ಗ್ರಹಣ ಇದೆಯೆಂದು ಮನೆ ಬಿಡಬೇಡಿ: ಬಸವ ಶ್ರೀ
Team Udayavani, Jul 28, 2018, 12:32 PM IST
ಚಿತ್ರದುರ್ಗ: ಗ್ರಹಣ ಇದೆ ಎಂದು ಮೌಡ್ಯ, ಅಂಧ ಶ್ರದ್ಧೆಯಿಂದ ಮನೆ ಬಿಡಬೇಡಿ. ಪ್ರಕೃತಿಯಲ್ಲಿ ನಡೆಯುವ ಬದಲಾವಣೆಗಳನ್ನು ವೈಜ್ಞಾನಿಕವಾಗಿ ನೋಡಿ ಎಂದು ಪಂಚಮಶಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಇಲ್ಲಿನ ಭೋವಿಗುರುಪೀಠದ ಎಸ್ ಜೆಎಸ್ ಶಾಲೆಯಲ್ಲಿ ಶುಕ್ರವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಂದ್ರಗ್ರಹಣ ಪ್ರಕೃತಿಯಲ್ಲಿ ನಡೆಯುವ ಒಂದು ಬದಲಾವಣೆ. ವಿದ್ಯಾರ್ಥಿಗಳು ಮತ್ತು ಜನರು ಗ್ರಹಣವನ್ನು ವೈಜ್ಞಾನಿಕವಾಗಿ
ನೋಡಬೇಕು. ಊಟ-ನೀರು ಚೆಲ್ಲುವುದು, ಮನೆ ಬಿಟ್ಟು ಹೋಗುವಂತಹ ಮೌಢ್ಯಾಚಾರಣೆ ಬೇಡ ಎಂದರು.
ವ್ಯಾಸ ಮಹರ್ಪಿಯ ದಿನಾಚರಣೆ ಅಂಗವಾಗಿ ಗುರು ಪೂರ್ಣಿಮೆ ನಡೆಯುವುದು. ಗುರುಗಳಿಗೆ ವಿಶೇಷವಾಗಿ ಹೊಂದಿಸುವಂತಹ ಕಾರ್ಯಕ್ರಮ ಇದಾಗಿದ್ದು, ಎಸ್‌ಜೆಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಗುರುವಾಗಿದ್ದು ಕೊಂಡು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಗುರುಗಳಿಗೆ ಭಕ್ತಿಯಿಂದ ಪೂಜೆ ಮಾಡಿದರಷ್ಟೆ ಸಾಲದು. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಆಚರಿಸದಾಗಲೇ ಗುರುವಿಗೆ ಸಲ್ಲಿಸಿದ ನಿಜವಾದ ಭಕ್ತಿ. ತಂದೆ-ತಾಯಂದಿರನ್ನು ಅಗೌರವಿಸಿ ಅವರ
ವಿರುದ್ಧ ನಡೆದುಕೊಳ್ಳುವುದು, ಅವರ ತತ್ವ ಅಳವಡಿಸಿಕೊಳ್ಳದೆ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಅರಿವೇ ಗುರು ಎಂಬುದನ್ನು ಶರಣರ ತತ್ವದಲ್ಲಿ ಕಾಣುತ್ತೇವೆ. ಗುರುವಿನ ಸ್ಥಾನ ಶಾಶ್ವತ. ಭೌಗೋಳಿಕವಾಗಿ ವಾತಾವರಣದಲ್ಲಿ ನಡೆಯುವ ಗ್ರಹಣ ತಾತ್ಕಾಲಿಕ. ಮನುಷ್ಯನಿಗೆ ಭೌತಿಕ ಗ್ರಹಣ ಬಂದರೆ ಭಯೋತ್ಪಾದನೆ, ಭ್ರಷ್ಟಾಚಾರ, ಮೌಡ್ಯತೆ ಹೀಗೆ ಹಲವಾರು ನ್ಯೂನತೆಗಳಿಗೆ ಒಳಗಾಗುತ್ತಾನೆ. ಯಾರು ಸಹ ಭೌತಿಕ ಮೌಡ್ಯತೆಗೆ ಒಳಗಾಗಬಾರದು ಎಂದರು.
ಗ್ರಹಣ ಕ್ಷಣಿಕ, ಭೌತಿಕ ಗ್ರಹಣ ಧೀರ್ಘಕಾಲದ ವರೆಗೆ ಉಳಿಯುತ್ತದೆ. ಗುರು ದರ್ಶನವಾದರೆ ಭೌತಿಕ ಗ್ರಹಣದಿಂದ ದೂರವಾಗಿ ಜ್ಞಾನ ಪ್ರಾಪ್ತಿಯಾಗುತ್ತದೆ. ವ್ಯಾಸ ಮಹರ್ಷಿ ಹಿಂದುಳಿದ ವರ್ಗಕ್ಕೆ ಸೇರಿದವರು. ಅವರ ಹೆಸರಿನಲ್ಲಿ ಪೀಠ ಮಾಡಿಕೊಂಡ ಮೇಲ್ವರ್ಗದ ಅಕ್ಷರವಂಥ ಜ್ಞಾನಸ್ತರು ಆಷಾಢ ಮಾಸವನ್ನು ಅಶುಭ ಎಂದು ಬಿಂಬಿಸಿ ತಾವು ಶುಭ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಶುಭ ಎಂದು ಬಿಂಬಿಸಿವುದರಿಂದ ವಸ್ತುಗಳ ಬೆಲೆ ಅಗ್ಗವಾಗುತ್ತವೆ. ಅಂತಹ ಸಂದರ್ಭದಲ್ಲಿ ಶುಭ ಕಾರ್ಯಗಳನ್ನು ಮಾಡಿಕೊಳ್ಳುವುದರ
ಹಿಂದಿನ ಮರ್ಮ ತಿಳಿಯಬೇಕು ಎಂದರು.
ವ್ಯಾಸ ಹಿಂದುಳಿದ, ದಲಿತ, ಶೋಷಿತ ವರ್ಗಕ್ಕೆ ಸೇರಿದವರು. ಈ ಸಮುದಾಯಗಳು ಭೌತಿಕ ಗ್ರಹಣದಿಂದ ಹೊರಬಂದು
ಅಸಮಾನತೆ ಹೋಗಲಾಡಿಸಿದಾಗ ಮಾತ್ರ ವ್ಯಾಸರ ದಿನಾಚರಣೆಗೆ ಅರ್ಥ ಬರಲಿದೆ. ಚಂದ್ರ ಮತ್ತು ಸೂರ್ಯನ ಬೆಳಕನ್ನು ಹೆಚ್ಚು ಕಾಲ ತಡೆಹಿಡಿಯಲಾಗುವುದಿಲ್ಲ ಎಂದು ಹೇಳಿದರು.
ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖ್ಯಶಿಕ್ಷಕಿ ಛಾಯಾ, ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.