ಉದ್ಯಮಿಗಳ ಮೇಲಿನ ಪ್ರೀತಿ ಜನರ ಮೇಲೆ ಏಕಿಲ್ಲ? ಸರಕಾರಗಳ ವಿರುದ್ಧ ರಾಹುಲ್ ಕಿಡಿ
Team Udayavani, Oct 11, 2022, 11:35 PM IST
ಚಿತ್ರದುರ್ಗ: ಬಡವರು, ರೈತರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವುದನ್ನು ಬಿಟ್ಟು ಬಿಜೆಪಿ ಸರಕಾರ ಕೆಲವೇ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಚಳ್ಳಕೆರೆ ಹೊರವಲಯದ ಸಿದ್ದಾಪುರ ಬಳಿ ಭಾರತ್ ಜೋಡೋ’ ಯಾತ್ರೆಯ 12ನೇ ದಿನದ ಪಾದಯಾತ್ರೆ ಮುಗಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯುದ್ದಕ್ಕೂ ರೈತರು, ಮಹಿಳೆಯರು, ಕಾರ್ಮಿಕರು, ವೃದ್ಧರು ಸೇರಿ ಸಾಕಷ್ಟು ಜನರ ಜತೆ ಮಾತನಾಡುತ್ತಾ ಬಂದಿದ್ದೇನೆ. ಯಾರೂ ಖುಷಿಯಾಗಿಲ್ಲ. ರೈತರು ಎರಡು ಬಂಡೆಗಳ ನಡುವೆ ಸಿಲುಕಿದಂತಾಗಿದ್ದಾರೆ. ಒಂದು ಕಡೆ ಗೊಬ್ಬರ, ಕೃಷಿ ಪರಿಕರಗಳ ಖರೀದಿ ಗೆ ಜಿಎಸ್‌ಟಿ ವಿ ಧಿಸಿದ್ದಾರೆ. ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ.
ರಾಜ್ಯದ ಒಬ್ಬನೇ ಒಬ್ಬ ರೈತ ಕೃಷಿಯಿಂದ ಲಾಭ ಬರುತ್ತಿದೆ ಎಂದು ಹೇಳಿಲ್ಲ. ಹಾಕಿದ ಬಂಡವಾಳ ವಾಪಸ್ ಬಾರದ ಸ್ಥಿತಿಯಲ್ಲಿದ್ದಾರೆ. ಇಡೀ ಕುಟುಂಬ ಸೇರಿ ಕೆಲಸ ಮಾಡುತ್ತಾರೆ, ಆದರೂ ಸಂಕಷ್ಟ ತಪ್ಪಿಲ್ಲ ಎಂದು ರೈತ ಸಮುದಾಯದ ಕಷ್ಟ-ನಷ್ಟಗಳ ಕುರಿತು ಪ್ರಸ್ತಾವಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರಿದ್ದರು.
ಬರಿಗಾಲಲ್ಲಿ ಹೆಜ್ಜೆ ಹಾಕಿದ ಚಾಂಡಿ ಉಮನ್
ಕೇರಳ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಅವರ ಪುತ್ರ ಚಾಂಡಿ ಉಮನ್ ಭಾರತ್ ಜೋಡೋ ಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಗಮನ ಸೆಳೆದರು. ಕನ್ಯಾಕುಮಾರಿಯಿಂದ ಬರಿಗಾಲಿನಲ್ಲಿ ನಡೆಯುತ್ತಿದ್ದೇನೆ. ಈ ಯಾತ್ರೆ ಮೂಲಕ ದೇಶದ ಸಮಗ್ರತೆ ಹಾಗೂ ಐಕ್ಯತೆಯ ಸಂದೇಶ ಸಾರಲಾಗುತ್ತಿದೆ. ಸಹೋದರತ್ವ, ಸಮಾನತೆ ಸಾರುವ ಕೆಲಸ ಮಾಡಲಾಗುತ್ತಿದೆ ಎಂದರು.
“ಭಾರತ್ ಜೋಡೋ’ದಲ್ಲಿ ಮಕ್ಕಳ ದುರ್ಬಳಕೆ ಆಗಿಲ್ಲ
ಚಿತ್ರದುರ್ಗ: ಭಾರತ್ ಜೋಡೋ’ ಯಾತ್ರೆಯಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ದೂರು ದಾಖಲಿಸಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದಿಂದ 50 ಪುಟಗಳ ಉತ್ತರ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಲಿನ ಬರವಣಿಗೆಗೆ ರಾಹುಲ್ ಅಚ್ಚರಿ
ಮಂಗಳವಾರ ಮಧ್ಯಾಹ್ನ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಕಿ ಮಹಾಲಕ್ಷ್ಮೀ ಅವರು ಕಾಲಿನ ಬೆರಳುಗಳ ಸಹಾಯದಿಂದ ಬರವಣಿಗೆ ಮಾಡಿದ್ದನ್ನು ಕಂಡು ರಾಹುಲ್ ಗಾಂ ಧಿ ತಮ್ಮ ಭಾಷಣದಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಎರಡೂ ಕೈ ಇಲ್ಲದ ಮಹಿಳೆಯನ್ನು ನಾನು ಭೇಟಿಯಾದಾಗ ಇವರು ಬಟ್ಟೆ ಹೇಗೆ ಧರಿಸುತ್ತಾರೆ, ಶೂಗಳನ್ನು ಹೇಗೆ ಹಾಕಿಕೊಳ್ಳುತ್ತಾರೆ, ಜೀವನ ನಿರ್ವಹಣೆ ಹೇಗೆ ಎಂಬ ಆಲೋಚನೆ ಬಂದಿತ್ತು. ಮರುಕ್ಷಣ ಅವರೊಬ್ಬ ಶಿಕ್ಷಕಿ ಎಂಬ ವಿಚಾರ ತಿಳಿಯಿತು, ಆಗ ಅವರು ಹೇಗೆ ಪರೀಕ್ಷೆ ಬರೆದರು, ಯಾರಾದರೂ ಸಹಾಯ ಮಾಡಿದರಾ ಎಂದು ಪ್ರಶ್ನಿಸಿದೆ. ತಕ್ಷಣ ಕಾಲಿನ ಬೆರಳುಗಳಲ್ಲಿ ಪೆನ್ನು ಹಿಡಿದು ಸುಂದರವಾದ ಅಕ್ಷರಗಳನ್ನು ಬರೆದರು.
ಕಾಲಿನಿಂದ ಬರೆಯಲು ಬಹಳ ಕಷ್ಟವಾಗಬಹುದು ಅಲ್ವಾ, ಈ ಕಾರಣಕ್ಕೆ ಪರೀಕ್ಷೆಯಲ್ಲಿ ಹೆಚ್ಚು ಸಮಯ ಕೊಟ್ಟಿರಬಹುದಾ, ಅಂಕಗಳನ್ನು ಹೆಚ್ಚು ಕೊಟ್ಟಿರಬಹುದಾ ಎಂದರೆ ಅಂಥದ್ದೇನೂ ಇಲ್ಲ. ನಮಗೆ ಇದ್ಯಾವುದು ಬೇಕಿಲ್ಲ. ನನ್ನಲ್ಲಿ ಸಾಮರ್ಥ್ಯ ಇದೆ ಎಂದು ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.