ಹುತಾತ್ಮ ಯೋಧರ ಸೇವೆ ಸ್ಮರಣೀಯ
Team Udayavani, Dec 19, 2021, 5:35 PM IST
ಚಿತ್ರದುರ್ಗ: ಹೆಲಿಕಾಪ್ಟರ್ ದುರಂತದಲ್ಲಿಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್,ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆಎಲ್ಲ ಯೋಧರಿಗೆ ನಗರದ ವೀರವನಿತೆ ಒನಕೆಓವವ್ವ ವೃತ್ತದಲ್ಲಿ ಶನಿವಾರ ಸಶಸ್ತ್ರ ಪಡೆಗಳಧ್ವಜ ದಿನಾಚರಣೆ ಅಂಗವಾಗಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿಗೌರವ ಸಮರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಶಿವಮೊಗ್ಗದಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಉಪನಿರ್ದೇಶಕ ಕೆ. ಕೃಷ್ಣ, ಸ್ವಾತಂತ್ರಾÂ ನಂತರದೇಶದ ಗಡಿ ಮತ್ತು ಗಡಿಯೊಳಗೂ ಶೌರ್ಯದಿಂದ ಹೋರಾಡಿದ ವೀರಯೋಧರನ್ನುಗೌರವಿಸಲು ಪ್ರತಿ ವರ್ಷ ಡಿಸೆಂಬರ್7ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿಆಚರಿಸಲಾಗುತ್ತಿದೆ.
ಸೈನ್ಯ, ನೌಕಾಪಡೆಮತ್ತು ವಾಯುಪಡೆಯ ಸಿಬ್ಬಂದಿ ಸಲ್ಲಿಸಿದಸೇವೆ ಸ್ಮರಿಸಿಕೊಳ್ಳುವ ದಿನ ಇದಾಗಿದೆ.ರಾಷ್ಟ್ರದ ಏಕತೆ ಅಖಂಡತೆಗೆ ಬಲಿದಾನಗೈದವೀರ ಯೋಧರನ್ನು ಎಂದೂ ಮರೆಯಲುಸಾಧ್ಯವಿಲ್ಲ. ರಾಷ್ಟ್ರ ರಕ್ಷಣೆಯ ಜತೆಗೆ ಪ್ರಕೃತಿವಿಕೋಪಗಳು ಉಂಟಾದ ಸಂದರ್ಭಗಳಲ್ಲೂನಾಗರಿಕರ ರಕ್ಷಣೆಗಾಗಿ ಸೈನಿಕರು ತೋರುವಸಾಹಸ ಅವಿಸ್ಮರಣೀಯ ಎಂದು ಸ್ಮರಿಸಿದರು.
ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿಸರ್ಕಾರಗಳು ಯೋಧರಿಗೆ ನೀಡಿರುವಸೌಲಭ್ಯಗಳ ಹೊರತಾಗಿಯೂ ಸೈನಿಕರಿಗೆಸ್ವಯಂಪ್ರೇರಿತವಾಗಿ ಬೆಂಬಲ, ಪುನರ್ವಸತಿಸೌಲಭ್ಯ ಮತ್ತು ಹಣಕಾಸಿನ ನೆರವು ನೀಡುವನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕಕೈಜೋಡಿಸಬೇಕಿದೆ. ಅದಕ್ಕಾಗಿ ಸಶಸ್ತ್ರ ಪಡೆಗಳಧ್ವಜ ದಿನದ ನಿಧಿ ಸಂಗ್ರಹ ಮಾಡಲಾಗುತ್ತಿದೆಎಂದು ತಿಳಿಸಿದರು.ಇದೇ ವೇಳೆ ಮಾಜಿ ಸೈನಿಕರು,ಸೈನಿಕರ ಭವನ ನಿರ್ಮಾಣಕ್ಕೆ ಜಾಗದಅವಶ್ಯಕತೆ ಇದೆ.
ಸೂಕ್ತ ಸ್ಥಳ ಗುರುತಿಸಿಅನುಕೂಲ ಮಾಡಿಕೊಡಬೇಕು ಎಂದುಜಿಲ್ಲಾಡಳಿತಕ್ಕೆ ಮಾಜಿ ಸೆ„ನಿಕರುಒತ್ತಾಯಿಸಿದರು.ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ,ಸೈನಿಕರ ಭವನಕ್ಕೆ ಜಾಗ ನೀಡುವ ಸಂಬಂಧತಹಶೀಲ್ದಾರ್ ಬಳಿ ಇರುವ ಅರ್ಜಿಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳುತ್ತೇನೆ.ಇಲಾಖೆ ಮತ್ತು ಮಾಜಿ ಸೈನಿಕರ ಬೇಡಿಕೆಈಡೇರಿಸಲು ಪ್ರಾಮಾಣಿಕ ಪ್ರಯತ್ನಮಾಡುತ್ತೇನೆ ಎಂದು ಭರವಸೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಕ್ಯಾಪ್ಟನ್ ಮಹೇಶ್ವರಪ್ಪ, ಮಾಜಿಸೈನಿಕರ ಸಂಘದ ಅಧ್ಯಕ್ಷ ಸತ್ಯನಾರಾಯಣ,ಉಪಾಧ್ಯಕ್ಷ ಕೆ. ನಾರಾಯಣ, ಕೆ. ಮೂರ್ತಿ,ಬಸವರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.