ಉಪ್ಪಾರ ಭವನ-ರಸ್ತೆ ನಿರ್ಮಾಣಕ್ಕೆ ಸಹಕರಿಸುವೆ
Team Udayavani, Nov 23, 2020, 8:56 PM IST
ಹಿರಿಯೂರು: ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ತಾಲೂಕು ಉಪ್ಪಾರ ಭವನ ರಸ್ತೆ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಈ ಸಮಸ್ಯೆಬಗೆಹರಿಸಿ ರಸ್ತೆ ನಿರ್ಮಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಬಿಜೆಪಿ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತ್ ಭರವಸೆ ನೀಡಿದರು.
ನಗರದ ವೇದಾವತಿ ಬಡಾವಣೆಯಲ್ಲಿರುವ ತಾಲೂಕು ಉಪ್ಪಾರ ಸಮುದಾಯ ಭವನದಲ್ಲಿಉಪ್ಪಾರ ಸಮುದಾಯದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದವರ ಪ್ರಮುಖಬೇಡಿಕೆಗಳಾದ ರಸ್ತೆ ನಿರ್ಮಾಣ, ರಾಜಕೀಯ ಪ್ರಾತಿನಿಧ್ಯತೆ, ಭಗೀರಥ ಪ್ರತಿಮೆ ನಿರ್ಮಾಣ ಮುಂತಾದವುಗಳ ಈಡೇರಿಕೆಗೆ ಸಂಪೂರ್ಣ ಸಹಕಾರನೀಡುತ್ತೇನೆ. ಜತೆಗೆ ಅವರ ಸಮಸ್ಯೆಗಳಿಗೆ ಸದಾಕಾಲಸ್ಪಂದಿಸುತ್ತೇನೆ. ಭವನಕ್ಕೆ ಸುಮಾರು ಐದು ನೂರುಚೇರ್‌ಗಳನ್ನು ದಾನವಾಗಿ ನೀಡುತ್ತೇನೆ ಎಂದರು.
ಏಷ್ಯಾದಲ್ಲಿಯೇ ಪ್ರಸಿದ್ಧಿ ಪಡೆದಿದ್ದ ವಾಣಿ ಸಕ್ಕರೆ ಕಾರ್ಖಾನೆ ನನೆಗುದಿಗೆ ಬಿದ್ದಿದ್ದು, ಸರಕಾರಹಾಗೂ ಜನಪ್ರತಿನಿಧಿ ಗಳು ಇಚ್ಛಾಶಕ್ತಿ ತೋರಿದ್ದಲ್ಲಿ, ಪುನಶ್ಚೇತನಗೊಳಿಸುವ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡುವುದರ ಜತೆಗೆ ರೈತರಿಗೆ ಅನುಕೂಲಆಗುತ್ತದೆ. ಸಮೃದ್ಧಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದರು. ತಾಲೂಕು ಉಪ್ಪಾರಸಮುದಾಯ ಅಧ್ಯಕ್ಷ ರಾಮಣ್ಣ, ಉಪಾಧ್ಯಕ್ಷ ಮಸ್ಕಲ್‌ವಿ.ಎಲ್.ಗೌಡ್ರು ಸಮುದಾಯದವರ ಸಮಸ್ಯೆಗಳ ಮಾಹಿತಿ ತಿಳಿಸಿದರು. ನಗರಸಭೆ ಸದಸ್ಯ ಚಿತ್ರಜಿತ್‌ಯಾದವ್, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್,ಟ್ರಸ್ಟ್ ಅಧ್ಯಕ್ಷ ನೀಲಕಂಠಪ್ಪ, ಸಂಘದ ಪ್ರಧಾನಕಾರ್ಯದರ್ಶಿ ಹಳದಪ್ಪ, ಯುವ ಮುಖಂಡರಾದಕನಕದಾಸ್, ನಿಂಗರಾಜ್, ಕೆ.ತಿಪ್ಪೇಸ್ವಾಮಿ, ಕರಿಯಪ್ಪ, ಏಕಾಂತ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.