ಸಮಾನ ಕಾನೂನು-ನ್ಯಾಯ ಕಲ್ಪಿಸಿದ ಸಂವಿಧಾನ
Team Udayavani, Nov 27, 2021, 1:54 PM IST
ಚಿತ್ರದುರ್ಗ: ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳ ಆಧಾರದ ಮೇಲೆ ಭಾರತದ ಸಂವಿಧಾನ ರಚನೆಯಾಗಿದೆ ಎಂದು ಗೌತಮಬುದ್ಧ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಗೌತಮ ಬುದ್ಧ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕಾಗಿ ಬಾಬಾ ಸಾಹೇಬ್ ಅವರು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ನಿರಂತರವಾಗಿ ಶ್ರಮಿಸಿ ಸಮಸಮಾಜದ ಪರಿಕಲ್ಪನೆಯಿಂದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಡಿ ಸಂವಿಧಾನ ರಚಿಸಿ, 1949 ನ.26ರಂದು ಈ ದೇಶಕ್ಕೆ ಸಂವಿಧಾನ ಸಮರ್ಪಿಸಿದ ದಿನ ಎಂದರು.
ಸಂವಿಧಾನದ ವಿಶೇಷ ಲಕ್ಷಣ ಎಂದರೆ ನಮ್ಮ ರಾಷ್ಟ್ರಕ್ಕೆ ಭಾರತ ಎಂದರೆ “ಇಂಡಿಯಾ’ ಎಂಬ ಶಾಶ್ವತ ಹೆಸರನ್ನು ಕೊಟ್ಟಿರುವುದು. ಸಂವಿಧಾನದಲ್ಲಿ ಭಾರತಕ್ಕಿದ್ದ ಹಿಂದೂಸ್ಥಾನ, ಆರ್ಯಾವರ್ತ ಅಥವಾ ಜಂಬುದ್ವೀಪ ಹೆಸರಗಳನ್ನು ತಿರಸ್ಕರಿಸಲಾಗಿದೆ. ಭಾರತ ಎಂದರೆ ರಕ್ಷಕ ಅಥವಾ ಸತ್ಯದ ಪಾಲಕ ಎಂಬ ಅರ್ಥ ಸೂಚಿಸುತ್ತದೆ. ಇದು ಯಾವುದೇ ವ್ಯಕ್ತಿಯ ಹೆಸರನ್ನು ಸೂಚಿಸದೇ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದು ಅಂಬೇಡ್ಕರ್ ಸಂಸತ್‌ಗೆ ಹೇಳಿದ್ದರು ಎಂದು ಸ್ಮರಿಸಿದರು.
ಬಾಬಾ ಸಾಹೇಬರು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಂಬೇಡ್ಕರ್ ವಿರೋ ಧಿಯಾಗಿದ್ದರೂ ಸರ್ದರ್‌ವಲ್ಲಬಾಯಿ ಪಟೇಲ್‌ರವರು ಕಾಂಗ್ರೆಸ್‌ನಲ್ಲಾಗಲಿ ಅಥವಾ ಇಡೀ ದೇಶದಲ್ಲದಾಗಲಿ ಸಂವಿಧಾನ ಕರಡು ರಚನೆಗೆ ಬಾಬಾ ಸಾಹೇಬ್ ರವರಿಗಿಂತ ಉತ್ತಮ ವ್ಯಕ್ತಿ ಕಾಣಸಿಗಲಿಲ್ಲ ಎಂದಿದ್ದರು. ಸಂವಿಧಾನವು ಚಾಲ್ತಿಯಾದ ಮೇಲೆ ಎಲ್ಲ ಶಾಸ್ತ್ರ, ವೇದಾ ಮತ್ತು ಪುರಾಣಗಳು ಹಿಂದೂ ಸಮಾಜದ ಮೇಲಿನ ಪ್ರಭಾವ ಕಳೆದುಕೊಂಡವು. ಇಸ್ಲಾಂ ಮತ್ತು ಕ್ರೈಸ್ತ್ ಕಾನೂನುಗಳು ತಮ್ಮ ಮೌಲ್ಯ ಕಳೆದುಕೊಂಡವು. ದೇಶದ ಆಡಳಿತವು ಸಂವಿಧಾನದ ಮೂಲ ಹಕ್ಕುಗಳಿಗನುಸಾರ ಜಾತಿ-ಮತ, ತತ್ವಗಳ ವ್ಯತ್ಯಾಸವಿಲ್ಲದೇ ಸರ್ವರಿಗೂ ಸಮಾನ ಕಾನೂನು ಮತ್ತು ನ್ಯಾಯದ ಭರವಸೆ ನೀಡಿತು. ಗೌತಮಬುದ್ಧ ಪ್ರತಿಷ್ಠಾನದ ಕಾರ್ಯದರ್ಶಿ ನ್ಯಾಯವಾದಿ ಬೆನಕನಹಳ್ಳಿ ಚಂದ್ರಪ್ಪ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ನ್ಯಾಯವಾದಿಗಳಾದ ಬೀಸನಹಳ್ಳಿ ಜಯಪ್ಪನವರು ನಾಗರಿಕ ಸಮಾಜದ ಉಳಿವಿಗಾಗಿ ಯಾವುದೇ ಬೆಲೆಯನ್ನಾದರೂ ತೆತ್ತು ಸಂವಿಧಾನವನ್ನು ರಕ್ಷಿಸಬೇಕಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ, ಉಪಪ್ರಾಚಾರ್ಯ ಬಾಲೇನಹಳ್ಳಿ ರಾಮಣ್ಣ, ತಾಪಂ ಮಾಜಿ ಅಧ್ಯಕ್ಷ ತಿರುಂಪುರ ಪೆನ್ನಪ್ಪ, ವಕೀಲರಾದ ಬಿ.ಕೆ. ರಹಮತ್‌ವುಲ್ಲಾ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.