![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 8, 2020, 7:31 PM IST
ಹೊಳಲ್ಕೆರೆ: ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ರೈತರ ಬಂಗಾರ ಹರಾಜು ಹಾಕಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತಾಪಿ ಕೆಲಸಕ್ಕಾಗಿ ಬ್ಯಾಂಕ್ ಗಳಿಗೆ ಮನೆಯಲ್ಲಿದ್ದ ಬಂಗಾರ ಒತ್ತೆ ಇಟ್ಟು, ಕೃಷಿ ಕಾಯಕ ಕೈಗೊಳ್ಳಲು ಸಾಲ ಪಡೆದ ರೈತರ ಬಂಗಾರವನ್ನು ಸಾಲ ತೀರಿಸಿಲ್ಲ,ಎನ್ನುವ ಸಬೂಬು ಹೇಳಿ ಬಂಗಾರ ಹರಾಜು ಮಾಡುವ ಕ್ರಯ ಸರಿಯಲ್ಲ. ಬ್ಯಾಂಕ್ ವ್ಯವಸ್ಥಾಪಕರು ತಕ್ಷಣ ಹರಾಜುಕೈಬಿಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿ ಹರಾಜು ಕ್ರಮ ಖಂಡಿಸಿದರು. ಬಳಿಕ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರು.
ತಾಲೂಕಿನಲ್ಲಿ ಕಳೆದ ಐದಾರು ವರ್ಷಗಳಿಂದ ಬರಗಾಲ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ಕೃಷಿ ಕ್ಷೇತ್ರಸಂಪೂರ್ಣ ನೆಲಕಚ್ಚಿದೆ. ಮಳೆ ಇಲ್ಲದೆ ಬೆಳೆಗಳು ಕುಸಿದು ಬಿದ್ದಿವೆ. ಅಲ್ಲಲ್ಲಿ ಬೆಳೆದು ನಿಂತಿದ್ದ ಬೆಳೆಗಳಿಗೆ ಅಕಾಲಿಕ ಮಳೆಗಾಳಿ ಬಂದಿರುವ ಪರಿಣಾಮ ಬೆಳೆ ನಾಶವಾಗಿದೆ. ರೈತರಿಗೆ ಕೆಲಸವಿಲ್ಲ. ಕೋವಿಡ್ ಹಿನ್ನೆಲೆ ಬೆಳೆದ ಹಣ್ಣು ತರಕಾರಿ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಹಲವಾರು ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರು ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದಾರೆ. ರೈತರಿಗೆ ಸೂಕ್ತ ಕಾಲಾವಕಾಶ ನೀಡಬೇಕು. ರೈತರ ಬಂಗಾರದ ಸಾಲ ಸಂದಾಯ ಮಾಡುವ ತನಕ ಬ್ಯಾಂಕ್ ಯಾವುದೇ ಹರಾಜು ಮಾಡಬಾರದು ಎಂದು ಒತ್ತಾಯಿಸಿದರು.
ರಾಜ್ಯ ರೈತರ ಸಂಘದ ಅಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ತಾಲೂಕು ಆಧ್ಯಕ್ಷ ಕೋಟ್ರೆ ಶಂಕರಪ್ಪ, ರೈತ ಮುಖಂಡ ಬಸವರಾಜಪ್ಪ, ನಗರಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಅಜಯ್, ಉಮೇಶ್, ಸದಾಶಿವಪ್ಪ, ಸಂಜೀವ್, ಶಿವು, ಚಂದ್ರಯ್ಯ ಹಾಜರಿದ್ದರು.
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ
Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!
Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್
You seem to have an Ad Blocker on.
To continue reading, please turn it off or whitelist Udayavani.