ಎಂಪಿಎಂ ಕಾರ್ಖಾನೆಗೆ ಅರಣ್ಯಲೀಸ್‌ ಬೇಡ

ಪಶ್ಚಿಮಘಟ್ಟ ಪ್ರದೇಶದ ಅರಣ್ಯ ನಾಶವಾದರೆ ಸಕಲ ಜೀವರಾಶಿಗಳಿಗೆ ಕುತ್ತು

Team Udayavani, Nov 25, 2020, 7:39 PM IST

MPM

ಚಿತ್ರದುರ್ಗ: ಮಲೆನಾಡಿನ ಪಶ್ಚಿಮಘಟ್ಟ ಶ್ರೇಣಿಯ ನಿತ್ಯಹರಿದ್ವರ್ಣ ಸಸ್ಯರಾಶಿ ಹೊಂದಿರುವ ಅರಣ್ಯವನ್ನುಸರ್ಕಾರ ಮತ್ತೆ ಭದ್ರಾವತಿಯ ಮೈಸೂರು ಪೇಪರ್‌ ಮಿಲ್‌(ಎಂಪಿಎಂ) ಕಾರ್ಖಾನೆಗೆ ನೀಡಲು ಮುಂದಾಗಿದ್ದು, ಇದರ ವಿರುದ್ಧ ರೈತರು, ಪರಿಸರ ಪ್ರೇಮಿಗಳು ಹಾಗೂ ಈ ಭಾಗದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತಶ್ರೀಪಾಲ್‌ ಹೇಳಿದರು.

ರೈತ ಸಂಘ ಹಾಗೂ ಹಸಿರುಸೇನೆಯಿಂದನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, 1980 ರಲ್ಲಿ ಎಂಪಿಎಂಗೆ 20005.42 ಹೆಕ್ಟೇರ್‌ ಅರಣ್ಯ ಭೂಮಿಯನ್ನು 40ವರ್ಷಗಳ ಸೀಮಿತ ಅವ ಧಿಗೆ ಲೀಸ್‌ ಗೆ ನೀಡಲಾಗಿತ್ತು. ಈ ವರ್ಷಕ್ಕೆ ಈ ಒಪ್ಪಂದ ಮುಗಿದಿದೆ ಎಂದು ತಿಳಿಸಿದರು.

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಗೆ ಹರಡಿಕೊಂಡಿರುವ ಈ ಭೂಮಿಯಲ್ಲಿ ಅಕೇಶಿಯಾ, ನೀಲಗಿರಿ, ಪೈನೂಸ್‌ ಪ್ಲಾಂಟೇಶನ್‌ ಮಾಡಲಾಗಿದೆ. ತಕ್ಷಣ ಇದೆಲ್ಲವನ್ನೂ ತೆರವುಗೊಳಿಸಿ ಸ್ವಾಭಾವಿಕ ಅರಣ್ಯ ಬೆಳೆಸಬೇಕು. 40 ವರ್ಷದ ಗುತ್ತಿಗೆ ಅವ ಧಿ ಮುಗಿದ ನಂತರ ಸರ್ಕಾರ ಮತ್ತೆ ಲೀಸ್‌ಗೆ ನೀಡಲು ಟೆಂಡರ್‌ ಕರೆದಿದೆ. ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಿ 5 ವರ್ಷಗಳಾಗಿವೆ. ಅಲ್ಲಿನ ಎಲ್ಲಾ ಯಂತ್ರೋಪಕರಣಗಳು ಹಾಳಾಗಿವೆ. ಅಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಕೊಡಬೇಕಾದಭತ್ಯೆಗಳನ್ನು ಸರಿಯಾಗಿ ನೀಡಿಲ್ಲ. ಹೀಗಿರುವಾಗ ಮತ್ತೆ ಅರಣ್ಯ ಭೂಮಿಯನ್ನು ಲೀಸ್‌ಗೆ ನೀಡಿ ಕಾರ್ಖಾನೆ ಆರಂಭಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಪರಿಸರದಲ್ಲಿ ಆಗುತ್ತಿರುವ ಬದಲಾವಣೆ ತಡೆಯಲು ಪಶ್ಚಿಮ ಘಟ್ಟದಲ್ಲಿ ಅರಣ್ಯ ಬೆಳೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪರಿಸರ, ನೆಲ, ಜಲವನ್ನೆಲ್ಲಾ ಖಾಸಗಿಯವರಿಗೆಮಾರಾಟ ಮಾಡಿ ಬದುಕನ್ನು ದಿವಾಳಿಯಾಗಿಸುವ ಮುನ್ನ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆಯಿದೆ. ಕಾಪೊìರೇಟ್‌ ಕಂಪನಿಗಳ ಬಗ್ಗೆ ಕಾಳಜಿಯಿರುವ ಸರ್ಕಾರ ಅರಣ್ಯ ಭೂಮಿಯಲ್ಲಿ ಪ್ಲಾಂಟೇಷನ್‌ ಬೆಳೆಸುವುದು ಬೇಡ. ದೊಡ್ಡ ಮಟ್ಟದ ಹೋರಾಟ ಮಾಡೋಣ ಎಂದು ಆಹ್ವಾನಿಸಿದರು.

ಇದನ್ನೂ ಓದಿ:ಕುಮಾರವ್ಯಾಸನ ತಾಳೆಗರಿ ಹಸ್ತಪ್ರತಿ ಸಂರಕ್ಷಣೆ

ಪತ್ರಕರ್ತ ಶಶಿ ಸಂಪಳ್ಳಿ ಮಾತನಾಡಿ,ಈಗಾಗಲೇ ಎಲ್ಲವನ್ನು ಒಂದೊಂದಾಗಿ ಖಾಸಗೀಕರಣಗೊಳಿಸುತ್ತಿರುವ ರಾಜ್ಯ ಸರ್ಕಾರ ಎಂ.ಪಿ.ಎಂ.ಕಾರ್ಖಾನೆಗೆ ಕೊಟ್ಟ ಅರಣ್ಯಭೂಮಿಅವ ಧಿ ಮುಗಿದಿದ್ದರೂ ಮತ್ತೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸಂಚು ಹೂಡುತ್ತಿದೆ. ಇದರಿಂದ ಇಡೀ ಪರಿಸರ ನಾಶವಾಗಲಿದೆ. ಭೂಮಿ ನಂಬಿಕೊಂಡಿರುವ ರೈತ, ಅಲ್ಲಿನ ಸಕಲ ಜೀವರಾಶಿಗಳಿಗೆ ಕುತ್ತು ಬರಲಿದೆ. ಇನ್ನಾದರೂ ಸಂಘಟನೆಗಳು, ಹೋರಾಟಗಾರರು, ರೈತರು ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ಮಾಡಬೇಕಿದೆ ಎಂದರು.

ಡಿ.ಎಸ್‌.ಎಸ್‌. ರಾಜ್ಯ ಸಂಚಾಲಕ ಶಿವಮೊಗ್ಗದಗುರುಮೂರ್ತಿ ಮಾಡನಾಡಿ, ಎಂ.ಪಿ.ಎಂ.ಗೆ ನೀಡಿದ್ದ 82 ಸಾವಿರ ಎಕರೆ ಅರಣ್ಯಭೂಮಿಯ ನಲವತ್ತು ವರ್ಷದಗುತ್ತಿಗೆ ಅವಧಿ ಪೂರ್ಣಗೊಂಡಿದ್ದರು ಮತ್ತೆ ನಲವತ್ತು ವರ್ಷ ಮುಂದುವರೆಸಿ ಖಾಸಗೀಕರಣಗೊಳಿಸಲು ಬಿಡಬಾರದು. ಆದಿತ್ಯ ಬಿರ್ಲಾ ಸಂಸ್ಥೆಗೆ ಕೊಡುವುದಾಗಿಹೇಳಿದಾಗ ನಾವುಗಳು ವಿರೋ ಧಿಸಿದ್ದೆವು. ಹಾಗಾಗಿ ಈಗ ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ ಜನರು, ರೈತರು, ಹೋರಾಟಗಾರರಲ್ಲಿ ಜಾಗ್ರತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದೊಂದು ಜನಾಂದೋಲನವಾಗಬೇಕು ಎನ್ನುವುದು ಉದ್ದೇಶ ಎಂದು ಹೇಳಿದರು.

ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಪಶ್ಚಿಮಘಟ್ಟಗಳ  ಕಾಡು ನಾಶವಾದರೆ ಮನುಷ್ಯನ ಬದುಕಿಗೆ ಕೊಳ್ಳಿಯಿಟ್ಟಂತಾಗುತ್ತದೆ. ಅಲ್ಲಿ ನೀಲಗಿರಿ, ಅಕೇಷಿಯಾ ಬೆಳೆಸುವುದು ಬೇಡ. ಇದರಿಂದ ಪರಿಸರ ನಾಶವಾಗುತ್ತದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ ಬಾಬು ಮಾತನಾಡಿ, ರೈತರು ಜಾಗ್ರತರಾಗುವವರೆಗೆ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದಹಿಂದೆ ಸರಿಯುವುದಿಲ್ಲ. ನೆಲ, ಜಲ, ಅರಣ್ಯವನ್ನು ಉಳಿಸಿಕೊಳ್ಳಬೇಕಿದೆ. ಎಲ್ಲಾ ಸರ್ಕಾರಗಳು ಲಾಭಕ್ಕೆ ನಿಂತಿವೆ. ಸುಗ್ರೀವಾಜ್ಞೆ ಮೂಲಕ ಭೂಸುಧಾರಣೆ ಕಾಯಿದೆ ಜಾರಿಗೆ ತಂದಿರುವ ರಾಜ್ಯ ಸರ್ಕಾರ ವಿದ್ಯುತ್‌ ದರ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಹೊರೆ ಹೇರಿದೆ. ದೇಶದ ಸಂಪತ್ತನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕ್ರಪ್ಪ, ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಹೊರಕೇರಪ್ಪ,ಕಮ್ಯುನಿಸ್ಟ್‌ ಪಕ್ಷದ ಜಿ.ಸಿ.ಸುರೇಶ್‌ಬಾಬು, ರವಿಕುಮಾರ್‌ ಮಾತನಾಡಿದರು.

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

ಸಂಸದ ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

MP ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.