ಕನ್ನಡದಲ್ಲಿ ವಿಜ್ಞಾನ ಬೋಧನೆಗೆ ಕ್ರಮ ಕೈಗೊಳ್ಳಲು ಒತ್ತಾಯ
Team Udayavani, Dec 16, 2021, 5:47 PM IST
ಚಿತ್ರದುರ್ಗ: ಕನ್ನಡದಲ್ಲಿ ಪದವಿಪೂರ್ವಶಿಕ್ಷಣದ ವಿಜ್ಞಾನ ವಿಷಯವನ್ನುಬೋಧನೆ ಮಾಡಲು ಪೂರಕವಾತಾವರಣ ಕಲ್ಪಿಸಬೇಕು ಎಂದುನಿವೃತ್ತ ಪ್ರಾಚಾರ್ಯ ಜೆ. ಯಾದವ ರೆಡ್ಡಿಸರ್ಕಾರವನ್ನು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಇಂಗ್ಲಿಷ್‌ಕಾರಣಕ್ಕೆ ಗ್ರಾಮೀಣ ಪ್ರದೇಶದಹಿಂದುಳಿದ, ಪರಿಶಿಷ್ಟ ಸಮುದಾಯದಮಕ್ಕಳು ವೃತ್ತಿ ಶಿಕ್ಷಣದಿಂದ ಹಿಂದೆಸರಿಯುತ್ತಿದ್ದಾರೆ. ಎಂಜಿನಿಯರಿಂಗ್‌ಹಾಗೂ ಮೆಡಿಕಲ್ ಶಿಕ್ಷಣದಿಂದವಂಚಿತರಾಗುತ್ತಿದ್ದಾರೆ ಎಂದರು.
ವಿಜ್ಞಾನ ವಿಷಯವನ್ನು ಇಂಗ್ಲಿಷ್‌ನಲ್ಲಿಯೇ ಕಲಿಯಬೇಕೆಂದೇನಿಲ್ಲ.ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತತಾಲೂಕಿನ ಸಂಖ ಗ್ರಾಮದಲ್ಲಿ ಪಿಯುವಿಜ್ಞಾನ ವಿಷಯವನ್ನು ಕನ್ನಡದಲ್ಲಿಬೋಧನೆ ಮಾಡಲಾಗುತ್ತಿದೆ. ಈಕಾಲೇಜಿನಲ್ಲಿ 80 ಮಂದಿ ವಿದ್ಯಾರ್ಥಿಗಳುಅಭ್ಯಾಸ ಮಾಡುತ್ತಿದ್ದು ಅವರಲ್ಲಿ ಪ್ರತಿವರ್ಷ ಹತ್ತು ಮಂದಿ ಮೆಡಿಕಲ್,30 ಮಂದಿ ಇಂಜಿನಿಯರಿಂಗ್ ಹೋಗುತ್ತಿದ್ದಾರೆ.
ಮರಾಠಿ ನೆಲದಲ್ಲಿ ಕನ್ನಡದಲ್ಲಿ ಪಿಯುಸಿ ಓದಿದವರುವೃತ್ತಿ ಶಿಕ್ಷಣದಲ್ಲಿ ಪಾಲುದಾರಿಕೆಪಡೆಯುವುದಾದರೆ ಕರ್ನಾಟಕದಲ್ಲಿಏಕೆ ಸಾಧ್ಯವಾಗುವುದಿಲ್ಲ ಎಂದುಪ್ರಶ್ನಿಸಿದರು.ಮಹಾರಾಷ್ಟ್ರದ ಸಂಖದಲ್ಲಿ ಆರ್.ಕೆ. ಪಾಟೀಲ್ ಎಂಬುವವರು ಕನ್ನಡಮಾಧ್ಯಮದ ಪಿಯು ಕಾಲೇಜುಉತ್ತಮವಾಗಿ ನಡೆಸುತ್ತಿದ್ದಾರೆ. ಉತ್ತಮಫಲಿತಾಂಶ ಬರುತ್ತಿದೆ. ಈ ಹಿನ್ನೆಲೆಯಲ್ಲಿಚಿತ್ರದುರ್ಗದಿಂದ ಅಲ್ಲಿಗೆ ಅಧ್ಯಯನಪ್ರವಾಸ ತೆರಳಿ ನೋಡಿಕೊಂಡುಬಂದಿದ್ದೇವೆ.
ಕನ್ನಡದಲ್ಲಿ ಪಠ್ಯಪುಸ್ತಕಇಲ್ಲದಿದ್ದರೂ ಅಲ್ಲಿನ ಉಪನ್ಯಾಸಕರುತಾವೇ ಪಠ್ಯ ಸಿದ್ಧಪಡಿಸಿ ವಿದ್ಯಾರ್ಥಿಗಳನ್ನುಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ.ಇಡೀ ರಾಜ್ಯದಲ್ಲಿ ಕನ್ನಡದಲ್ಲಿಪಾಠ ಮಾಡುವ ಪಿಯು ವಿಜ್ಞಾನಕಾಲೇಜು ಸಂಖದಲ್ಲಿ ಮಾತ್ರ ಇದೆ.ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿಅಧ್ಯಯನದಲ್ಲಿ ತೊಡಗಿದ್ದಾರೆ.ಉತ್ತಮ ಪ್ರಯೋಗಾಲಯ ಇರುವ ಈಕಾಲೇಜಲ್ಲಿ ಸಹಜವಾಗಿಯೇ ಶೇ.100ರಷ್ಟು ಫಲಿತಾಂಶ ಬರುತ್ತಿದೆ ಎಂದರು.
ನಿವೃತ್ತ ಪ್ರಾಚಾರ್ಯಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್‌ಮಾತನಾಡಿ, ಮಹರಾಷ್ಟ್ರದ ಸಂಖಕಾಲೇಜಿನ ವಿಜ್ಞಾನ ಶಿಕ್ಷಕರ ಕಾಳಜಿಹಾಗೂ ಬೋಧನಾ ಶೈಲಿಯಿಂದಾಗಿ ಅಲ್ಲಿವಿದ್ಯಾರ್ಥಿಗಳು ಕನ್ನಡದಲ್ಲಿಯೇ ವಿಜ್ಞಾನವಿಷಯ ಅಭ್ಯಾಸ ಮಾಡುತ್ತಿದ್ದಾರೆ.ಕರ್ನಾಟಕದಲ್ಲಿಯೂ ಇಂತಹವಾತಾವರಣ ಸೃಷ್ಟಿಸಬೇಕೆಂಬುದುನಮ್ಮ ಆಶಯ. ಈ ನಿಟ್ಟಿನಲ್ಲಿ ಅಧ್ಯಯನಪ್ರವಾಸ ಕೈಗೊಂಡು ವಾಸ್ತವಾಂಶಗಳಖುದ್ದು ಅಧ್ಯಯನ ಮಾಡಲಾಗಿದೆಎಂದರು.
ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಮಾತನಾಡಿ, ಹದಿನೈದು ದಿನಗಳಒಳಗಾಗಿ ಅಧ್ಯಯನ ವರದಿಯನ್ನುಮುಖ್ಯಮಂತ್ರಿ ಹಾಗೂ ಶಿಕ್ಷಣಸಚಿವರಿಗೆ ಸಲ್ಲಿಸಿ ಶೀಘ್ರ ಅನುಷ್ಠಾನಕ್ಕೆಆಗ್ರಹಿಸಲಾಗುವುದು. ಮುಂದಿನಶೆ„ಕ್ಷಣಿಕ ವರ್ಷ ಆರಂಭದ ಒಳಗಾಗಿಜಿಲ್ಲೆಯಲ್ಲಿ ಕನಿಷ್ಠ ಹತ್ತು ಕಡೆಯಾದರೂಕನ್ನಡದಲ್ಲಿ ಬೋಧನೆ ಮಾಡುವ ಪಿಯುವಿಜ್ಞಾನದ ಕಾಲೇಜುಗಳ ಆರಂಭಿಸುವಉದ್ದೇಶ ಹೊಂದಲಾಗಿದೆ. ಇದಕ್ಕಾಗಿಜನಪ್ರತಿನಿ ಧಿಗಳು, ಸಂಘ-ಸಂಸ್ಥೆಗಳು,ವಿವಿಧ ಸಂಘಟನೆಗಳ ನೆರವಿನಿಂದಆಂದೋಲನದ ಸ್ವರೂಪನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯಪತ್ರಕರ್ತ ಶ. ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.