ಚಳ್ಳಕೆರೆ ತಾಪಂ ಇಒ ಮೇಲಿನ ಹಲ್ಲೆಗೆ ವ್ಯಾಪಕ ಆಕ್ರೋಶ
Team Udayavani, Feb 16, 2022, 3:14 PM IST
ಚಿತ್ರದುರ್ಗ: ಚಳ್ಳಕೆರೆ ತಾಲೂಕು ಪಂಚಾಯಿತಿಕಾರ್ಯನಿರ್ವಹಣಾ ಧಿಕಾರಿ ಮುಡಗಿನ ಬಸಪ್ಪಅವರ ಮೇಲಿನ ಹಲ್ಲೆ ಖಂಡಿಸಿ ಸರ್ಕಾರಿನೌಕರರ ಸಂಘ, ಗ್ರಾಮೀಣ ಅಭಿವೃದ್ಧಿಮತ್ತು ಪಂಚಾಯತ್‌ರಾಜ್ ನೌಕರರ ಸಂಘ,ಕರ್ನಾಟಕ ಪಂಚಾಯತಿ ಅಭಿವೃದ್ಧಿ ಅ ಧಿಕಾರಿಗಳಕ್ಷೇಮಾಭಿವೃದ್ಧಿ ನೌಕರರ ಸಂಘದಿಂದ ನಗರದಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ರಚಿಸಿಪ್ರತಿಭಟಿಸಲಾಯಿತು.
ಸರ್ಕಾರಿ ಅ ಕಾರಿಗಳ ಮೇಲೆ ಹಲ್ಲೆ ಮಾಡುವದುಷ್ಕರ್ಮಿಗಳನ್ನು ಕೂಡಲೇ ಬಂ ಧಿಸಿ ಕಾನೂನುಕ್ರಮ ಜರುಗಿಸಬೇಕು. ಅ ಧಿಕಾರಿಗಳ ಮೇಲೆಹಲ್ಲೆ ಮಾಡಿದವರನ್ನು ಜಿಲ್ಲೆಯಿಂದ ಗಡಿಪಾರುಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಸರ್ಕಾರಿ ನೌಕರರ ಸಂಘದಜಿಲ್ಲಾ ಅಧ್ಯಕ್ಷ ಕೆ. ಮಂಜುನಾಥ್ ಮಾತನಾಡಿ,ರಾಜ್ಯದಲ್ಲಿ ಸರ್ಕಾರಿ ನೌಕರರ ಮೇಲೆ ಪದೇಪದೇ ಹಲ್ಲೆಗಳು ನಡೆಯುತ್ತಿದ್ದು, ಸರ್ಕಾರಿನೌಕರರು ಕೆಲಸ ಮಾಡುವುದು ಕಷ್ಟವಾಗಿದೆ.ಜಿಲ್ಲಾ ಕಾರಿಗಳು ಇದನ್ನು ಗಂಭೀರವಾಗಿಪರಿಗಣಿಸಿ ಎಲ್ಲಿಯೂ ಲೋಪವಾಗದಂತೆನೋಡಿಕೊಳ್ಳಬೇಕು. ಹಲ್ಲೆಕೋರರಿಗೆಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದುಒತ್ತಾಯಿಸಿದರು.
ಇಂತಹ ಘಟನೆಗಳುಮರುಕಳಿಸದಂತೆ ಕಾನೂನು ಕ್ರಮ ಜರುಗಿಸಿಅಧಿಕಾರಿಗಳು ಶಾಂತಿಯಿಂದ ಕೆಲಸ ಮಾಡುವವಾತಾವರಣ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಸಲ್ಲಿಸಿದರು.ಚಳ್ಳಕೆರೆ ತಾಪಂ ಇಒ ಮೇಲೆ ಹಲ್ಲೆ ಮಾಡಿದರಾಜಕಾರಣಿಗಳು ಅಥವಾ ಚುನಾಯಿತ ಪ್ರತಿನಿಧಿಗಳು, ಮುಂದಿನ ದಿನದಲ್ಲಿ ಚುನಾವಣೆಗೆ ಸ ರ್ದೆಮಾಡದಂತೆ ಆದೇಶ ಮಾಡಬೇಕು. ಇಲ್ಲದಿದ್ದರೆಸರ್ಕಾರಿ ನೌಕರರು ಕೆಲಸ ಮಾಡುವುದುಕಷ್ಟವಾಗಲಿದೆ. ಹಲ್ಲೆಕೋರರಿಗೆ ಶಿಕ್ಷೆಯಾದರೆಮಾತ್ರ ಮುಂದೆ ಇಂತಹ ಘಟನೆಗಳುಮರುಕಳಿಸುವುದಿಲ್ಲ ಎಂದು ತಿಳಿಸಿದರು.
ಪಂಚಾಯತಿ ಅಭಿವೃದ್ಧಿ ಅ ಧಿಕಾರಿಗಳಕ್ಷೇಮಾಭಿವೃದ್ಧಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ನಾಗರಾಜ್ ಮಾತನಾಡಿ,ಕುಲಕ್ಷ ಕಾರಣಕ್ಕಾಗಿ ಚಳ್ಳಕೆರೆ ಇಒ ಮೇಲೆಚುನಾಯಿತ ಪ್ರತಿನಿಧಿ ಹಲ್ಲೆ ಮಾಡಿದ್ದಾರೆ. ಹಲ್ಲೆಮಾಡಿದವರ ಪರವಾಗಿ ಯಾವುದೇ ಲಾಬಿಇದ್ದರೂ ಮಣಿಯದೆ, ಒತ್ತಡಕ್ಕೆ ಒಳಗಾಗದೆಅಪರಾಧಿ ಗಳನ್ನು ಬಂ ಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಹಲ್ಲೆ ಮಾಡಿದವರ ಮೇಲೆ ಕ್ರಮತೆಗೆದುಕೊಳ್ಳುವವರೆಗೂ ನಮ್ಮ ಹೋರಾಟವನ್ನುಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ.
ಪಂಚಾಯಿತಿಯಕೆಲಸವನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆನೀಡಿದರು. ಪಂಚಾಯಿತಿ ಎಂದ ಮೇಲೆ ವಾಟರ್‌ಮ್ಯಾನ್‌ನಿಂದ ಹಿಡಿದು ಇಓವರೆಗೂ ಬರುತ್ತಾರೆ.ಕೆಲಸ ಮಾಡುವವರ ಮೇಲೆ ಈ ರೀತಿಯಾದಹಲ್ಲೆ ನಡೆದರೇ ಹೇಗೆ ಎಂದು ಪ್ರಶ್ನಿಸಿದ ಅವರು,ಹಲ್ಲೆ ಮಾಡಿದವರ ಮೇಲೆ ಗೂಂಡಾ ಕಾಯ್ದೆಹಾಕಿ ಬಂ ಧಿಸಬೇಕು.
ರಾಜ್ಯದಲ್ಲಿ ಪ್ರತಿ ದಿನಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಯುತ್ತಲೇಇವೆ. ಕೆಲವು ಮಾತ್ರ ಪೊಲೀಸ್ ಠಾಣೆಯಲ್ಲಿನೋಂದಣಿಯಾಗುತ್ತದೆ. ಉಳಿದವೂನೋಂದಣಿಯಾಗದೆ ಮರೆಯಾಗುತ್ತವೆ.ಹಲ್ಲೆ ನಡೆಸಿರುವ ಚುನಾಯಿತ ಪ್ರತಿನಿ ಯಕೆಡಿಪಿ ಸದಸ್ಯತ್ವವನ್ನು ಅ ವೇಶನದಲ್ಲೇ ರದ್ದುಮಾಡಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.