ಸದಾಶಿವ ಆಯೋಗದ ವರದಿ ಜಾರಿಯಾಗಲಿ
Team Udayavani, Sep 28, 2021, 1:44 PM IST
ಚಿತ್ರದುರ್ಗ: ನ್ಯಾಯಮೂರ್ತಿ ಸದಾಶಿವಆಯೋಗದ ವರದಿ ಜಾರಿಗೊಳಿಸದಿದ್ದರೆಮೀಸಲಾತಿ ಹಾಗೂ ಸಂವಿಧಾನಕ್ಕೆಅವಮಾನ ಮಾಡಿದಂತಾಗುತ್ತದೆ.ಕೂಡಲೆ ವರದಿಯನ್ನು ಯಥಾವತ್ತಾಗಿಜಾರಿಗೊಳಿಸಬೇಕು ಎಂದು ಕರ್ನಾಟಕದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ|ಎನ್.ಮೂರ್ತಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸದಾಶಿವಆಯೋಗದ ವರದಿ ಜಾರಿಗೆ ಕಳೆದ 28ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹೋರಾಟ, ಚಳುವಳಿ, ಪ್ರತಿಭಟನೆ,ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹೀಗೆಎಲ್ಲಾ ರೀತಿಯಿಂದಲೂ ಒತ್ತಾಯಿಸುತ್ತಲೆಬರುತ್ತಿದ್ದರೂ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಚುನಾವಣೆಯಲ್ಲಿ ಮತ ಬಳಕೆಗಷ್ಟೆಬಳಸಿಕೊಳ್ಳುತ್ತಿವೆ.
ಹೊಲೆಯ, ಮಾದಿಗಸಮುದಾಯದಲ್ಲಿ ಭಿನ್ನಾಭಿಪ್ರಾಯವಿದೆ.ಅವರೊಂದಿಗೆ ಚರ್ಚಿಸುತ್ತೇನೆ ಎಂದುಸಿದ್ದರಾಮಯ್ಯ ಭರವಸೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಸದಾಶಿವಆಯೋಗದ ವರದಿ ಜಾರಿ ಕುರಿತು ಪ್ರಣಾಳಿಕೆಯಲ್ಲಿಡುತ್ತೇನೆ ಎಂದು ಹೇಳಿ ಪ್ರಯತ್ನ ಕೂಡ ಮಾಡಲಿಲ್ಲ. ರಾಜ್ಯದಲ್ಲಿದಲಿತರ ಸ್ಥಿತಿ ಹೀನಾಯವಾಗಿದೆ. ಸದಾಶಿವಆಯೋಗದ ವರದಿ ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಕೇಂದ್ರ ಮಂತ್ರಿ ನಾರಾಯಣಸ್ವಾಮಿಹೇಳಿರುವುದಕ್ಕೆ ಪಶುಸಂಗೋಪನಾ ಸಚಿವ ವಿರೋಧ ವ್ಯಕ್ತಪಡಿಸುತ್ತಿರುವುದು ಯಾವ ನ್ಯಾಯ, ಸದಾಶಿವ ಆಯೋಗದವರದಿಯನ್ನು ವಿರೋಧಿಸುವವರು ಮೊದಲು ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳಲಿ ಎಂದು ಕುಟುಕಿದರು.
ಕೇಂದ್ರ ಮಂತ್ರಿನಾರಾಯಣಸ್ವಾಮಿಯನ್ನು ತೇಜೋವಧೆಮಾಡುತ್ತಿರುವ ಸಚಿವ ಪ್ರಭು ಚೌವ್ಹಾಣ್‌ಅವರನ್ನು ಕೂಡಲೆ ಸಚಿವ ಸಂಪುಟದಿಂದಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತಅವರ ವಿರುದ್ಧ ಹೋರಾಟ ಮಾಡುತ್ತೇವೆ.ಎಲ್ಲೆಲ್ಲಿ ಅವರು ಪ್ರವಾಸ ಕೈಗೊಳ್ಳುತ್ತಾರೋಅಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ.ಜಾತಿ ನಿಂದನೆ ಕೇಸು ದಾಖಲಿಸಿಪಶುಸಂಗೋಪನಾ ಸಚಿವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕೊರಮ, ಕೊರಚ, ಭೋವಿ,ಲಂಬಾಣಿಯನ್ನು ಕೈಬಿಡುವಂತೆ ಎಲ್ಲಿಯೂಹೇಳಿಲ್ಲ. ಶೇ.3 ರಷ್ಟು ಮೀಸಲಾತಿನೀಡುವುದಾಗಿ ಹೇಳಿದೆ. ಕೇಂದ್ರ ಮಂತ್ರಿಎ. ನಾರಾಯಣಸ್ವಾಮಿ ಅವರಿಗೆ ದಲಿತರಬಗ್ಗೆ ಕಾಳಜಿಯಿದೆ ಎನ್ನುವುದನ್ನು ಮೊದಲುಸದಾಶಿವ ಆಯೋಗದ ವರದಿಯನ್ನುವಿರೋ ಧಿಸುವವರು ಅರ್ಥಮಾಡಿಕೊಳ್ಳಲಿ.ಕಳೆದ ಒಂಭತ್ತು ವರ್ಷಗಳಿಂದ ಸದಾಶಿವ ಆಯೋಗದ ವರದಿ ಕೋಲ್ಡ್ ಸ್ಟೋರೇಜ್‌ನಲ್ಲಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು ಎಂದರು.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷಅವಿನಾಶ್ ಮಾತನಾಡಿ, ಸದಾಶಿವಆಯೋಗದ ವರದಿ ಜಾರಿಗೊಳಿಸುವಲ್ಲಿಸರ್ಕಾರಗಳು ವಿಫಲವಾದರೆ ಗಾಂಧಿ ಜಯಂತಿಯಂದು ಜಿಲ್ಲಾ ಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹಮಾಡುತ್ತೇವೆ ಎಂದು ತಿಳಿಸಿದರು. ಮಾದಿಗಸಮಾಜದ ಮುಖಂಡ ತಿಪ್ಪೇಸ್ವಾಮಿಮಾತನಾಡಿ, ಬಹು ಸಂಖ್ಯೆಯಲ್ಲಿರುವಮಾದಿಗ ಸಮಾಜದವರು ಕಳೆದ 25ವರ್ಷಗಳಿಂದಲೂ ಸದಾಶಿವ ಆಯೋಗದ ವರದಿ ಜಾರಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಎಂದರು.ಕುಂಚಿಗನಹಾಳ್ ಮಹಾಲಿಂಗಪ್ಪ,ಡಿಎಸ್‌ಎಸ್ ಮುಖಂಡರಾದ ನೇಹಮಲ್ಲೇಶ್, ಕೃಷ್ಣಮೂರ್ತಿ, ಮಂಜುನಾಥ್,ಏಕಾಂತಪ್ಪ, ಎನ್.ಸತೀಶ್‌ಕುಮಾರ್, ತಿಪ್ಪೇಸ್ವಾಮಿ, ರಂಗಸ್ವಾಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.