂಜುನಾಥ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.