ಹಣಕಾಸು ವಿವಾದ ಕೊಲೆಯಲ್ಲಿ ಅಂತ್ಯ
Team Udayavani, Dec 8, 2021, 12:41 PM IST
ಚಿತ್ರದುರ್ಗ: ಹಣಕಾಸಿನ ವಿಚಾರವಾಗಿನಡೆದ ಮಾತುಕತೆ ವ್ಯಕ್ತಿಯೊಬ್ಬನನ್ನುಕೊಲೆ ಮಾಡಿಸಿದ ಘಟನೆ ನಗರದಹೃದಯ ಭಾಗದಲ್ಲಿರುವ ಬಾಲಕಿಯರಸರ್ಕಾರಿ ಪದವಿಪೂರ್ವ ಕಾಲೇಜುಹಿಂಭಾಗದ ಗಲ್ಲಿಯಲ್ಲಿ ನಡೆದಿದೆ.
ಜಿಮ್ ತರಬೇತುದಾರ ಹಾಗೂವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಹೊರಪೇಟೆಯ ಮಹಮ್ಮದ್ ಅಜರ್(28) ಕೊಲೆಯಾದ ವ್ಯಕ್ತಿ. ನಗರದಲ್ಲಿಹಮಾಲಿ ಕೆಲಸ ಮಾಡಿಕೊಂಡಿದ್ದಮಾರುತಿ ನಗರದ ಮುಬಾರಕ್ ಅಲಿ(31), ಎಪಿಎಂಸಿಯಲ್ಲಿ ವಾಸವಿರುವಪ್ರದೀಪ್ (26) ಹಾಗೂ ಚೇಳುಗುಡ್ಡದಹಸೇನ್ (30) ಕೊಲೆ ಮಾಡಿರುವ ಆರೋಪಿಗಳು. ಘಟನೆನಡೆದ ಕೇವಲ ಆರುತಾಸುಗಳಲ್ಲಿ ನಗರ ಠಾಣೆಪೊಲೀಸರು ಕೊಲೆಆರೋಪಿಗಳನ್ನುಬಂಧಿ ಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿ ಕಾತಿಳಿಸಿದ್ದಾರೆ.
ಘಟನೆ ವಿವರ: ಕೊಲೆಯಾದ ನಗರದಹೊರಪೇಟೆಯ ನಿವಾಸಿ ಜಿಮ್‌ತರಬೇತುದಾರ ಮಹಮ್ಮದ್ ಅಜರ್(28) ಬಳಿ ಹಮಾಲಿ ಕೆಲಸ ಮಾಡುತ್ತಿದ್ದಮುಬಾರಕ್ 40 ಸಾವಿರ ರೂ. ಹಾಗೂಪ್ರದೀಪ್ 20 ಸಾವಿರ ರೂ. ಸಾಲಪಡೆದಿದ್ದರು. ಕೆಲ ದಿನಗಳಿಂದ ಸಾಲದಹಣ ನೀಡುವಂತೆ ಅಜರ್ ಕೇಳಿದ್ದಾನೆ.
ಈ ವೇಳೆ ಮುಬಾರಕ್ ಪತ್ನಿ ಬಗ್ಗೆ ಅವಾಚ್ಯಶಬ್ದಗಳಿಂದ ಮಾತನಾಡಿದ್ದರಿಂದಸಿಟ್ಟಿಗೆದ್ದಿದ್ದ ಮುಬಾರಕ್ ಅಲಿ, ಪ್ರದೀಪ್‌ಸ್ನೇಹಿತನಾದ ಹೂವಿನ ವ್ಯಾಪಾರಿ ಹಸೇನ್‌ಬಳಿ ಕೊಲೆ ಬಗ್ಗೆ ಚರ್ಚೆ ನಡೆಸಿದ್ದಾರೆ.ಬಳಿಕ ಈ ಮೂವರು ಕೊಲೆಗೆ ಸಂಚುರೂಪಿಸಿದ್ದಾರೆ. ನಗರದ ಕೆಲವುಕಡೆಗಳಲ್ಲಿ ಅಜರ್‌ನನ್ನು ಕರೆಸಿಕೊಂಡಾಗಆತ ಸ್ನೇಹಿತರೊಂದಿಗೆ ಬಂದಿದ್ದರಿಂದ3 ಬಾರಿ ಕೊಲೆ ಯತ್ನ ವಿಫಲವಾಗಿದೆ.ಡಿ. 6 ರಂದು ಸೋಮವಾರ ರಾತ್ರಿ10:30ರ ಸಮಯದಲ್ಲಿ ಹಣನೀಡುತ್ತೇವೆಂದು ನಗರದ ಸರ್ಕಾರಿಬಾಲಕಿಯರ ಪದವಿಪೂರ್ವ ಕಾಲೇಜುಹಿಂಭಾಗದ ರಸ್ತೆಗೆ ಅಜರ್‌ನನ್ನು ಕರೆಸಿದ್ದಾರೆ.
ಮುಬಾರಕ್ ಅಲಿ,ಪ್ರದೀಪ್ ನೀಡಿದ ಹಣವನ್ನು ಬೈಕ್‌ಮೇಲೆ ಕುಳಿತು ಎಣಿಸುತ್ತಿದ್ದ ಅಜರ್‌ಮೇಲೆ ಏಕಾಏಕಿ ಮೂವರು ಸೇರಿಚಾಕು, ಮಚ್ಚಿನಿಂದ ಹಲ್ಲೆ ನಡೆಸಿತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆಮಾಡಿದ್ದಾರೆ.ಮೃತನ ತಂದೆ ಮಹಮದ್‌ಅಲಿ ನೀಡಿದ ದೂರಿನನ್ವಯಚಿತ್ರದುರ್ಗ ನಗರ ಠಾಣೆ ಪೊಲೀಸರುವಿದ್ಯಾನಗರದ ರಾಷ್ಟ್ರೀಯ ಹೆದ್ದಾರಿಬಳಿ ಇದ್ದ ಮೂವರು ಆರೋಪಿಗಳನ್ನುವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆಒಳಪಡಿಸಿದ್ದಾರೆ.
ಪ್ರಕರಣವನ್ನು ಕೆಲಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ನಗರ ಠಾಣೆ ಸಿಪಿಐ ನಯೀಂಅಹಮದ್, ಪಿಎಸ್‌ಐ ಸುರೇಶ್,ಸಿಬ್ಬಂದಿಗಳಾದ ರಾಜಶೇಖರ್,ಜಗದೀಶ್, ಪಿ.ರವಿ, ಅಶೋಕ, ಜಯಪ್ಪ,ಮಧುಸೂಧನ್ ತಂಡದ ಕಾರ್ಯವನ್ನುಎಸ್ಪಿ ಜಿ. ರಾಧಿಕಾ ಶ್ಲಾಘಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.