ಹೊರಗಿನಿಂದ ಬಂದವರೇ ಸೋಂಕು ವಾಹಕರು!
Team Udayavani, May 8, 2021, 4:38 PM IST
ಚಿತ್ರದುರ್ಗ: ಕೋವಿಡ್ ಎರಡನೇ ಅಲೆ ಕಂಟಕ ಹಳ್ಳಿಗಳಿಗೆ ಸಂಕಷ್ಟ ತಂದೊಡ್ಡಿದೆ. ನಗರ ಪ್ರದೇಶಗಳಲ್ಲಿ ಸಹಜವಾಗಿ ಸಾಮಾಜಿಕ ಅಂತರ, ಖರೀ ದಿಮತ್ತಿತರೆ ಕಾರಣಗಳಿಗೆ ಸೋಂಕು ತಗುಲಿದರೆ, ಹಳ್ಳಿಗಳಿಗೆ ಹೊರಗಿನಿಂದ ಬಂದವರೇ ಸೋಂಕು ವಾಹಕರಾಗಿದ್ದಾರೆ!
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಸಹಜವಾಗಿ ಏರಿಕೆಯಾಗಿತ್ತು. ಇದೇ ವೇಳೆ ರಾಜ್ಯ ಸರ್ಕಾರ ಕೋವಿಡ್ ಕರ್ಫ್ಯೂ ಜಾರಿ ಮಾಡಿದ್ದರಿಂದ ಬೇರೆಡೆಯಿಂದ ವಲಸೆ ಹೋಗಿದ್ದವರು ಹಳ್ಳಿಗಳಿಗೆವಾಪಾಸಾಗಿದ್ದಾರೆ. ಬೆಂಗಳೂರು ಮತ್ತಿತರೆಡೆಗಳಿಂದ ಜಿಲ್ಲೆಗೆ ವಲಸೆ ಬಂದವರ ಪ್ರಾಥಮಿಕ ಅಂಕಿ ಅಂಶಆರೋಗ್ಯ ಇಲಾಖೆಗೆ ಲಭ್ಯವಾಗಿದ್ದು, 2718 ಮಂದಿ ಹಳ್ಳಿಗಳಿಗೆ ಮರಳಿದ್ದಾರೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹೊರಗಿನಿಂದ ಬಂದವರ ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯ ಸಿಕ್ಕಿರುವ ಮಾಹಿತಿ ಆಧರಿಸಿ ಹೊರಗಿನಿಂದ ಬಂದವರಿಗೆ ಕೋವಿಡ್ ಪರೀಕ್ಷೆ ಮಾಡಿಸುವ ಕೆಲಸ ಮಾಡುತ್ತಿದ್ದು, ಪರೀಕ್ಷೆ ಮುಗಿಯುವವರೆಗೆ ಹೊರಗಿನಿಂದ ಬಂದವರು ಮನೆಯಲ್ಲೇ ಪ್ರತ್ಯೇಕವಾಗಿರಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆಶಾ ಕಾರ್ಯಕರ್ತೆಯರ ಮೂಲಕ ವಲಸಿಗರ ಮಾಹಿತಿ ಪಡೆದು ಅವರ ಗಂಟಲು ದ್ರವಪರೀಕ್ಷೆಗೆ ಕಳಿಸುವ ಕೆಲಸ ಎಲ್ಲಾ ತಾಲೂಕುಗಳಲ್ಲಿ ಭರದಿಂದ ಸಾಗುತ್ತಿದೆ.
ಪರೀಕ್ಷೆ ವಿಳಂಬದ ಆತಂಕ: ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ. ಜಿಲ್ಲಾ ಕೇಂದ್ರದಲ್ಲಿರುವ ಆರ್‌ಟಿಪಿಸಿಆರ್ ಸೇರಿದಂತೆತಾಲೂಕು ಕೇಂದ್ರಗಳ ಲ್ಯಾಬ್‌ಗಳಿಂದ ಪ್ರತಿ ದಿನ ಎರಡು ಸಾವಿರಕ್ಕೂಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ.ಆದರೆ ಈ ಪರೀಕ್ಷೆಯ ಫಲಿತಾಂಶ ಬರುವುದು ಸಾಕಷ್ಟು ವಿಳಂಬವಾಗುತ್ತಿದೆ.
ಟೆಸ್ಟ್ ರಿಪೋರ್ಟ್ ಬರುವುದು ಕನಿಷ್ಟ 3 ರಿಂದ 4 ದಿನ ತಡವಾಗುತ್ತಿದೆ. ಇದರಿಂದ ಗಂಟಲು ದ್ರವ ಪರೀಕ್ಷೆಗೆ ಕೊಟ್ಟವರು ಅದರ ರಿಸಲ್ಟ್ ಬರುವವರೆಗೆ ಸಾರ್ವಜನಿಕವಾಗಿ, ಮನೆಯಲ್ಲಿ ಎಲ್ಲರ ಜೊತೆ ಬೆರೆತರೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಆ್ಯಂಟಿಜನ್ ಟೆಸ್ಟ್ ವರದಿ ಮೇಲೆ ವಿಶ್ವಾಸ ಕಡಿಮೆಯಾಗಿದ್ದರಿಂದ ಎಲ್ಲಾ ಕಡೆಗಳಲ್ಲೂ ಆರ್‌ಟಿಪಿಸಿಆರ್ ಮೊರೆ ಹೋಗಲಾಗಿದೆ.
ಇದರಲ್ಲೂ ಫಲಿತಾಂಶ ಸರಿಯಾಗಿ ಬಾರದಿದ್ದರೆ ಸಿ.ಟಿ. ಸ್ಕ್ಯಾನ್ ಮಾಡುವುದು ಸದ್ಯ ಇರುವ ಪದ್ಧತಿ. ಜಿಲ್ಲಾಸ್ಪತ್ರೆಯಲ್ಲಿರುವ ಸಿ.ಟಿ ಸ್ಕ್ಯಾನ್‌ನಲ್ಲಿ ಪ್ರತಿ ದಿನ 100ಕ್ಕೂ ಹೆಚ್ಚು ಸ್ಕ್ಯಾನಿಂಗ್ ಮಾಡಲಾಗುತ್ತಿದೆ.ಈ ನಿಟ್ಟಿನಲ್ಲಿ ಲ್ಯಾಬ್‌ಗಳ ಸಂಖ್ಯೆ ಹೆಚ್ಚಿಸಲುಸಂಸದರು, ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳುಹಾಗೂ ಶಾಸಕರು ಆರೋಗ್ಯ ಇಲಾಖೆ, ಜಿಲ್ಲಾಡಳಿತದಮೇಲೆ ಒತ್ತಡ ಹಾಕುತ್ತಿದ್ದಾರೆ. ವಿಳಂಬವಾದಷ್ಟು ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ ಎನ್ನುವುದು ಎಲ್ಲರ ಆತಂಕ.
ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗುವ ಇಂತಹ ಅಂಶಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಅತೀ ಶೀಘ್ರದಲ್ಲಿ ಹಾಸ್ಟೆಲ್‌ಗಳಲ್ಲಿ ಊಟ,ವಸತಿ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿದೆ.
ಹೋಂ ಐಸೋಲೇಶನ್‌ನಲ್ಲಿರುವವರ ಓಡಾಟದಿಂದ ಆತಂಕ :
ಕೋವಿಡ್ ಸೋಂಕು ತಗುಲಿರುವವರಿಗೆ ಅದರ ಪ್ರಮಾಣ ಕಡಿಮೆ ಇದ್ದಾಗ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಜತೆಗೆ ಕೋವಿಡ್ ಮೊದಲ ಅಲೆಯಂತೆ ಸೋಂಕಿತರ ಮನೆ ಬಳಿ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧ ವಿಧಿಸುವುದನ್ನು ಮಾಡುತ್ತಿಲ್ಲ. ಇದರ ಲಾಭ ಪಡೆಯುತ್ತಿರುವ ಸೋಂಕಿತರು ಬೆಳಗಿನ ನಿರ್ಬಂಧ ಸಡಿಲಿಕೆ ಅವಧಿಯಲ್ಲಿ ಮಾರುಕಟ್ಟೆ, ಅಂಗಡಿ ಮತ್ತಿತರೆಡೆಗಳಲ್ಲಿ ಅಡ್ಡಾಡುತ್ತಿದ್ದಾರೆ. ಇದು ಕೂಡ ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿಸಚಿವ ಬಿ. ಶ್ರೀರಾಮುಲು ಕೂಡ ಇದೇ ಆತಂಕ ವ್ಯಕ್ತಪಡಿಸಿದ್ದರು. ಹೋಂ ಐಸೋಲೇಶನ್ ರದ್ದುಮಾಡಿ ಸಣ್ಣ ಪ್ರಮಾಣದ ಸೋಂಕಿತರಿಗಾಗಿ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಚಿತ್ರದುರ್ಗ ಜಿಲ್ಲೆಗೆ ಬೆಂಗಳೂರುಮತ್ತಿತರೆಡೆಗಳಿಂದ 2718 ಮಂದಿವಲಸೆ ಬಂದಿದ್ದಾರೆ. ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆ ನಡೆಸಿ ಕೋವಿಡ್ ಪರೀಕ್ಷೆಮಾಡಿಸಲಾಗುತ್ತಿದೆ.– ಡಾ ಸಿ.ಎಲ್. ಪಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ
ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.