![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 30, 2019, 11:46 AM IST
ಚಿತ್ರದುರ್ಗ: ಜಾನುವಾರುಗಳಿಗೆ ಗುತ್ತಿಗೆದಾರರು ಪೂರೈಕೆ ಮಾಡುತ್ತಿರುವ ಹಸಿ ಮೇವು.
ಚಿತ್ರದುರ್ಗ: ಜಾನುವಾರುಗಳಿಗೆ ಒಣ ಮೇವು ವಿತರಣೆ ಮಾಡಬೇಕು ಎಂದು ಹುಣಸೇಕಟ್ಟೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಲ್ಲಿ ಮನವಿ ಮಾಡಿದ್ದಾರೆ.
ಬರಗಾಲದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾನುವಾರುಗಳ ರಕ್ಷಣೆಗಾಗಿ ಪೂರೈಕೆ ಮಾಡುತ್ತಿರುವ ಹಸಿ ಮೇವು ನೀಡುವುದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಹಸಿ ಮೇವು ಹೆಚ್ಚಿನ ತೂಕ ಬರುತ್ತದೆ. ಒಣಗಿದ ಮೇವನ್ನು ಸರಬರಾಜು ಮಾಡಿದರೆ ಸಂಜೆ ತನಕ ಮೇವನ್ನು ಜಾನುವಾರುಗಳಿಗೆ ಹಾಕಿ ಪೋಷಣೆ ಮಾಡಬಹುದಾಗಿದೆ ಎಂದಿದ್ದಾರೆ.
ಹುಣಸೇಕಟ್ಟೆ ಗ್ರಾಮದ ಜಾನು ವಾರುಗಳಿಗೆ ಜಿಲ್ಲಾಡಳಿತ ಮೇವು ಬ್ಯಾಂಕ್ ತೆರೆದಿದ್ದು, ಒಂದು ಜೊತೆ ಎತ್ತಿಗೆ ಒಂದು ಕ್ವಿಂಟಲ್ ಹಸಿ ಮೇವು ಸಾಕಾಗುವುದಿಲ್ಲ. ಒಂದು ಜೊತೆ ಎತ್ತಿಗೆ ಒಣ ಮೇವು ಆದರೆ 3- 4 ದಿನ ಮೇಯಿಸಬಹುದು. ಒಂದು ಮೆಕ್ಕೇಜೋಳದ ತೆನೆ ಹಾಗೂ ದಂಟು ಒಂದು ಕೆಜಿ ಬರುತ್ತದೆ. ಒಬ್ಬ ರೈತ ಒಂದೂವರೆ ಕ್ವಿಂಟಲ್ ಹಸಿ ಮೇವು ಖರೀದಿ ಮಾಡಿದರೆ ಒಂದು ಕ್ವಿಂಟಲ್ ಬರುತ್ತದೆ. ಅದೇ ರೀತಿ ಒಣ ಮೇವು ಹತ್ತು ದಂಟಿಗೆ ಒಂದು ಕೆಜಿ ಬರುತ್ತದೆ. ಒಬ್ಬ ರೈತ ಒಂದೂವರೆ ಕ್ವಿಂಟಲ್ ಹಸಿ ಮೇವು ಖರೀದಿ ಮಾಡಿದರೆ ಒಂದು ಕ್ವಿಂಟಲ್ ಬರುತ್ತದೆ. ಇದರಿಂದ ಜಾನುವಾರುಗಳಿಗೆ ಹೊಟ್ಟೆ ತುಂಬ ಮೇವು ನೀಡಲು ಕಷ್ಟವಾಗುತ್ತಿದೆ. ಅಲ್ಲದೆ ರೈತರಿಗೂ ಆರ್ಥಿಕವಾಗಿ ಹೊರೆಯಾಗಲಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸತತ ಬರ ಕಾಡುತ್ತಿರುವುದರಿಂದ ಯಾವುದೇ ರೈತರ ಕೈಯಲ್ಲಿ ಹಣವಿಲ್ಲ. ನಿತ್ಯ ಒಂದು ಕ್ವಿಂಟಲ್ ಹಸಿ ಮೇವು ಖರೀದಿ ಮಾಡಲು 200 ರೂ.ಗಳನ್ನು ಜೋಡಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಅದೇ ರೀತಿ ಒಣ ಮೇವನ್ನು ಸರಬರಾಜು ಮಾಡಿದರೆ ನಮಗೆ 200 ರೂ.ಗಳಿಗೆ 3-4 ದಿನ ಸಾಕಾಗುತ್ತದೆ. ಆದ್ದರಿಂದ ಮೇವು ಸರಬರಾಜು ಮಾಡುತ್ತಿರುವ ಗುತ್ತಿಗೆದಾರರಿಗೆ ಕಡ್ಡಾಯವಾಗಿ ಒಣ ಮೇವು ಪೂರೈಕೆ ಮಾಡುವಂತೆ ತಾಕೀತು ಮಾಡಬೇಕು. ಗುತ್ತಿಗೆದಾರರು ಟೆಂಡರ್ ಪಡೆದು ಹಸಿ ಮೇವು ವಿತರಿಸುವುದರಿಂದ ರೈತರಿಗೆ ಯಾವುದೇ ರೀತಿಯ ಅನುಕೂಲವಾಗದೆ ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ನೀಡಬೇಕು ಎಂದು ಹುಣಸೇಕಟ್ಟೆ ಗ್ರಾಮದ ರೈತರಾದ ಟಿ. ಏಕಾಂತಪ್ಪ, ಗೋಪಾಲಪ್ಪ, ಕಾಂತರಾಜ್, ಬೋರಯ್ಯ, ಪಾಲಯ್ಯ, ಅಂಜಿನಪ್ಪ, ಈರಪ್ಪ, ತಿಪ್ಪೇಸ್ವಾಮಿ, ಚಂದ್ರಣ್ಣ, ವೆಂಕಟೇಶ್, ಮೇಘರಾಜ್, ರಮೇಶ್, ಭರತ್, ಗುಡ್ಡಪ್ಪ ಮತ್ತಿತರರು ತಿಳಿಸಿದ್ದಾರೆ.
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ
Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!
Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.