ಶಾಶ್ವತ ವಿಶ್ವಾಸ ಸಮಿತಿ ರಚನೆಗೆ ಚಿಂತನೆ
Team Udayavani, Nov 3, 2021, 4:50 PM IST
ಚಿತ್ರದುರ್ಗ: ಅರ್ಥಪೂರ್ಣ ಹಾಗೂ ವಿಭಿನ್ನಕಾರ್ಯಕ್ರಮಗಳ ಆಯೋಜನೆ ಮಾಡುವ ನಿಟ್ಟಿನಲ್ಲಿಶರಣ ಸಂಸ್ಕೃತಿ ಉತ್ಸವಕ್ಕಾಗಿ ಶಾಶ್ವತವಾದ ವಿಶ್ವಸ್ತಸಮಿತಿ ರಚನೆ ಮಾಡುವ ಆಲೋಚನೆ ಇದೆ ಎಂದು ಮುರುಘಾಮಠದಡಾ| ಶಿವಮೂರ್ತಿಮುರುಘಾಶರಣರು ಹೇಳಿದರು.
ಮುರುಘಾ ಮಠದ ಅನುಭವ ಮಂಟಪದಲ್ಲಿತೃತೀಯ ದಶಮಾನೋತ್ಸವ ಹಾಗೂ ಶರಣಸಂಸ್ಕೃತಿ ಉತ್ಸವದ ಯಶಸ್ಸಿಗೆ ಶ್ರಮಿಸಿದಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯಮಂತ್ರಿಗಳು ಚಿತ್ರದುರ್ಗ ಜಿಲ್ಲೆಗೆ ಶಾಶ್ವತ ಕೈಗಾರಿಕಾ ಕಾರಿಡಾರ್ ನಿರ್ಮಿಸಲುಹಿರಿಯೂರು-ಚಿತ್ರದುರ್ಗ ಮಧ್ಯೆ ಸುಮಾರು2 ಸಾವಿರ ಎಕರೆ ಜಾಗ ಗುರುತಿಸುವ ಪ್ರಕ್ರಿಯೆಗೆಚಾಲನೆ ನೀಡಿದ್ದಾರೆ.
ಇದು ಜಿಲ್ಲೆಯ ಜನರಲ್ಲಿಆಶಾಭಾವನೆ ಮೂಡಿಸಿದೆ ಎಂದರು.ಮುಂದಿನ ದಿನಗಳಲ್ಲಿ ಉತ್ಸವ ಸಂದರ್ಭದಲ್ಲಿಇಡೀ ಚಿತ್ರದುರ್ಗ ನಗರಕ್ಕೆ ದೀಪಾಲಂಕಾರಮಾಡುವ ಯೋಜನೆ ಇದೆ. ಎಲ್ಲ ಮಠಗಳಿಗೂ ದೀಪಾಲಂಕಾರ ಆಗಬೇಕು. ಕೋಟೆಗೂ ಸಹಅಲಂಕಾರ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ, ಮಳೆಯ ಕಾರಣದಿಂದಾಗಿಕೆಲವು ಕಾರ್ಯಕ್ರಮಗಳು ರದ್ದಾದವು. ರಾಷ್ಟ್ರೀಯವಾಲಿಬಾಲ್ ಪಂದ್ಯಾವಳಿ ನಡೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಉಳಿದಂತೆ ಇಡೀ ಉತ್ಸವ ಯಶಸ್ವಿಯಾಗಿ ನಡೆದಿದೆ.
ಈ ಬಾರಿಯ ಉತ್ಸವದಗೌರವಾಧ್ಯಕ್ಷ ಸ್ಥಾನ ಸಿಕ್ಕಿದ್ದು ಪುಣ್ಯದ ಸಂಗತಿಎಂದು ತಿಳಿದಿದ್ದೇನೆ. ನಮ್ಮಂತಹ ಅನೇಕ ಜನರನ್ನುಮುರುಘಾ ಶರಣರು ಬೆಳೆಸಿದ್ದಾರೆ ಎಂದರು.ಉñವದ್ಸ ಕಾರ್ಯಾಧ್ಯಕ್ಷರಾಗಿದ್ದ ಕೆ.ಎಸ್.ನವೀನ್ ಮಾತನಾಡಿ, ಯಶಸ್ವಿ ಕಾರ್ಯಕ್ರಮದಹಿಂದೆ ಎಸ್.ಜೆ.ಎಂ ವಿದ್ಯಾಪೀಠದ ಸಮಸ್ತನೌಕರರು ಹಾಗೂ ಶ್ರೀಮಠದ ಭಕ್ತರಶ್ರಮ ಇದೆ.ಕೆಲವು ತಿಂಗಳೊಳಗೆ ಜಮುರಾ ಕಪ್ ಕ್ರೀಡಾಕೂಟಆಯೋಜಿಸಲಾಗುವುದು. ಶರಣ ಸಂಸ್ಕೃತಿ ಉತ್ಸವದಭಾಗವಾಗಿ ಆಯೋಜಿಸಲಾಗಿದ್ದ ಸಿ.ಪಿ.ಆರ್‌ತರಬೇತಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿದ್ದುವಿಶೇಷ ಸಂದರ್ಭವಾಗಿದೆ.
ಈಸಾಧನೆಗೆ ಶ್ರೀಗಳು,ಎಸ್.ಜೆ.ಎಂ ಸಿಬ್ಬಂದಿ ವರ್ಗ ಮತ್ತು ಆರೋಗ್ಯಇಲಾಖೆ ನೀಡಿದ ಸಹಕಾರ ಸ ¾ರಣೀಯ ಎಂದರು.ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ,ಡಾ| ಬಸವಕುಮಾರ ಸ್ವಾಮೀಜಿ ಮಾತನಾಡಿದರು.ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಉತ್ಸವದ ಜಮಾ ಖರ್ಚಿನ ವಿವರಮಂಡಿಸಿದರು. ಮುಖಂಡರಾದ ಹನುಮಲಿಷಣ್ಮುಖಪ್ಪ, ಸಿ. ಶಂಕರಮೂರ್ತಿ, ಎಲ್.ಬಿ.ರಾಜಶೇಖರ್, ಎಚ್. ಆನಂದಪ್ಪ, ಎಚ್.ಸಿ.ನಿರಂಜನಮೂರ್ತಿ ವೇದಿಕೆಯಲ್ಲಿದ್ದರು. ಜಿತೇಂದ್ರಎನ್. ಹುಲಿಕುಂಟೆ ಸ್ವಾಗತಿಸಿದರು. ಹಾಲಪ್ಪನಾಯಕ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.