ಏಪ್ರಿಲ್ ವೇಳೆಗೆ ಭೂ ಸ್ವಾಧೀನ
ಭದ್ರಾ ಮೇಲ್ದಂಡೆ ಚಿತ್ರದುರ್ಗ ಶಾಖಾ ಕಾಲುವೆಯ 827.18 ಎಕರೆ ಭೂಮಿ
Team Udayavani, Jan 10, 2020, 1:24 PM IST
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಚಿತ್ರದುರ್ಗ ಶಾಖಾ ಕಾಲುವೆಗೆ ಸಂಬಂಧಿಸಿದ 827.18 ಎಕರೆ ಭೂಮಿಯನ್ನು ಏಪ್ರಿಲ್ ವೇಳೆಗೆ ಸ್ವಾಧೀನ ಮಾಡಿಕೊಂಡು ಕಾಮಗಾರಿ ಚುರುಕುಗೊಳಿಸುವ ಕುರಿತು ಎಂದು ರೈತರು ಹಾಗೂ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ನಗರದ ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಸಭಾಂಗಣದಲ್ಲಿ ಗುರುವಾರ ಕಾಮಗಾರಿಗೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ಹಾಗೂ ಭೂಸ್ವಾಧೀನ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಎಲ್ಲೆಲ್ಲಿ-ಎಷ್ಟೆಷ್ಟು ಎಕರೆ ಸ್ವಾ ಧೀನ: ಚಿತ್ರದುರ್ಗ ಶಾಖಾ ಕಾಲುವೆಯ 10ನೇ ಪ್ಯಾಕೇಜ್‌ಗೆ ಭರಂಪುರ ವ್ಯಾಪ್ತಿಯಲ್ಲಿ 17 ಎಕರೆ, ಪಾಲವ್ವನಹಳ್ಳಿ- 58.35 ಎಕರೆ, ಮರಡಿದೇವಿಗೆರೆ-74.12, ಚಿಕ್ಕಸಿದ್ದವ್ವನಹಳ್ಳಿ-74.19, ದೊಡ್ಡಸಿದ್ದವ್ವನಹಳ್ಳಿ-28.08. ಪ್ಯಾಕೇಜ್ 11ರಲ್ಲಿ ದೊಡ್ಡಸಿದ್ದವ್ವನಹಳ್ಳಿ-111.03, ಕುಂಚಿಗನಾಳ್-
17.27, ದ್ಯಾಮವ್ವನಹಳ್ಳಿ-2.05, ಗೋನೂರು 58.25 ಎಕರೆ ಸೇರಿ ಒಟ್ಟು 189.20 ಎಕರೆ ಭೂಸ್ವಾಧೀನಕ್ಕೆ 2018 ರ ಆಗಸ್ಟ್ 22ರಂದು ಅಧಿ ಸೂಚನೆ ಹೊರಡಿಸಲಾಗಿದೆ.
ಪ್ಯಾಕೇಜ್ 12ರಲ್ಲಿ ಕಲ್ಲೇನಹಳ್ಳಿ-42.05, ಬೆಳಗಟ್ಟ-114.07, ಹಾಯ್ಕಲ್-31.03, ಪೇಲೂರ ಹಟ್ಟಿ-77.28, ದ್ಯಾಮವ್ವನಹಳ್ಳಿ-111.39, ಜನ್ನೇನ ಹಳ್ಳಿ-7.20 ಎಕರೆ ಸೇರಿದಂತೆ ಒಟ್ಟು 385.02 ಎಕರೆ ಭೂಸ್ವಾ ಧೀನಕ್ಕೆ 2018 ರ ಆಗಸ್ಟ್ 22 ರಂದು
ಅಧಿ ಸೂಚನೆ ಹೊರಡಿಸಿದೆ. ಡೀಮ್ಡ್ ಅರಣ್ಯಕ್ಕೆ ಬೇಕು.
ಪರ್ಯಾಯ ಭೂಮಿ: ದ್ವಾಮವ್ವನಹಳ್ಳಿ ವ್ಯಾಪ್ತಿಯಲ್ಲಿ 33 ಎಕರೆ ಡೀಮ್ಡ್ ಅರಣ್ಯ ಪ್ರದೇಶ ಭೂಸ್ವಾ ಧೀನ ಆಗಬೇಕಿದ್ದು, ಇಷ್ಟೇ
ವಿಸ್ತೀರ್ಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಲ್ಲಿ ಮಾತ್ರ ಡೀಮ್ಡ್ ಅರಣ್ಯ ಪ್ರದೇಶವನ್ನು ಕಾಮಗಾರಿಗೆ ಹಸ್ತಾಂತರಿಸುವ ಬಗ್ಗೆ ಅರಣ್ಯ ಇಲಾಖೆ ಷರತ್ತು ವಿಧಿಸಿದೆ. ಈ ದಿಸೆಯಲ್ಲಿ ಕಂದಾಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರ ಶ್ರೀಧರ್ ತಿಳಿಸಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರೈತರ ಜಮೀನಿನ ಭೂ ಸ್ವಾಧೀನಕ್ಕೆ ಸಂಬಂ ಧಿಸಿದಂತೆ ಪ್ರಕ್ರಿಯೆ ಜಾರಿಯಲ್ಲಿದ್ದು, ನಿಗಮದಿಂದ ಇನ್ನೂ ಭೂ ಸ್ವಾಧೀನ ಪಡೆಯದೇ ಇರುವ ಸ್ಥಳಗಳಲ್ಲಿ ಗುತ್ತಿಗೆದಾರರು ಸಂಬಂಧಿಸಿದ ರೈತರ ಸಹಮತ ಮತ್ತು ಒಪ್ಪಿಗೆ ಪಡೆದು ಕಾಮಗಾರಿ ನಿರ್ವಹಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಪ್ರಕಾರ ಗುತ್ತಿಗೆದಾರರು ರೈತರ ಸಹಮತ ಮತ್ತು ಒಪ್ಪಿಗೆ ಪಡೆದು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ರೈತರ ಒಪ್ಪಿಗೆ ಮೇರೆಗೆ ರೈತರ ಜಮೀನಿನಲ್ಲಿ ಕಾಮಗಾರಿಗಳು ಮತ್ತು ಭೂ ಸ್ವಾಧೀನ ಕೆಲಸಗಳು ನಡೆಯುತ್ತಿದ್ದು, ರೈತರಿಗೆ ಭೂ ಪರಿಹಾರವನ್ನು ಭೂ ಸ್ವಾಧೀನ ಕಾಯ್ದೆ ಅನ್ವಯ ನೀಡಲಾಗುತ್ತದೆ ಎಂದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಗುತ್ತಿಗೆದಾರರು, ರೈತರೊಂದಿಗಿನ ಒಪ್ಪಂದದಂತೆ ಬೆಳೆ ಪರಿಹಾರ ಕೊಟ್ಟುಕೊಂಡಿದ್ದಾರೆ. ಇದು ಇಲಾಖೆಯಿಂದ ನೀಡಿದ ಪರಿಹಾರವಲ್ಲ. ಇನ್ನು ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ಕೊಡದೆ, ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಜಮೀನಿನ ದಾಖಲೆಗಳ ಸಂಗ್ರಹವೇ ತ್ರಾಸು: ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಭವಾಗುತ್ತಿದ್ದು, ಇದಕ್ಕೆ ಕಾರಣ ಕೆಲ ಜಮೀನುಗಳ ದಾಖಲೆಗಳೇ ಸಿಗುತ್ತಿಲ್ಲ ಎಂದು ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ತಿಳಿಸಿದರು.
ಕೆಲ ದರಖಾಸ್ತು ಜಮೀನುಗಳಿಗೆ 1953 ರಿಂದ ದಾಖಲೆ ಸಂಗ್ರಹಿಸಬೇಕಿದೆ. ಆಕರ ಬಂದ್ ಪಹಣಿ ಮತ್ತಿತರೆ ದಾಖಲೆಗಳು ಹೊಂದಾಣಿಕೆ ಆಗುತ್ತಿಲ್ಲ. ಕೆಲ ರೈತರ ಜಂಟಿ ಪಹಣಿಗಳಿದ್ದು, ಪ್ರತ್ಯೇಕ ಸರ್ವೇ ಮಾಡಿಸಿ ಸ್ಕೆಚ್ ತಯಾರಿಸಿ ಪಹಣಿ ತರಿಸಿಕೊಳ್ಳಬೇಕಾಗಿದೆ. ಈ ಎಲ್ಲಾ ಕೆಲಸಗಳಿಗೆ ಸರ್ವೇ ಅಧಿಕಾರಿಗಳನ್ನು ಪದೇ ಪದೇ ರೈತರ ಜಮೀನಿಗೆ ಕರೆದೊಯ್ಯುವ ಕೆಲಸ ಆಗುತ್ತಿದೆ. ಇನ್ನೂ ಹತ್ತು ಪಹಣಿಗಳು ಸಿಕ್ಕಿದ ತಕ್ಷಣ ಭರಂಪುರದಿಂದ ಪಾಲವ್ವನಹಳ್ಳಿವರೆಗೆ 11/1 ನೋಟಿಫಿಕೇಶನ್
ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಶಿವಕುಮಾರ್, ಅಧಿಕಾರಿಗಳಾದ ಸತ್ಯನಾರಾಯಣ, ಕಲಾವತಿ, ಕುಲಕರ್ಣಿ, ವೆಂಕಟೇಶ್, ತಿಪ್ಪೇರುದ್ರಪ್ಪ, ಶ್ರೀಧರ್, ರಾಮಚಂದ್ರ, ರೈತ ಮುಖಂಡರಾದ ನುಲೇನೂರು ಎಂ. ಶಂಕ್ರಪ್ಪ, ಕೊಂಚೆ ಶಿವರುದ್ರಪ್ಪ, ಬಸ್ತಿಹಳ್ಳಿ ಸುರೇಶ್ ಬಾಬು, ಮಂಜುಳಾ ಡಾ| ಸ್ವಾಮಿ
ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.