ಗ್ಯಾರಂಟಿ ಭರವಸೆ ಈಡೇರಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲ: ವಿಜಯೇಂದ್ರ
Team Udayavani, Jul 16, 2023, 6:21 PM IST
ಹೊಳಲ್ಕೆರೆ : ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಗ್ಯಾರಂಟಿ ಭರವಸೆ ನಂಬಿ ಮತಹಾಕಿದ್ದ ಜನರ ಕಿವಿ ಮೇಲೆ ಹೂವಿಟ್ಟು ಅಂತೆ ಕಂತೆಗಳ ಕಂಡಿಷನ್ ಪುರಾಣ ಹೇಳುತ್ತ ಕಾಲಹರಣ ಮಾಡುತ್ತಿದೆ. ಸರಕಾರ ತಕ್ಷಣವೇ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಬೇಕೆಂದು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಅವರು ಪಟ್ಟಣದಲ್ಲಿ ತಾಲೂಕು ವೀರಶೈವ ಲಿಂಗಾಯ್ತಿ ಸಮಾಜ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿರು.
ಕಾಂಗ್ರೆಸ್ ಸರಕಾರಕ್ಕೆ ಭವಿಷ್ಯವಿಲ್ಲ. ದೇಶದಲ್ಲಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸರಕಾರ ದೇಶವನ್ನು ಸುಭ್ರವಾಗಿ ಕಟ್ಟದೆ ಪ್ರಜೆಗಳಿಗೆ ಸ್ವಶಕ್ತರನ್ನಾಗಿ ಮಾಡದೆ ಪುಕ್ಕಟ್ಟೆ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಬಡತನ ನಿರ್ಮೂಲನೆ ಆಗಿಲ್ಲ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ದೇಶದ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಸರಕಾರ 200 ಯುನಿಟ್ ವಿದ್ಯುತ್ ಗ್ಯಾರಂಟಿಗೆ ಕಂಡಿಷನ್ ಹಾಕಿದೆ. ಉಚಿತ ಬಸ್ ಪ್ರಯಾಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳಿಲ್ಲ. ವಿದ್ಯಾವಂತರಿಗೆ ಉದ್ಯೋಗ ಭತ್ಯೆ ನೀಡುತ್ತಿಲ್ಲ. ಮಹಿಳೆಯರಿಗೆ 2 ಸಾವಿರ ಹಣ ನೀಡುವ ಭರವಸೆ ಇನ್ನು ಕನಸಾಗಿದೆ. ಜನರಿಗೆ ಸುಳ್ಳು ಹೇಳಿಕೊಂಡು ಅಧಿಕಾರ ಬಂದಿದೆ. ಜನರ ಪರ ಸರಕಾರವಾಗಿ ರೂಪಗೊಳ್ಳುವ ಮೊದಲೆ ಜನರವಿರೋಧಿ ನೀತಿಗಳಿಂದ ಜನರು ಬೇಸತ್ತಿದ್ದಾರೆ ಎಂದರು.
ಕುತಂತ್ರದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ, ದೇಶದ ಹಿತದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವ ಸರಕಾರ ಅಧಿಕಾರಕ್ಕೆ ಬರಬೇಕು. 25 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು. ಜಾಗತೀಕ ಮಟ್ಟದಲ್ಲಿ ಇನ್ನೋಷ್ಟು ಎತ್ತರಕ್ಕೆ ದೇಶವನ್ನು ಬೆಳೆಸಲು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕೆಂದರು.
ಬಿಎಸ್‌ಯಡಿಯೂರಪ್ಪ 40 ವರ್ಷಗಳ ಸತತ ಹೋರಾಟದ ಮೂಲಕ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ರೈತರಿಗೆ, ದಲಿತರಿಗೆ ಹಿಂದುಳಿದವರಿಗೆ ಅನ್ಯಾಯ ಅಗದಂತೆ ಎಲ್ಲಾ ವರ್ಗಗಳನ್ನು ಜತೆಯಟ್ಟಿಕೊಂಡು ಧರಣಿ, ಪ್ರತಿಭಟನೆ, ಚಳುವಳಿಗಳನ್ನು ನಡೆಸಿದ ನ್ಯಾಯ ಕಲ್ಪಿಸಿದ್ದಾರೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಅದೆ ಮಾದರಿಯಲ್ಲಿ ನಾನು ಸಹ ರಾಜ್ಯದಲ್ಲಿ ಪಕ್ಷವನ್ನು ಕಟ್ಟಲು ಹೋರಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಪಕ್ಷದವನ್ನು ಬಲಿಷ್ಟವಾಗಿ ಸಂಘಟಿಸಲು ಶ್ರಮಿಸುತ್ತೇನೆಂದರು.
ವೀರಶೈವ ಲಿಂಗಾಯ್ತಿ ಸಮುದಾಯ ರಾಜ್ಯದಲ್ಲಿ ಬಲಿಷ್ಠವಾಗಿದೆ. ಎಲ್ಲಾ ಸಹೋದರ ಸಮುದಾಯಗಳಿಗೆ ನ್ಯಾಯ ಕಲ್ಪಿಸಿದೆ. ಎಲ್ಲಾ ಒಳಪಂಗಡಗಳು ಜತೆಯಲ್ಲಿದ್ದು ಸಮುದಾಯವನ್ನು ಬೆಳೆಸುವ ಕೆಲಸ ಮಾಡಬೇಕೆಂದರು.
ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ರಾಜಹುಲಿ ಎನ್ನುವಂತೆ ಮಗ ಬಿ.ವೈ. ವಿಜಯೇಂದ್ರ ಸಹಾ ರಾಜಹುಲಿ ಇದ್ದಂತೆ. ಮುಂದಿನ ಬಿಜೆಪಿ ಶಕ್ತಿಯುತ್ತ ನಾಯಕ. ಬಿ.ಎಸ್.ಯುಡಿಯೂರಪ್ಪ ಹಾದಿಯಲ್ಲಿ ಸಾಗುತ್ತಿರುವ ವಿಜಯೇಂದ್ರ ರಾಜ್ಯ ಉತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ.
ರಾಜ್ಯದಲ್ಲಿ ಹೊಸ ಶಕ್ತಿಯನ್ನು ಹುಟ್ಟಿಹಾಕುತ್ತಿದ್ದಾರೆ. ಅದೆ ರೀತಿಯಲ್ಲಿ ಶಾಸಕ ಎಂ.ಚಅದ್ರಪ್ಪನ ಮಗ ಎಂ.ಸಿ.ರಘುಚಂದ್ರನ್ ಸಹಾ ಉತ್ತಮ ರಾಜಕೀಯ ನಾಯಕನಾಗಿ ಬೆಳೆದಿದ್ದಾರೆ. ಯುವಕರನ್ನು ಸಂಘಟಿಸುವ ಚತುರ ರಾಜಕಾರಣಿ. ಯುವಕರ ಐಕಾನ್ ಎನ್ನುವ ಬೀರುದು ಪಡೆದುಕೊಂಡಿದ್ದಾರೆ.
ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವರಿಗೆ ಅವಕಾಶ ನೀಡಬೇಕು. ಯುವ ನಾಯಕರು ಲೋಕಸಭೆಗೆ ಹೊಗಬೇಕು. ಪಕ್ಷಕ್ಕೆ ರಘುಚಂದನ್ ಸಂಘಟನಾ ಚುತುರ ರಾಜಕಾರಣಿಗಳು ಬೇಕಿದೆ ಎಂದರು.
ಶಾಸಕ ಎಂ.ಚಅದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಜನರ ಆರ್ಶಿವಾದದಿಂದ ಕ್ಷೇತ್ರದಲ್ಲಿ ಮೂರು ಭಾರಿ ಶಾಸಕನಾಗಿದ್ದೇನೆ. ಜನರ ವೃಣ ತೀರಿಸಲು, ಜನರ ಜತೆ ಇದ್ದು, ಜನ ಪರ ಕೆಲಸ ಕೈಗೊಳ್ಳುವ ಸೇವಕನಾಗಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುತ್ತೇನೆ. ಜನರ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸದೆ ಕ್ಷೇತ್ರವನ್ನು ಸಂಪೂರ್ಣವಾಗಿ ಆಭಿವೃದ್ಧಿಗೊಳಿಸಿ ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಹೋರಾಟ ನಡೆಸುತ್ತೇನೆಂದರು.
ಮಾಜಿ ಶಾಸಕ ಜಿ.ಸಿ.ಮಂಜುನಾಥ, ಹೊಸದುರ್ಗದ ಲಿಂಗಮೂರ್ತಿ, ಯುವ ಮುಖಂಡರಾದ ರಘುಚಂದನ್, ಅನಿಲ್ ಕುಮಾರ್, ಶಾಸಕರ ಧರ್ಮಪತ್ನಿ ಚಂದ್ರಕಲಾಚಂದ್ರಪ್ಪ, ಸಂಸದರ ಧರ್ಮಪತ್ನಿ ಗಾಯತ್ರಿ ಸಿದ್ದೇಶ್, ಜಿ.ಪಂ.ಸದಸ್ಯರಾದ ಸುಮಾಲಿಂಗರಾಜ್, ಮಹೇಶ್, ಎಸ್.ಮಾರುತೇಶ್, ನುಲೆನೂರು ಈಶ್ವರಪ್ಪ, ಕುಡಿನೀರುಕಟ್ಟೆ ಪ್ರವೀಣ್, ನಾಗರಾಜ್ ಬಂಗಿ, ಕೆ.ಆರ್.ರಾಜಪ್ಪ, ಬಂಗಿ ಲೋಕೇಶ್, ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೆ ಸಮಯದಲ್ಲಿ ವಿವಿಧ ಸಂಘಟನೆಗಳು ಶಾಸಕ ಬಿ.ವೈ.ವಿಜಯೇಂದ್ರ, ಶಾಸಕ ಎಂ.ಚಂದ್ರಪ್ಪ, ಅನಿಲ್ ಕುಮಾರ್, ರಘುಚಂದ್ರನ್ ಇವರಿಗೆ ಸನ್ಮಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.