ಖಾಸಗಿ ವಿಮಾ ಕಂಪನಿಗಳಿಂದ ವಂಚನೆ
Team Udayavani, Feb 27, 2021, 3:57 PM IST
ಚಳ್ಳಕೆರೆ: ತಾಲೂಕಿನ ರೈತರಿಗೆ ಲಕ್ಷಾಂತರ ರೂ. ನೀಡಬೇಕಾದ ಖಾಸಗಿ ವಿಮಾ ಕಂಪನಿಗಳು ಹಣ ನೀಡದೇ ರೈತರನ್ನು ವಂಚಿಸುತ್ತಿದ್ದು, ಈ ಬಗ್ಗೆ ತಾಲೂಕು ಮಟ್ಟದ ಅ ಧಿಕಾರಿಗಳು ಸಹ ಖಾಸಗಿ ವಿಮಾ ಕಂಪನಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಮೂಲಕ ರೈತರ ಶೋಷಣೆಗೆ ಮುಂದಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆರೋಪಿಸಿದರು.
ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 2016-17ರಿಂದ 2019-20ರ ಅವಧಿಯ ಬಹುತೇಕ ರೈತರಿಗೆ ಖಾಸಗಿ ವಿಮಾ ಕಂಪನಿಗಳು ಹಣ ನೀಡಿಲ್ಲ. ಈ ಬಗ್ಗೆ ವಿಮಾ ಕಂಪನಿಗಳ ಸ್ಪಷ್ಟ ಮಾಹಿತಿಯನ್ನು ಸಹ ಇಲಾಖೆ ಅಧಿ ಕಾರಿಗಳು ನೀಡುತ್ತಿಲ್ಲ. ರೈತರು ಕಷ್ಟಪಟ್ಟು ತಮ್ಮ ಬೆಳೆಗೆ ವಿಮೆ ಪಾವತಿಸಿದ್ದರೂ ರೈತರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಬೆಳೆ ವಿಮೆ ಹಣ ಇದುವರೆಗೂ ಬಂದಿಲ್ಲ. ಶೇಂಗಾ, ಈರುಳ್ಳಿ, ಟಮೊಟೋ ಬೆಳೆಗಳು ಸಹ ನೆಲಕಚ್ಚಿದ್ದು, ಬಹುತೇಕ ಎಲ್ಲಾ ರೈತರು ನಷ್ಟದಲ್ಲಿದ್ದಾರೆ. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಬೆಳೆ ನಷ್ಟ ಪರಿಹಾರವನ್ನು ವಿತರಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಮಾತನಾಡಿ, ಬೆಳೆ ವಿಮೆಗೆ ಸಂಬಂಧಪಟ್ಟ ಖಾಸಗಿ ಕಂಪನಿ ಅಧಿ ಕಾರಿಗಳನ್ನು ಕರೆಸಿ ಚರ್ಚೆ ನಡೆಸಲಾಗಿದೆ. ಅವರು ನೀಡಿರುವ ಮಾಹಿತಿ ಪ್ರಕಾರ 2019-20ನೇ ಸಾಲಿನಲ್ಲಿ ಚಳ್ಳಕೆರೆ ತಾಲೂಕಿಗೆ 40.35 ಕೋಟಿ ವಿಮೆ ಹಣ ಪಾವತಿಯಾಗಿದ್ದು, 65 ಲಕ್ಷ ಮಾತ್ರ ಪಾವತಿಯಾಗಬೇಕಿದೆ. ಈ ಬಗ್ಗೆ ವಿಮಾ ಕಂಪನಿಗಳೊಂದಿಗೆ ಚರ್ಚೆ ನಡೆಸುವ ಭರವಸೆ ನೀಡಿದರು.
ಕೃಷಿ ಅಧಿಕಾರಿ ಡಾ.ಮೋಹನ್ ಕುಮಾರ್ ಮಾತನಾಡಿ, ಎನ್‌ಡಿಆರ್ ಎಫ್ ಯೋಜನೆಯಡಿಯಲ್ಲಿ ರೈತರಿಗೆ ಬೆಳೆ ವಿಮೆ ಪಾವತಿಸಲಾಗಿದೆ. ಸಿದ್ದೇಶ್ವರನದುರ್ಗ ಮತ್ತು ಪಿ.ಮಹದೇವಪುರ ಹೊರತುಪಡಿಸಿ ಬೆಳೆಗಳು ನಷ್ಟಕ್ಕೊಳಗಾಗಿವೆ. ವಿವಿಧ ಇಲಾಖೆಯ ಅಧಿ ಕಾರಿಗಳೊಂದಿಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಬೆಳೆ ವಿಮೆ ಕಂಪನಿಯ ಬಾಬು, ಬಾಲರಾಜು ಮಾತನಾಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಗೌರವಾಧ್ಯಕ್ಷ ಎಂ.ಎನ್.ಚನ್ನಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ವಡೇರಹಳ್ಳಿ ಬಸವರಾಜು, ತಳಕು ನಾಗರಾಜು, ವರವುತಿಪ್ಪೇಸ್ವಾಮಿ, ಹಿರೇಹಳ್ಳಿ ಯರ್ರಿಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ