ಖಜಾನೆ ಇಲಾಖೆ ಪಾತ್ರ ಮಹತ್ವದ್ದು
Team Udayavani, Sep 26, 2021, 12:12 PM IST
ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯಸರ್ಕಾರಗಳು ರೂಪಿಸುವ ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಖಜಾನೆ ಇಲಾಖೆಯ ಪಾತ್ರ ಬಹಳ ಮಹತ್ವದ್ದಾಗಿದೆಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.
ನಗರದ ತರಾಸು ರಂಗಮಂದಿರದಲ್ಲಿಶನಿವಾರ ನಡೆದ ಖಜಾನೆನೌಕರರ ಸಂಘದ ರಾಜ್ಯಮಟ್ಟದಕಾರ್ಯಕಾರಿಣಿ ಸಭೆ ಉದ್ಘಾಟಿಸಿಅವರು ಮಾತನಾಡಿದರು. ಖಜಾನೆ ಇಲಾಖೆ ನೌಕರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಗಮನಕ್ಕೆ ತಂದಿದ್ದಾರೆ.
ಮನವಿ ಕೊಟ್ಟು ಸುಮ್ಮನಾಗುವ ಬದಲುರಾಜ್ಯದ ಎಲ್ಲ ಶಾಸಕರು, ಮಂತ್ರಿಗಳನ್ನುಈ ಬಗ್ಗೆ ಗಮನ ಸೆಳೆಯಬೇಕು. ನಾನುಕೂಡ ನಿಮ್ಮ ಸಮಸ್ಯೆ ಬಗೆಹರಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಹಣಕಾಸು ಖಾತೆಯನ್ನುಬಹುತೇಕ ಮುಖ್ಯಮಂತ್ರಿಗಳೇ ಹೊಂದಿರುತ್ತಾರೆ.
ಹಣಕಾಸು ಇಲಾಖೆಕಾರ್ಯದರ್ಶಿ ಪ್ರಸಾದ್ ಕೂಡಾ ಶಿಸ್ತಿನಅ ಧಿಕಾರಿಯಾಗಿದ್ದು, ಅವರ ಗಮನಕ್ಕೂನಿಮ್ಮ ಸಮಸ್ಯೆಗಳನ್ನು ತಂದರೆ ಬೇಗಇತ್ಯರ್ಥವಾಗಲಿವೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಖಜಾನೆ ನೌಕರರ ಸಂಘದಅಧ್ಯಕ್ಷ ಜಿ. ಜಗದೀಶ್, ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಜಯಣ್ಣ,ಸಹಾಯಕ ನಿರ್ದೇಶಕ ಕೆ.ಟಿ. ವಿಜಯ್‌ಕೃಷ್ಣಕುಮಾರ್, ಸುನೀಲ್, ಗೌರವಾಧ್ಯಕ್ಷಎಂ.ಆರ್. ರಾಜಣ್ಣ, ಬಿ. ಶಿವಕುಮಾರಪಾಟೀಲ್, ಪುನೀತ್, ಕೇಶವ, ನಂದೀಶ್‌ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.