ಗುರು ತಿಪ್ಪೇರುದ್ರಸ್ವಾಮಿರಥಕ್ಕೆ ಕಲಶ ಸ್ಥಾಪನೆ
Team Udayavani, Mar 19, 2019, 10:52 AM IST
ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ಸೋಮವಾರ ರಥಕ್ಕೆ ಕಲಶ ಸ್ಥಾಪನೆ ಮಾಡಲಾಯಿತು. ಮಾ. 22 ರಂದು ಜರುಗಲಿರುವ ಜಾತ್ರೆಗೆ ರಥವನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ಕಲಶ ಸ್ಥಾಪನೆ ಮೊದಲ ಸಾಂಪ್ರದಾಯಿಕ ಕಾರ್ಯವಾಗಿದೆ. ಈ
ಬಾರಿ ರಥದ ಹಿಂಬದಿಯ ಒಂದು ಗಾಲಿಯನ್ನು ದುರಸ್ತಿಗೊಳಿಸಲಾಗಿದೆ. ಕಳೆದ ವರ್ಷ ರಥದ ಎಲ್ಲ ಒಂಭತ್ತು ಅಂತಸ್ತುಗಳನ್ನು ಪುನರ್ ಜೋಡಿಸಲಾಗಿತ್ತು.
ಸಂಜೆ ಒಳಮಠದಿಂದ ಐದು ಅಡಿ ಎತ್ತರದ ಕಲಶವನ್ನು ಮೆರವಣಿಗೆಯ ಮೂಲಕ ತರಲಾಯಿತು. ದೇವಾಲಯದ ಸಾಂಪ್ರದಾಯಿಕ ವಾದ್ಯಗಳು, ನಂದಿಧ್ವಜ ಮೆರವಣಿಗೆಯಲ್ಲಿದ್ದವು. ಆಯಗಾರರು, ರಥವನ್ನು ಮುನ್ನಡೆಸುವವರು ಹಾಗೂ ಸಾರ್ವಜನಿಕರು ಕಲಶಕ್ಕೆ ಪೂಜೆ ಸಲ್ಲಿಸಿದರು. ಕಲಶದ ಮೇಲ್ಭಾಗ ಹಾಗೂ ಕೆಳಭಾಗವನ್ನು ಹಗ್ಗದಿಂದ ಬಿಗಿಯಲಾಗಿತ್ತು. ನಿಧಾನವಾಗಿ ಕಲಶವನ್ನು ರಥದ
ಮೇಲ್ಭಾಗಕ್ಕೆ ಒಯ್ದು ಪ್ರತಿಷ್ಠಾಪಿಸಲಾಯಿತು. ಕಲಶ ರಥದ ಮೇಲೇರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಕಲಶ ಸ್ಥಾಪನೆಯ ಮೊದಲ ದಿನ ನಾಲ್ಕು ಸಾಲು ಬಾವುಟಗಳನ್ನು ಕಟ್ಟಲಾಯಿತು. ಕಲಶಕ್ಕೆ ಬೃಹತ್ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್, ಸದಸ್ಯರಾದ ರುದ್ರಮುನಿ, ಗೋವಿಂದರಾಜ್, ನಾಗಪ್ಪ, ಮುನಿಯಪ್ಪ, ಸಿಬ್ಬಂದಿ ಸತೀಶ್ ಮತ್ತಿತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.