ಜಿಲ್ಲೆಯ 12 ಶಾಲೆಗಳಿಗೆ ಮಧ್ಯಪ್ರದೇಶ ಪ್ರೇರಣಾ ತಂಡ ಭೇಟಿ
Team Udayavani, Feb 29, 2020, 2:44 PM IST
ಚಿತ್ರದುರ್ಗ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗಾಗಿ ಅನುಷ್ಠಾನಗೊಂಡಿರುವ ಪ್ರೇರಣಾ ಕಾರ್ಯಕ್ರಮದ ವೀಕ್ಷಣೆಗಾಗಿ ಮಧ್ಯಪ್ರದೇಶದ ಸಮಾವೇಶ ಸೊಸೈಟಿ ಫಾರ್ ಡೆವಲಪ್‌ಮೆಂಟ್ ತಂಡದ ನಿರ್ದೇಶಕರು ಹಾಗೂ ಸದಸ್ಯರು ಫೆ. 26 ರಿಂದ 28 ರವರೆಗೆ ಜಿಲ್ಲೆಯ 12 ಶಾಲೆಗಳಿಗೆ ಪ್ರವಾಸ ಮಾಡಿ ಪ್ರೇರಣಾ ಚಟುವಟಿಕೆಗಳಾದ ಸ್ಟಾರ್ ಕಾರ್ಯಕ್ರಮ, ಸಹಪಾಠಿ ಕಲಿಕೆ, ಪ್ರೇರಣಾ ಕ್ಲಬ್, ರಚನಾತ್ಮಕ ಕಲಿಕೆ, ನನ್ನ ಕಲಿಕೆ ಪ್ರಗತಿನೋಟದ ಜತೆಗೆ ಪ್ರೇರಣಾ 2.0, 21ನೇ ಶತಮಾನದ ಕೌಶಲಗಳನ್ನು ಅಭಿವೃದ್ಧಿಪಡಿಸುವ ಪ್ರಾಯೋಗಿಕ ಕಾರ್ಯಕ್ರಮ ವೀಕ್ಷಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಕರ್ನಾಟಕ ರಾಜ್ಯಾದ್ಯಂತ 2017ನೇ ಸಾಲಿನಿಂದ ಪ್ರೇರಣಾ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ಈ ಕಾರ್ಯಕ್ರಮವು ಸರ್ಕಾರಿ ಕನ್ನಡ ಮಾಧ್ಯಮದ 4 ರಿಂದ 9ನೇ ತರಗತಿವರೆಗಿನ ಶಾಲೆಗಳಿಗೆ ಜಾರಿಯಲ್ಲಿದೆ. ಮಕ್ಕಳಲ್ಲಿ ಹಾಜರಾತಿ ಮತ್ತು ಭಾಗಹಿಸುವಿಕೆ ಹೆಚ್ಚಿಸುವುದು. ಸಹಕಾರ ಮನೋಭಾವ, ನಾಯಕತ್ವ ಗುಣ ಮತ್ತು ನಿರ್ಭಯ ವಾತಾವರಣ ಸೃಷ್ಟಿಸುವುದು. ಅಭ್ಯಾಸ ಪುಸ್ತಕಗಳ ಮೂಲಕ ಮಕ್ಕಳ ಕಲಿಕೆ ದೃಢಗೊಳಿಸಿ ಉದ್ದೇಶ ಪೂರ್ವಕ ಕಲಿಕೆಗೆ ಒತ್ತು ನೀಡುವುದು ಪ್ರೇರಣಾ ಕಾರ್ಯಕ್ರಮದ ಉದ್ದೇಶವಾಗಿದೆ.
ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳ ಅನುಷ್ಠಾನದ ವೀಕ್ಷಣೆಯ ಬಳಿಕ ಮಾತನಾಡಿದ ಸೊಸೈಟಿ ಫಾರ್ ಡೆವಲಪ್‌ಮೆಂಟ್ ನಿರ್ದೇಶಕ ಅಜಿತ್ ಸಿಂಗ್, ಪ್ರೇರಣಾ ಕಾರ್ಯಕ್ರಮದಿಂದ ಮಕ್ಕಳ ಹಾಜರಾತಿ, ಭಾಗವಹಿಸುವಿಕೆ ಹೆಚ್ಚಾಗಿರುವುದು. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ನಾಯಕತ್ವ ಗುಣ ಬೆಳೆದಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ ಭಾಗವಹಿಸುವಿಕೆ ಉತ್ತಮವಾಗಿದ್ದು, ಇದರಿಂದ ಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಮೊಳಕಾಲ್ಮೂರು ತಾಲೂಕಿನ ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಬ್ಯಾಂಕ್ ತೆರೆದಿರುವುದರಿಂದ ಮಕ್ಕಳಲ್ಲಿ ಹಣದ ಉಳಿತಾಯದ ತಿಳಿವಳಿಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕರು ಕ್ರಿಯಾಶೀಲವಾಗಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿ, ಬೋಧನಾ ಕಲಿಕಾ ಪ್ರಕ್ರಿಯೆಗೆ ಒತ್ತು ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಕಲಿಕಾ ದೃಢೀಕರಣಕ್ಕೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಫೌಂಡೇಶನ್ ತರಬೇತಿ ವ್ಯವಸ್ಥಾಪಕ ಕಿರಣ್ ಜಂಗಮ್, ಸೀನಿಯರ್ ಆಪರೇಷನ್ ಮ್ಯಾನೇಜರ್‌ಗಳಾದ ಶರಣಪ್ಪ, ಬಿ.ಎನ್. ಶಂಭುಲಿಂಗಪ್ಪ, ತಾಲೂಕು ಸಂಯೋಜಕರಾದ ಚೇತನ್, ಗುರುಪಾದ, ನಂದಿನಿ, ಶಶಿಕಾಂತ್, ಚಿಕ್ಕಣ್ಣ, ಮಾರುತಿ ಉಪಸ್ಥಿತರಿದ್ದರು.
ಸಂವಾದ ಕಾರ್ಯಕ್ರಮ: ಚಿತ್ರದುರ್ಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪ್ರೇರಣಾ ಕಾರ್ಯಕ್ರಮದ ಎರಡು ದಿನಗಳ ಶಾಲಾ ಭೇಟಿ ಸಂದರ್ಶನದ ವರದಿ ಕುರಿತು ಉಪಯೋಜನಾ ಸಮನ್ವಯಾ ಧಿಕಾರಿ ನಾಗಭೂಷಣ್, ಕ್ಷೇತ್ರ ಶಿಕ್ಷಣಾಧಿ ಕಾರಿ ಸಿದ್ದಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಈಶ್ವರಪ್ಪ, ಪ್ರೇರಣಾ ನೋಡಲ್ ಅಧಿಕಾರಿ ಲೀಲಾವತಿ, ಬಿಆರ್‌ಪಿ ಭೀಮಪ್ಪ, ಇಸಿಒ, ಸಿಆರ್‌ಪಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.