ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಹಣ ನೀಡಿದ ಮತದಾರರು!
Team Udayavani, Dec 7, 2021, 5:14 PM IST
ಚಿತ್ರದುರ್ಗ: ಚುನಾವಣೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆಹಣದ ಕವರ್ ಕೊಟ್ಟು ಮತ ಹಾಕಿಸಿಕೊಳ್ಳುವುದು ಎಲ್ಲರಿಗೂಗೊತ್ತಿರುವ ಸತ್ಯ. ಆದರೆ ಕೆಲವೊಮ್ಮೆ ಅಭ್ಯರ್ಥಿ, ಪಕ್ಷವನ್ನುನೋಡಿ ಮತದಾರರೇ ನೋಟು-ವೋಟು ಕೊಡುವುದನ್ನೂಕಂಡಿದ್ದೇವೆ.
ಇಂಥದ್ದೇ ಘಟನೆ ಚಿತ್ರದುರ್ಗದಲ್ಲೂ ನಡೆದಿದ್ದು, ವಿಧಾನಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್. ನವೀನ್ ಅವರಿಗೆಮತದಾರರಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಚುನಾವಣೆ ವೆಚ್ಚಕ್ಕಾಗಿ ಹಣದ ಕವರ್ ನೀಡಿದ್ದಾರೆ.
ಚುನಾವಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇರುವಾಗಸೋಮವಾರ ಬೆಳಗ್ಗೆ ಚಿತ್ರದುರ್ಗದಲ್ಲಿರುವ ಕೆ.ಎಸ್.ನವೀನ್‌ಅವರ ಮನೆಗೆ ಆಗಮಿಸಿದ ಚಿತ್ರದುರ್ಗ ತಾಲೂಕಿನಸೊಂಡೇಕೊಳ ಹಾಗೂ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮಪಂಚಾಯಿತಿ ಸದಸ್ಯರು ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೀರಿ. ನಿಮಗೆ ನೋವಿದೆ.
ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ವರ್ತಿಸಬೇಕಾಗಿರುವುದು ನಮ್ಮಜವಾಬ್ದಾರಿಯಾಗಿದ್ದು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದುಹೇಳಿ ಹಣದ ಕವರ್ ಕೈಗಿಟ್ಟಿದ್ದಾರೆ.ಇದರಿಂದ ಭಾವುಕರಾದ ಕೆ.ಎಸ್. ನವೀನ್, ಮತದಾರರಿಗೆಕವರ್ ಕೊಡುವುದು ಸಾಮಾನ್ಯ ಆದರೆ ಅಭ್ಯರ್ಥಿಗೆಮತದಾರರು ಕವರ್ ನೀಡಿರುವುದು ಮನಸ್ಸು ತುಂಬಿ ಬಂದಿದೆ.
ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಸಾಕು. ಚುನಾವಣೆಯಲ್ಲಿಬೆಂಬಲಿಸಿ ಎಂದು ಕೈಮುಗಿದಿದ್ದಾರೆ.ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್,ಭಾರತಿ, ವಿಶಾಲಮ್ಮ, ಮಧುಕುಮಾರ್, ಲಕ್ಷ್ಮಮ್ಮ, ಕಲ್ಲಪ್ಪ,ಓಬಮ್ಮ, ಉಮೇಶ, ಜಯಪ್ಪ, ಉಷ, ಶಿವಮ್ಮ, ಮಲ್ಲಮ್ಮ,ಎಂ.ಡಿ.ಜಗದೀಶ್, ಗೋವಿಂದನಾಯ್ಕ, ಮಂಜುನಾಥ,ರಾಜಪ್ಪ, ರಂಗಸ್ವಾಮಿ, ರವಿ ಪûಾತೀತವಾಗಿ ನವೀನ್ ಅವರಿಗೆಬೆಂಬಲ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.