ಬೆಳೆ ಹಾನಿಯಿಂದ ರೈತರು ಕಂಗಾಲು
ಮಳೆ ಅಭಾವದಿಂದ ಮೊಳಕಾಲ್ಮೂರು ತಾಲೂಕಲ್ಲಿ ನೆಲ ಕಚ್ಚಿದ ಶೇಂಗಾ-ಪ್ರಮುಖ ಬೆಳೆಗಳು
Team Udayavani, Oct 4, 2021, 7:18 PM IST
ಎಸ್. ರಾಜಶೇಖರ
ಮೊಳಕಾಲ್ಮೂರು: ಸತತ ಬರಕ್ಕೆ ಸಿಲುಕುವ ತಾಲೂಕಿನಲ್ಲಿ ಈ ಬಾರಿಯೂ ಮಳೆ ಅಭಾವದಿಂದ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಸೇರಿದಂತೆ ಇನ್ನಿತರ ಬೆಳೆಗಳು ನೆಲ ಕಚ್ಚಿವೆ. ಕೋಟ್ಯಂತರ ರೂ. ಮೌಲ್ಯದ ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಬಹುತೇಕ ಮಳೆಯಾಶ್ರಿತ ಬೆಳೆಗಳನ್ನೇ ಹೆಚ್ಚು ಬೆಳೆಯಲಾಗುತ್ತದೆ. ಸುಮಾರು 26,800 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ.
ಶೇಂಗಾ, ರಾಗಿ, ಜೋಳ, ಸಜ್ಜೆ, ನವಣೆ, ಹತ್ತಿ, ತೊಗರಿ, ಅಲಸಂದಿ, ಹೆಸರು ಸೇರಿದಂತೆ ಇನ್ನಿತರ ಬೆಳೆಗಳನ್ನು 32,800 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇತ್ತು. ಬಿತ್ತನೆಗಿಂತ ಪೂರ್ವದಲ್ಲಿ ಉತ್ತಮವಾಗಿ ಹದ ಮಳೆಯಾದ ಪರಿಣಾಮ ಸಾಲ ಮಾಡಿ ಉಳುಮೆ ಮಾಡಿಕೊಂಡು ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಸಕಾಲಕ್ಕೆ ರೈತರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ನಂತರದ ದಿನಗಳಲ್ಲಿ ಶೇಂಗಾ ಕಾಯಿ ಕಟ್ಟುವ ಸಮಯದಲ್ಲಿ ಉತ್ತರೆ ಮಳೆ ಬಾರದೆ ಕೈಕೊಟ್ಟ ಪರಿಣಾಮ ಶೇಂಗಾ ಬೆಳೆ ಬಿರು ಬಿಸಿಲಿಗೆ ಒಣಗಿ ಕಮರಿ ಹೋಗಿದೆ. ಕಸಬಾ ಮತ್ತು ದೇವಸಮುದ್ರ ಹೋಬಳಿ ಪ್ರದೇಶದ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಶೇಂಗಾ ಸೇರಿದಂತೆ ರಾಗಿ, ಜೋಳ, ಹತ್ತಿ, ನವಣೆ, ತೊಗರಿ, ಮುಸುಕಿನಜೋಳ ಇನ್ನಿತರ ಬೆಳೆಗಳು ಒಣಗಿ ಹಾನಿಯಾಗಿರುವುದರಿಂದ ಕೋಟ್ಯಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಸಕಾಲಕ್ಕೆ ಮಳೆ ಬಾರದೆ ಶೇಂಗಾ ಹಾಗೂ ಇನ್ನಿತರ ಬೆಳೆಗಳು ಒಣಗಿ ಹಾನಿಯಾಗಿದೆ.
ಬೆಳೆ ಕಟಾವಿಗಿಂತಲೂ ಮುಂಚಿತವಾಗಿ ಕೆಲವರು ದನ ಕರುಗಳ ಮೇವಿಗಾಗಿ ಬೆಳೆ ಕಟಾವು ಮಾಡಲು ನಿರ್ಧರಿಸಿದ್ದಾರೆ. ಕೆಲವು ರೈತರು ಟ್ಯಾಂಕರ್‌ಗಳಿಂದ ಮತ್ತು ಅಕ್ಕ ಪಕ್ಕದಲ್ಲಿನ ನೀರಾವರಿ ಜಮೀನುಗಳಿಂದ ನೀರು ಪಡೆದು ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಶೇಂಗಾ ಮತ್ತು ಇನ್ನಿತರ ಬೆಳೆಗಳ ಬಿತ್ತನೆಗೆ ವ್ಯಯಿಸಿದ ಖರ್ಚನ್ನು ಭರಿಸಲಾಗದೆ ರೈತರು ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಸರ್ಕಾರ ಬೆಳೆ ಹಾನಿಯನ್ನು ಪರಿಗಣಿಸಿ ಬರಪೀಡಿತ ಪ್ರದೇಶವೆಂದು ಘೋಷಿಸಲು ಇನ್ನೂ ಮುಂದಾಗಿಲ್ಲ. ಕಳೆದ ಬಾರಿ ತಾಲೂಕಿನ ಎಲ್ಲಾ 16 ಗ್ರಾಪಂಗಳ ವ್ಯಾಪ್ತಿಯ ರೈತರು ಹೆಚ್ಚಾಗಿಬೆಳೆ ವಿಮೆ ಪಾವತಿಸಿದ್ದರೂ ಕೇವಲ 3 ಗ್ರಾಪಂಗಳ ರೈತರಿಗೆ ಬೆಳೆ ವಿಮೆ ನೀಡಿ ಉಳಿದ 13 ಗ್ರಾಪಂಗಳ ರೈತರಿಗೆ ಬೆಳೆ ವಿಮೆ ನೀಡದೆ ಅನ್ಯಾಯ ಮಾಡಲಾಗಿತ್ತು. ಈ ಬಾರಿ ಎಲ್ಲಾ ರೈತರಿಗೂ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪಾವತಿಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
ಮೊಳಕಾಲ್ಮೂರು ತಾಲೂಕಿನಲ್ಲಿ 32,800 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಮತ್ತು ಇನ್ನಿತರ ಬೆಳೆಗಳ ಬಿತ್ತನೆಗೆ ಗುರಿ ಹೊಂದಲಾಗಿದೆ. ಪ್ರಮುಖವಾಗಿ 26,800 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆ ಅಭಾವ ಉಂಟಾಗಿರುವುದರಿಂದ ಕಂದಾಯ ಮತ್ತು ಕೃಷಿ ಇಲಾಖೆಯವರು ಗ್ರಾಮ ಪಂಚಾಯಿತಿವಾರು ಜಂಟಿ ಸಮೀಕ್ಷೆ ನಡೆಸಿ ಶೇ.75ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿದೆ ಎಮದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.
ವಿ.ಸಿ. ಉಮೇಶ, ಸಹಾಯಕ ಕೃಷಿ ನಿರ್ದೇಶಕರು, ಮೊಳಕಾಲ್ಮೂರು
ತಾಲೂಕಿನಲ್ಲಿ ಮಳೆ ಕೊರತೆಯಿಂದ ಶೇ. 50 ಕ್ಕಿಂತ ಹೆಚ್ಚು ಇಳುವರಿ ನಷ್ಟವಾಗಿದೆ. ಆದ್ದರಿಂದ ಕೃಷಿ ಮತ್ತು ಕಂದಾಯ ಇಲಾಖೆಯವರು ನೀಡಿದ ವರದಿ ಆಧಾರದ ಮೇಲೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂಪನಿಯವರು ಕಟಾವಿನ ಮುಂಚೆ ಪರಿಹಾರ ನೀಡಬೇಕು. ನಂತರ ಉಳಿದ ಹಣ ನೀಡಲು ಮುಂದಾಗಲಿ.
ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.