ತೋರಿಕೆ ದೇಶಭಕ್ತಿ ಸರಿಯಲ್ಲ: ಶಿಮುಶ
ಹೃದಯ ವೈಶಾಲ್ಯತೆಯಿಂದ ವ್ಯಕ್ತಿತ್ವ ವಿಕಸನ ಭೌತಿಕತೆ ವ್ಯಾಮೋಹದಿಂದ ಗುಲಾಮಗಿರಿ ಸೃಷ್ಟಿ
Team Udayavani, Jan 27, 2020, 3:29 PM IST
ಚಿತ್ರದುರ್ಗ: ರಾಷ್ಟ್ರಭಕ್ತಿ ತೋರ್ಪಡಿಕೆಯಾಗದೆ ಪ್ರತಿಯೊಬ್ಬ ನಾಗರಿಕನ ಅಂತರ್ಯದಲ್ಲೂ ಇರಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಎಸ್‌ಜೆಎಂ ಕ್ಯಾಂಪಸ್‌ನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಹೃದಯವಿದೆ. ಅದು ಉಸಿರು ಮತ್ತು ರಕ್ತ ಪರಿಚಲನೆ ಮಾಡುವ ಯಂತ್ರ ಎಂದು ಬಹುತೇಕರು ಭಾವಿಸಿದ್ದಾರೆ. ಹೃದಯದೊಳಗೂ ಒಂದು ಹೃದಯವಿದೆ. ಅದರೊಳಗೊಂದು ಬದುಕು, ಭಾವನೆ ಇದೆ. ನಾವು ಹೃದಯ ಶುದ್ಧಿಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ಹೃದಯಾಂತರಂಗದಲ್ಲಿ ರಾಗ-ದ್ವೇಷಗಳಿಗೆ ಅವಕಾಶ ನೀಡದಿರುವುದು ಶುದ್ಧೀಕರಣದ ಒಂದು ಭಾಗವಾಗಿದೆ ಎಂದರು.
ಸಂಕುಚಿತ ಹೃದಯ ವಿಕಾಸ ಆಗಿರುವುದಿಲ್ಲ. ವಿಶಾಲ ಹೃದಯಿಗಳ ಪ್ರಾಣವೇ ವಿಕಾಸ. ಹೃದಯ ವಿಕಾಸದಿಂದ ವ್ಯಕ್ತಿತ್ವ ವಿಕಾಸವಾಗುತ್ತದೆ. ವಿಕಾಸಯುಕ್ತ ಹೃದಯ ವಿಶಾಲ ಹೃದಯವಾಗಿದ್ದು, ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಮಹತ್ವ ಪಡೆದುಕೊಳ್ಳುತ್ತದೆ. ಜಾತಿ-ಮತ ಧರ್ಮದ ಬೇಲಿ ಇಲ್ಲದೆ ಎಲ್ಲರನ್ನೂ ಪ್ರೀತಿಸುವ ಔದಾರ್ಯ ಇರುತ್ತದೆ. ಇಲ್ಲಿ ಕಪಟ, ಕುಹಕ ಮತ್ತು ಕೃತ್ರಿಮತನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ಮಾನವ ಪ್ರೀತಿ ಕಡಿಮೆ ಆಗುತ್ತಿದ್ದು, ಭೌತಿಕ ಪ್ರೀತಿ ಅಧಿ ಕವಾಗಿದೆ. ಭೌತಿಕತೆಯ ಬಗೆಗಿನ ವ್ಯಾಮೋಹ ಗುಲಾಮನನ್ನಾಗಿಸುತ್ತದೆ. ವಿಶಾಲ ಹೃದಯಿಗಳು ಮಾನವೀಯ ಮಿಡಿತಗಳಿಗೆ ಆದ್ಯತೆ ನೀಡುತ್ತಾರೆ. ಸಜ್ಜನರ ಸಂಗ, ಉತ್ತಮ ಪುಸ್ತಕಗಳ ಅಧ್ಯಯನ, ಪ್ರಕೃತಿಯೊಂದಿಗಿನ ಒಡನಾಟ, ಪಕ್ಷಿ-ಪ್ರಾಣಿ ಪ್ರೀತಿ, ಧರ್ಮದ ಬಗೆಗೆ ಸರಿಯಾದ ತಿಳವಳಿಕೆಯಿಂದ ವಿಶಾಲ ಹೃದಯವನ್ನು ಹೊಂದಬಹುದು ಎಂದರು.
ಕಾರ್ಯಕ್ರಮದಲ್ಲಿ ವಿಷ್ಣುಕಾಂತ ಚಟ್ಟಪಲ್ಲಿ, ಎಸ್‌ಜೆಎಂ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ಧಿಕಾರಿ ಎಂ.ಜಿ. ದೊರೆಸ್ವಾಮಿ, ಸದಸ್ಯರಾದ ಗಾಯತ್ರಿ ಶಿವರಾಂ, ರುದ್ರಾಣಿ ಗಂಗಾಧರ, ಎಲ್.ಬಿ. ರಾಜಶೇಖರ್ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಪಿಎಚ್‌ಡಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿದವರು, ನಿವೃತ್ತ ನೌಕರರಿಗೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದವರನ್ನು ಸನ್ಮಾನಿಸಲಾಯಿತು.ರಮ್ಯ, ಮನೋಜ್ ಕುಮಾರ್, ಮುಸೇಬ್ ಸಿದ್ಧಿಕ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.