ಶೇಂಗಾ ಬಿತ್ತನೆ ಬೀಜಕ್ಕೆ ರೈತರ ಪರದಾಟ
•ತಳಕು ರೈತ ಸಂಪರ್ಕ ಕೇಂದ್ರಕ್ಕೆ ಬಂದವರಿಗೆ ಕಂಡಿದ್ದು ನೋ ಸ್ಟಾಕ್ ಬೋರ್ಡ್
Team Udayavani, Jun 25, 2019, 10:20 AM IST
ನಾಯಕನಹಟ್ಟಿ: ಶೇಂಗಾ ಬಿತ್ತನೆ ಬೀಜ ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತರು ತಳಕು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು.
ನಾಯಕನಹಟ್ಟಿ: ತಳಕು ಹೋಬಳಿಯಲ್ಲಿ ಭಾನುವಾರ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಸೋಮವಾರ ತಳಕು ರೈತ ಸಂಪರ್ಕ ಕೇಂದ್ರಕ್ಕೆ ಧಾವಿಸಿದರು. ಆದರೆ ಅಲ್ಲಿ ಬಿತ್ತನೆ ಶೇಂಗಾ ದೊರೆಯದ ಕಾರಣ ಕೃಷಿ ಅಧಿಕಾರಿ ಜೊತೆಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ಒಂದೆಡೆ ಲಾರಿ ಲೋಡ್ ಬಂದಿಲ್ಲವೆಂಬ ನಾಮಫಲಕ ಇದ್ದರೆ, ಮತ್ತೂಂದೆಡೆ ಶೇಂಗಾ ದಾಸ್ತಾನು ಇಲ್ಲ, ಶೇಂಗಾ ವಿತರಣೆ ಹಾಗೂ ಟೋಕನ್ ವಿತರಣೆ ಮಾಡಲಾಗುವುದಿಲ್ಲ ಎಂದು ನಾಮಫಲಕ ಹಾಕಲಾಗಿದೆ. ಇದರಿಂದ ರೈತರು ಪರದಾಡುವಂತಾಗಿದೆ. ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಒಂದು ಲೋಡ್ ಬಿತ್ತನೆ ಶೇಂಗಾ ದೊರೆಯಲಿದೆ ಎಂದು ಭರವಸೆ ನೀಡಿದರಾದರೂ ಈ ಉತ್ತರ ರೈತರಿಗೆ ಸಮಾಧಾನ ತರಲಿಲ್ಲ.
ನೂರಾರು ಕ್ವಿಂಟಲ್ ಶೇಂಗಾಕಾಯಿಗೆ ಬೇಡಿಕೆ ಇದೆ. ಕೇವಲ ಒಂದು ಲೋಡ್ ಏತಕ್ಕೂ ಸಾಲದು. ತಕ್ಷಣ ಬಿತ್ತನೆ ಶೇಂಗಾವನ್ನು ವಿತರಣೆ ಮಾಡಬೇಕು. ಈಗಾಗಲೇ ಶೇಂಗಾ ವಿತರಿಸುವ ಪಂಚಾಯತ್‌ವಾರು ಪಟ್ಟಿಯನ್ನು ಹಾಕಲಾಗಿದೆ. ಸೋಮವಾರ ಮೂರು ಗ್ರಾಪಂಗಳಿಗೆ ವಿತರಣೆ ಮಾಡಬೇಕಾಗಿತ್ತು. ಆದರೆ ಶೇಂಗಾ ವಿತರಣೆಗೆ ಬದಲಾಗಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ ಎಂದು ರೈತರು ಆರೋಪಿಸಿದರು.
ರೈತರ ಅಹವಾಲು ಆಲಿಸಿದ ಕೃಷಿ ಅಧಿಕಾರಿ ಗಿರೀಶ್ ಮಾತನಾಡಿ, ಇಲಾಖೆಯಿಂದ ಬಿತ್ತನೆ ಬೀಜ ಸರಬರಾಜಾಗಿಲ್ಲ. ಹೀಗಾಗಿ ವಿತರಣೆ ತಡವಾಗಿದೆ. ಮಂಗಳವಾರ ತಳಕು ಹಾಗೂ ಪರಶುರಾಮಪುರ ರೈತ ಸಂಪರ್ಕ ಕೇಂದ್ರಗಳಿಗೆ ತಲಾ ಒಂದು ಲೋಡ್ ಬಿತ್ತನೆ ಶೇಂಗಾ ಬೀಜ ಬರುವ ನಿರೀಕ್ಷೆಯಿದೆ. ರೈತರು ಕಡ್ಡಾಯವಾಗಿ ಪ್ರೂಟ್ಸ್ ತಂತ್ರಾಂಶದಲ್ಲಿ ಲಿಂಕ್ ಮಾಡಬೇಕಾಗಿದೆ. ಇದಕ್ಕಾಗಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ಒಂದೆರಡು ದಿನಗಳಲ್ಲಿ ಶೇಂಗಾ ಬಿತ್ತನೆ ಬೀಜ ವಿತರಿಸುತ್ತೇವೆಂಬ ಭರವಸೆ ದೊರೆತಿದ್ದರಿಂದ ರೈತರು ಗ್ರಾಮಗಳಿಗೆ ಹಿಂದಿರುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.