ಕೋಟೆನಾಡಿನೊಂದಿಗೆ ಚಿದಾನಂದಮೂರ್ತಿ ನಂಟು!
ಟಿಪ್ಪು ಜಯಂತಿ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದರು ಚಿಮೂ
Team Udayavani, Jan 12, 2020, 1:46 PM IST
ಚಿತ್ರದುರ್ಗ: ನಾಡಿನ ಹಿರಿಯ ಸಂಶೋಧಕ ಚಿದಾನಂದಮೂರ್ತಿ ಅವರ ಇಳಿ ವಯಸ್ಸಿನಲ್ಲೂ ಚಿತ್ರದುರ್ಗದಲ್ಲಿ ನಡೆದ ಟಿಪ್ಪು ಜಯಂತಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾದಾಗ ರಾಜ್ಯಾದ್ಯಂತ ಪ್ರತಿಭಟನೆ, ಬಂದ್ ಆಗಿದ್ದವು. ಈ ಅವಧಿಯಲ್ಲಿ ಚಿತ್ರದುರ್ಗದಲ್ಲೂ ಕೂಡಾ ಹೋರಾಟ ತೀವ್ರಗತಿಯಲ್ಲಿತ್ತು.
ಎರಡು ವರ್ಷದ ಹಿಂದೆ ಚಿತ್ರದುರ್ಗದಲ್ಲಿ ಮದಕರಿ ನಾಯಕ ಗೌರವ ಸಂರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಒನಕೆ ಚಳವಳಿಯಲ್ಲಿ ಚಿದಾನಂದಮೂರ್ತಿ ಭಾಗವಹಿಸಿ ಭಾಷಣ ಮಾಡಿದ್ದರು.
ಚಿತ್ರನಟಿ ತಾರಾ, ವಿಶ್ವಹಿಂದೂ ಪರಿಷತ್‌ನ ಗೋಪಾಲ್ ಹಾಗೂ ಡಾ.ಎಂ. ಚಿದಾನಂದಮೂರ್ತಿ ಅಂದಿನ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಭಾಗವಹಿಸಬೇಕಿತ್ತು. ಆದರೆ, ಪೊಲೀಸರು ತಾರಾ ಅವರನ್ನು ಹಿರಿಯೂರು ಬಳಿಯೇ ತಡೆದರು. ಆದರೆ, ಚಿದಾನಂದಮೂರ್ತಿ ಅವರು ಮೊದಲೇ ಆಗಮಿಸಿ ಡಾ.ಕೆ. ರಾಜೀವಲೋಚನ ಅವರ ಮನೆಯಲ್ಲಿ ಉಳಿದಿದ್ದರು. ಆನಂತರ ಪ್ರತಿಭಟನೆ ಆರಂಭವಾಗಿ ಒನಕೆ ಓಬವ್ವ ವೃತ್ತಕ್ಕೆ ಆಗಮಿಸುವ ವೇಳೆಗೆ ಆಗಮಿಸಿ ಭಾಷಣ ಮಾಡಿದ್ದರು.
ಮುರುಘಾ ಶರಣರ ಸಂತಾಪ: ಕನ್ನಡ, ಕನ್ನಡತ್ವಕ್ಕಾಗಿ ಯಾವುದೇ ಹಿಂಜರಿಕೆಯಿಲ್ಲದೆ ದಿಟ್ಟ ನಿರ್ಧಾರ ಕೈಗೊಂಡ ಅಪೂರ್ವ ಮೂರ್ತಿ ಚಿದಾನಂದಮೂರ್ತಿ ಎಂದು ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದ್ದಾರೆ.
ವಿದ್ಯಾರ್ಥಿ ದಿಸೆಯಿಂದಲೂ ಅವರಿಗೆ ನಾಡಿನ ಬಗ್ಗೆ ಅತೀವ ಕಳಕಳಿ. ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯಂತೆ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನರಚಿಸುವ ಪ್ರಯತ್ನಕ್ಕೆ ಮುಂದಾದರು. ಪ್ರಾಧ್ಯಾಪಕರಾಗಿ ಹಲವಾರು ದೇಶಗಳನ್ನು ಸುತ್ತಿ ಅಪಾರ ಅನುಭವ ಹೊಂದಿದ್ದರು.
ಸಂಶೋಧನೆ, ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಸುತ್ತಿದ್ದಾರೆ. ಭಾಷೆ, ವ್ಯಾಕರಣ ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಇತಿಹಾಸ, ಸಂಸ್ಕೃತಿ ಮೊದಲಾಗಿ ಅನೇಕ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡವರು.
ನಿರ್ದಿಷ್ಟ ಪಾಂಡಿತ್ಯ, ಸತ್ಯ, ನಿಷ್ಠೆ, ಪ್ರಖರ ಪ್ರತಿಭೆ, ವೈಚಾರಿಕ ಸಾಮರ್ಥ್ಯಕ್ಕೆ ಮತ್ತೂಂದು ಹೆಸರು ಚಿದಾನಂದಮೂರ್ತಿಯವರು. ಕನ್ನಡ-ಕರ್ನಾಟಕ ಉಳಿವಿಗೆ ಅವರು ಮಾಡಿದ ಹೋರಾಟ ಅನನ್ಯ.
ಚಿದಾನಂದ ಮೂರ್ತಿಯವರಿಗೂ ಶ್ರೀಮಠಕ್ಕೂ ಹಾಗೂ ನಮಗೂ ಅವಿನಾಭಾವ ಸಂಬಂಧವಿತ್ತು. ದಾವಣಗೆರೆ ಜಯದೇವ ವಿದ್ಯಾರ್ಥಿ ನಿಲಯದಲ್ಲಿದ್ದು ಪ್ರೌಢಶಾಲಾ ಶಿಕ್ಷಣ ಪೂರೈಸಿದ್ದರು. ಅವರಿಗೆ ಜಯದೇವಶ್ರೀ ಪ್ರಶಸ್ತಿ ನೀಡಿ ಶ್ರೀಮಠ ಗೌರವಿಸಿದೆ. ನಾಡು-ನುಡಿಗೆ ಸಂಬಂಧಿಸಿದಂತೆ ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ದೂರವಾಣಿ ಮೂಲಕ ಮತ್ತು ಖುದ್ದಾಗಿ ಚರ್ಚಿಸುತ್ತಿದ್ದೆವು.
2016 ಜನವರಿಯಲ್ಲಿ ನಡೆದ ಪೀಠಾರೋಹಣ ಬೆಳ್ಳಿಹಬ್ಬ ಸಂದರ್ಭದಲ್ಲಿ ಎಂ.ಎಂ.ಕಲಬುರ್ಗಿ ಪ್ರಧಾನ ಸಂಪಾದಕತ್ವದಲ್ಲಿ ಹೊರತಂದ ಶರಣಶ್ರೀ ಅಭಿನಂದನ ಗ್ರಂಥ, 25 ಸಂಶೋಧನಾ ಗ್ರಂಥ, ನಾನೇ ಬರೆದ 37 ಪುಸ್ತಕಗಳು ಒಟ್ಟು 63 ಪುಸ್ತಕಗಳನ್ನು ದೇಜಗೌ ಅವರೊಂದಿಗೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಬಿಡುಗಡೆ ಮಾಡಿದ್ದು, ಇತಿಹಾಸವಾಗಿ ಉಳಿದುಕೊಂಡಿದೆ.
ಇಂತಹ ಶ್ರೇಷ್ಠ ಸಂಶೋಧಕರನ್ನು ನಾಡು ಕಳೆದುಕೊಂಡಿರುವುದು ಸಾಹಿತ್ಯ ಕ್ಷೇತ್ರ ಮಾತ್ರವಲ್ಲ, ನಾಡಿಗು ತುಂಬಲಾರದ ನಷ್ಟವುಂಟಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ಅವರ ಕುಟುಂಬದವರಿಗೆ ಭರಿಸಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.