ಶಾಸನ ಇತಿಹಾಸಕ್ಕೆ ಚಿತ್ರದುರ್ಗದ ಕೊಡುಗೆ ಅಪಾರ


Team Udayavani, Jan 28, 2019, 10:04 AM IST

cta-2.jpg

ಚಿತ್ರದುರ್ಗ: ಚಿತ್ರದುರ್ಗ ಇತಿಹಾಸದಿಂದ ಕರ್ನಾಟಕ ರಾಜ್ಯದ ಶಾಸನ ಇತಿಹಾಸ ಆರಂಭವಾಯಿತು ಎಂದು ಶಾಸನ ಸಂಶೋಧಕಿ ಹುಬ್ಬಳ್ಳಿಯ ಡಾ| ಹನುಮಾಕ್ಷಿ ಗೋಗಿ ಹೇಳಿದರು.

ಇಲ್ಲಿನ ಐಎಂಎ ಹಾಲ್‌ನಲ್ಲಿ ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಇತಿಹಾಸಕ್ಕೆ ಅಣ್ಣಿಗೇರಿ ಶಾಸನಗಳ ಕೊಡುಗೆ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಜಿಲ್ಲೆಯಲ್ಲಿ ದೊರೆತ ಬ್ರಹ್ಮಗಿರಿ, ಸಿದ್ದಾಪುರ, ಜಟಂಗಿ ರಾಮೇಶ್ವರ ಶಾಸನಗಳ ಮೂಲಕ ಅಶೋಕನ ಶಾಸನದ ಲಿಖೀತ ಇತಿಹಾಸ ಆರಂಭಗೊಂಡಿತು. ಕ್ರಿಪೂ 3 ರಿಂದ ಹಿಡಿದು 20ನೇ ಶತಮಾನದವರೆಗೆ ಬೆಳೆದು ಬಂದಿರುವ ಇತಿಹಾಸದಿಂದ ಅಶೋಕ ಶಾಸನಗಳಿಗೆ ಮಹತ್ವ ಪ್ರಾಪ್ತಿಯಾಯಿತು. ಬಿ.ಎಲ್‌. ರೈಸ್‌ ಮುಂತಾದವರು ಇತಿಹಾಸ ಅಧ್ಯಯನ, ಶಾಸನ ಅಧ್ಯಯನಗಳಿಗೆ ಕೈಹಾಕಿದರು. ದೇಶಿ-ವಿದೇಶಿ ವಿದ್ವಾಂಸರ ಕಾರಣದಿಂದ ಕರ್ನಾಟಕದಾದ್ಯಂತ ಶಾಸನಗಳು ಪ್ರಕಟಗೊಂಡವು ಎಂದರು.

ಆದಿಕವಿ ಪಂಪ 1965-66 ರ ಸುಮಾರಿಗೆ ಪರಬ್ರಹ್ಮ ಶಾಸ್ತ್ರಗಳ ಕುರ್ಕಿಯಾಳ ಶಾಸನವನ್ನು ಪ್ರಕಟಿಸಿದ್ದಾರೆ. ಪಂಪ ಹುಟ್ಟಿದ ಊರು ಅಣ್ಣಿಗೇರಿ ಎಂಬ ತೀರ್ಮಾನಕ್ಕೆ ಜನ ಬಂದರೂ ಅಣ್ಣಿಗೇರಿಯಲ್ಲಿರುವ ಶಾಸನಗಳು ಪಂಪನ ಕುರಿತಾಗಿ ಏನು ದಾಖಲಿಸುತ್ತವೆ ಎನ್ನುವುದನ್ನು ನೋಡಿದರೆ ಪಂಪ ಅಣ್ಣಿಗೇರಿಯಲ್ಲಿ ಹುಟ್ಟಿಲ್ಲವೆನ್ನುವುದು ಗೊತ್ತಾಗುತ್ತದೆ. ರಾಷ್ಟ್ರಕೂಟರಿಗೆ ಸಂಬಂಧಿಸಿದ ವೀರಗಲ್ಲುಗಳು ಅಣ್ಣಿಗೇರಿಯಲ್ಲಿದೆ. ಕಲ್ಯಾಣ ಚಾಲುಕ್ಯರ ಶಾಸನಗಳು ಅಣ್ಣಿಗೇರಿಯಲ್ಲಿ ಹೆಚ್ಚು ಸಿಕ್ಕಿದೆ. ಹನ್ನೊಂದು ಶಾಸನಗಳು ಅಣ್ಣಿಗೇರಿಯಲ್ಲಿ ಸಿಗುತ್ತದೆ. ಅಚ್ಯುತದೇವರಾಯನಿಗೆ ಸಂಬಂಧಿಸಿದ ಒಂದು ಶಾಸನವೂ ಅಣ್ಣಿಗೇರಿಯಲ್ಲಿದೆ. ಗಂಗ ಪೆರುಮಾಳ್‌ ಬಸದಿ ಅಣ್ಣಿಗೇರಿಯಲ್ಲಿ ಉಳಿದಿರುವ ಏಕೈಕ ಬಸದಿ ಎಂದರು.

ಭಾರತದಲ್ಲಿ ಎಲ್ಲಾ ಧರ್ಮ ಪಂಥಗಳು ಇದೆ. ನಾಡನ್ನಾಳಿದ ಎಲ್ಲಾ ಧರ್ಮಗಳು ಅಣ್ಣಿಗೇರಿಯಲ್ಲಿ ಬರುತ್ತವೆ. ಜೈನರಿಗೆ ಸಂಬಂಧಿಸಿದ ಗುರು ಪರಂಪರೆ ಅಣ್ಣಿಗೇರಿಯಲ್ಲಿ ಸಿಗುತ್ತದೆ. ಚಂಡಿಕಾದೇವಿಯ ಆವಾಸ ಸ್ಥಾನವೂ ಇಲ್ಲಿತ್ತು. ಜೈನರು, ಶೈವರು, ಕಾಳಾಮುಖೀಗಳು ಇಲ್ಲಿದ್ದರು ಎನ್ನುವುದನ್ನು ಶಾಸನಗಳು ಹೇಳುತ್ತವೆ. ಶಿಕ್ಷಣ ಕೇಂದ್ರಗಳೂ ಇದ್ದವು ಎಂದು ತಿಳಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ| ಎನ್‌.ಎಸ್‌. ಮಹಂತೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇತಿಹಾಸ ಕೂಟದ ನಿರ್ದೇಶಕ ಪ್ರೊ| ಲಕ್ಷ್ಮಣ ತೆಲಗಾವಿ, ರೇಣುಕಾ ಶಿವಣ್ಣ, ಸಾಹಿತಿ ಡಾ| ಬಿ.ಎಲ್‌. ವೇಣು, ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಡಿ. ಗೋಪಾಲಸ್ವಾಮಿ ನಾಯಕ, ನ್ಯಾಯವಾದಿ ಅಹೋಬಲ ನಾಯಕ, ರಾಜಾ ಮದಕರಿ ನಾಯಕ, ಕೆ. ನಾಗರಾಜ್‌, ಎಸ್‌.ಆರ್‌. ಗುರುನಾಥ್‌, ಮೃತ್ಯುಂಜಯ ಭಾಗವಹಿಸಿದ್ದರು. ಟಿ. ಶ್ರೀಕಾಂತಬಾಬು ನಿರೂಪಿಸಿದರು.

ತಮಿಳುನಾಡಿನಲ್ಲಿ ಅತಿ ಹೆಚ್ಚು ಶಾಸನ ಪತ್ತೆ
ಭಾರತದಲ್ಲಿ ತಮಿಳುನಾಡು ರಾಜ್ಯದಲ್ಲಿ ಅತಿ ಹೆಚ್ಚು 35 ರಿಂದ 40 ಸಾವಿರ ಶಾಸನಗಳು ಪತ್ತೆಯಾಗಿದೆ. ಎರಡನೇ ಸ್ಥಾನ ಕರ್ನಾಟಕಕ್ಕಿದ್ದು 25 ಸಾವಿರ ಶಾಸನಗಳು ಪತ್ತೆಯಾಗಿದೆ. ಆದರೂ ಶಾಸನಗಳ ಓದುವಿಕೆ ಆಗುತ್ತಿಲ್ಲ. ತುಂಗಭದ್ರೆಯ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಂಶೋಧನೆಗಳನ್ನು ನಡೆಸಿರುವ ಬಿ.ಎಲ್‌. ರೈಸ್‌ ಎಂಟು ಸಾವಿರ ಶಾಸನಗಳನ್ನು ಪತ್ತೆ ಹಚ್ಚಿ ತೆಗೆದು ಓದಿದ್ದಾರೆ. ತುಂಗಭದ್ರೆಯ ಉತ್ತರ ಜಿಲ್ಲೆಗಳಲ್ಲಿ ವ್ಯವಸ್ಥಿತ ಕ್ಷೇತ್ರ ಕಾರ್ಯ ನಡೆಯಲಿಲ್ಲ. ಉತ್ತರ ಕರ್ನಾಟಕದ ಕ್ಷೇತ್ರ ಕಾರ್ಯ ನಡೆಯದ ಕಾರಣ ಹಲವಾರು ಶಾಸನಗಳಿಗೆ ಇನ್ನೂ ಮುಕ್ತಿ ದೊರಕಿಲ್ಲ ಎಂದು ಗೋಗಿ ಬೇಸರ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

KJ-Goerge

ತೋಟದ ಮನೆಗಳಿಗೆ ಹಗಲು ತ್ರಿಫೇಸ್‌, ರಾತ್ರಿ ಸಿಂಗಲ್‌ ಫೇಸ್‌ ವಿದ್ಯುತ್‌: ಸಚಿವ ಜಾರ್ಜ್‌

K-J-George

ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.