ಮಳೆನೀರು ತಮ್ಮ ಹೊಲದಲ್ಲೇ ಸಂಗ್ರಹವಾಗುತ್ತಿರುವುದರಿಂದ ರೈತರು ಖುಷ್
Team Udayavani, May 21, 2019, 8:38 AM IST
ನಾಯಕನಹಟ್ಟಿ: ಮುಂಗಾರಿನ ಮೊದಲ ಮಳೆ ಹೋಬಳಿಯಲ್ಲಿನ ಕೃಷಿ ಹೊಂಡಗಳನ್ನು ಭರ್ತಿ ಮಾಡಿದೆ. ಇದು ರೈತರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.
ನಲಗೇತನಹಟ್ಟಿ, ರೇಖಲಗೆರೆ, ಸರಜವ್ವನ ಹಳ್ಳಿ ಸೇರಿದಂತೆ ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 40ಕ್ಕೂ ಹೆಚ್ಚು ಕೃಷಿಹೊಂಡಗಳು ನಿರ್ಮಿಸಿದ ನಂತರ ಇದೇ ಮೊದಲ ಬಾರಿಗೆ ನೀರಿನಿಂದ ತುಂಬಿ ತುಳುಕುತ್ತಿವೆ. ಕೃಷಿ ಇಲಾಖೆಯ ಮಹತ್ವದ ಕಾರ್ಯಕ್ರಮವಾದ ಕೃಷಿಹೊಂಡ ಯೋಜನೆ ಮೊದಲ ಮಳೆಗೇ ಯಶಸ್ಸು ಕಂಡಿದೆ.
ಭಾನುವಾರ ರಾತ್ರಿ ಸುರಿದ ಕೃತಿಕಾ ಮಳೆ ಮುಂಗಾರಿನ ಮೊದಲ ಉತ್ತಮ ಮಳೆಯಾಗಿದೆ. ನಲಗೇತನಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ 20, ರೇಖಲಗೆರೆ ಗ್ರಾಪಂ ವ್ಯಾಪ್ತಿಯಲ್ಲಿ 15, ನೇರಲಗುಂಟೆ ಗ್ರಾಪಂ ವ್ಯಾಪ್ತಿಯ 15 ಸರಜವ್ವನಹಳ್ಳಿ 10, ರೇಖಲಗೆರೆ ಸೇರಿದಂತೆ ನಾನಾ ಗ್ರಾಮಗಳ ಕೃಷಿಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ.
ರೈತರು ತಮ್ಮ ಹೊಲಗಳಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹೊಂಡಗಳನ್ನು ಸರಕಾರದ ನೆರವಿನಿಂದ ನಿರ್ಮಿಸಿದ್ದಾರೆ. ಇದರಿಂದ ಹೊಲದಲ್ಲಿನ ಹಾಗೂ ಸುತ್ತಲಿನ ಎತ್ತರದ ಪ್ರದೇಶಗಳಲ್ಲಿನ ನೀರು ಹರಿದು ಕೃಷಿಹೊಂಡದಲ್ಲಿ ಸಂಗ್ರಹವಾಗುತ್ತಿದೆ. ವ್ಯರ್ಥವಾಗಿ ಹಳ್ಳದ ಪಾಲಾಗುತ್ತಿರುವ ನೀರು ತಮ್ಮ ಹೊಲದಲ್ಲಿಯೇ ಸಂಗ್ರಹವಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ನಲಗೇತನಹಟ್ಟಿ ಗ್ರಾಮದಲ್ಲಿ 30 ಮಿಮೀ, ನೇರಲಗುಂಟೆ 15, ಮೈಲನಹಳ್ಳಿ 13, ದೇವರೆಡ್ಡಿಹಳ್ಳಿ 16, ಘಟಪರ್ತಿ 29, ದೇವರೆಡ್ಡಿಹಳ್ಳಿ 16,ಅಬ್ಬೇನಹಳ್ಳಿ 20, ತಳಕು 23 ಹಾಗೂ ನಾಯಕನಹಟ್ಟಿಯಲ್ಲಿ 13.2 ಮಿಮೀ ಮಳೆಯಾಗಿದೆ. ಭಾನುವಾರ ಮಧ್ಯರಾತ್ರಿ ಗುಡುಗು-ಸಿಡಿಲು ಸಹಿತ ಅರ್ಧ ತಾಸು ಮಳೆಯಾಗಿದೆ. ಆದರೆ ಭಾರೀ ಪ್ರಮಾಣದಲ್ಲಿ ಬೀಸಿದ ಗಾಳಿಯಿಂದಾಗಿ ಮೋಡಗಳು ಚದುರಿದ್ದವು.
ಉತ್ತಮ ಮಳೆಯಿಂದಾಗಿ ತಗ್ಗು ಪ್ರದೇಶಗಳು ತುಂಬಿವೆ. ಚೆಕ್‌ಡ್ಯಾಂ ಹಾಗೂ ಕೃಷಿ ಹೊಂಡಗಳಲ್ಲಿ ಜೀವ ಜಲ ತುಂಬಿದೆ. ಆವರಿಸಿದೆ. ಒಂದೆರಡು ದಿನಗಳ ನಂತರ ಸಂಗ್ರಹವಾದ ನೀರು ಇಂಗಿದ ನಂತರ ರೈತರು ಕೃಷಿ ಚಟುವಟಿಕೆ ಆರಂಭಿಸುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.