ಮಾತೃ ಭಾಷೆ ಕನ್ನಡ ಕಲ್ಪವೃಕ್ಷ ಇದ್ಧಂತೆ
Team Udayavani, Mar 28, 2021, 8:01 PM IST
ಮೊಳಕಾಲ್ಮೂರು: ಕನ್ನಡ ಭಾಷೆ ರಾಷ್ಟ್ರೀಯ ಭಾಷೆಯಾಗಿದ್ದು, ಅನ್ಯರಿಗೆ ಆಶ್ರಯ ನೀಡುವ ಕಾಮಧೇನುವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ದೊಡ್ಡಮಲ್ಲಯ್ಯ ಹೇಳಿದರು.
ಇವರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾಷೆ ಬದುಕಿನ ಎಲ್ಲಾ ಆಗು ಹೋಗುಗಳನ್ನು ನಿರ್ದೇಶಿಸುತ್ತದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬಂತೆ ಕನ್ನಡ ಭಾಷೆ ಕಲ್ಪವೃಕ್ಷವಾಗಿದ್ದು, ಅದರ ನೆರಳಲ್ಲಿ ಬದುಕು ಸಾಗಿಸಿದರೆ ಅನ್ನ ನೀಡಲಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಳೆದುಕೊಂಡಾಗ ನಮ್ಮ ಬದುಕು ವಿನಾಶಕ್ಕೆ ಹೋಗುತ್ತದೆ ಎಂದರು. ಸಮ್ಮೇಳನಾಧ್ಯಕ್ಷ ಧೂಪಂ ಅಂಜಿನಪ್ಪ ಮಾತನಾಡಿ, ಹಗಲುವೇಷಗಾರ ಕಲಾವಿದನಾಗಿ ವಚನ ಸಾಹಿತ್ಯವನ್ನು ಬಹುತೇಕ ಶಿಷ್ಯರಿಗೆ ಧಾರೆ ಎರೆದಿದ್ದೇನೆ.
ಇಳಕಲ್ ಮಹಾಂತ ಅಪ್ಪಗಳ ಸೇವೆ ಮಾಡುತ್ತಾ ಅಪ್ಪಗಳ ವೇಶಭೂಷಣಗಳನ್ನು ಹಾಕಿಕೊಂಡು ಪ್ರದರ್ಶನ ನೀಡುತ್ತಿದ್ದೆ. ನರ ಎನ್ನುವವನೇ ದೈವ, ಶಿವ ಎನ್ನುವವನೇ ಜೀವ. ಯ ಕಾರ ಶಬ್ದದಲ್ಲಿ ಶಿವ ಜೀವ ಸಂಬಂಧವೇ ಐಕ್ಯ ಎಂದು ಎಂದರು.
ಸಮಾರಂಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಂ.ಡಿ. ಮಂಜುನಾಥ, ಗ್ರಾಪಂ ಉಪಾಧ್ಯಕ್ಷ ಪಾಲಯ್ಯ, ಪಪಂ ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್, ಸದಸ್ಯೆ ರೂಪಾ, ಹುಬ್ಬಳ್ಳಿಯ ಎಸ್.ಎಸ್. ಪಾಟೀಲ್, ಉಪನ್ಯಾಸಕಿ ಅನ್ನಪೂರ್ಣ ಜೋಗೇಶ್, ದಸಂಸ ಸಂಚಾಲಕರಾದ ಕೊಂಡಾಪುರ ಪರಮೇಶ್ವರಪ್ಪ, ನಾಗೇಂದ್ರಪ್ಪ, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಬಿಆರ್‌ಸಿ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಈರಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಬಸವರಾಜ್, ಕರವೇ ಅಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್, ಶ್ರೀರಾಮುಲು ಸೇನೆ ರಾಜ್ಯಾಧ್ಯಕ್ಷ ಬಿ. ವಿಜಯ್, ರಾಯದುರ್ಗದ ಕೌನ್ಸಿಲರ್ ಸಂಜೀವಪ್ಪ, ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಒ. ಶಿವಣ್ಣ, ಎನ್. ನೀಲರಾಜ್, ಪ್ರಧಾನ ಸಂಚಾಲಕ ರಾಜಶೇಖರ ನಾಯಕ, ಶಾಂತಕುಮಾರಿ, ಎಂ.ಒ. ಮಂಜುನಾಥಸ್ವಾಮಿ ನಾಯಕ, ಎಸ್.ಪರಮೇಶ್, ಪ್ರದೀಪ್, ಮುಖ್ಯ ಶಿಕ್ಷಕ ಡಿ.ವಿ. ಕೃಷ್ಣಮೂರ್ತಿ, ಕಲ್ಲೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.