ಚಿತ್ರದುರ್ಗದಲ್ಲಿ ಮಹಿಳೆಯರ ಉಚಿತ ಸಾರಿಗೆ ಸೇವೆ “ಶಕ್ತಿ” ಯೋಜನೆಗೆ ಚಾಲನೆ


Team Udayavani, Jun 11, 2023, 2:17 PM IST

ಚಿತ್ರದುರ್ಗದಲ್ಲಿ ಮಹಿಳೆಯರ ಉಚಿತ ಸಾರಿಗೆ ಸೇವೆಗೆ ಚಾಲನೆ

ಚಿತ್ರದುರ್ಗ: ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಅವಕಾಶ ನೀಡಲಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಚಿತ್ರದುರ್ಗ ಸಾರಿಗೆ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ “ಶಕ್ತಿ” ಯೋಜನೆಗೆ ಚಾಲನೆ ನೀಡಿ ಮಾತನಾಡಿದರು‌.

ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೇಸ್ ನೀಡಿದ ಭರವಸೆಗಳ ಪೈಕಿ ಮೊದಲನೇ ಭರವಸೆಯನ್ನು  ಸರ್ಕಾರ ರಚನೆಯಾದ ತಿಂಗಳೊಳಗೆ ನೆರವೇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 2013 ರಲ್ಲಿ ಅಧಿಕಾರಕ್ಕೆ ಬಂದಾಗ ಪಕ್ಷದ ಪ್ರನಾಳಿಕೆಯಲ್ಲಿ ಹೇಳಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿತ್ತು. ಇದೇ ರೀತಿ ಶಕ್ತಿ ಯೋಜನೆ ಜಾರಿ ಮಾಡಿ ಮಹಿಳಾ ಸಬಲೀಕರಣಕ್ಕೆ ಅವಕಾಶ ನೀಡಲಾಗಿದೆ. ಇಂದರಿಂದ ಎಲ್ಲಾ ಮಹಿಳೆಯರಿಗೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಓಡಾಡುವ ಅವಕಾಶ  ಲಭಿಸಲಿದೆ. ಈ ಮೂಲಕ ಸರ್ಕಾರದ ಮೊದಲ ಗ್ಯಾರೆಂಟಿ ಯೋಜನೆ ಪೂರ್ಣಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಬರುವ ದಿನಗಳಲ್ಲಿ ಜಿಲ್ಲೆಯ ಭದ್ರಾಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ಜಾರಿಗೆ ಪ್ರಯತ್ನ ನಡೆಸುತ್ತೇನೆ. ಜುಲೈ 1 ರಿಂದ ಉಚಿತ ವಿದ್ಯುತ್ ಹಾಗೂ ಅಕ್ಕಿ ನೀಡುವ ಕಾರ್ಯಕ್ರಮ ಚಾಲನೆ ನೀಡಲಾಗುವುದು. ಆಗಸ್ಟ್ ನಿಂದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ ಎಂದರು‌.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ “ಶಕ್ತಿ” ಯೋಜನೆ ರಾಜ್ಯ ಸರ್ಕಾರದಿಂದ ಬಹುದೊಡ್ಡ ಯೋಜನೆಯಾಗಿದೆ.‌ಚುನಾವಣೆ ಪೂರ್ವದಲ್ಲಿ ನೀಡಿದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದ ಅವರು, ಶಕ್ತಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಏಕಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆ ಆರಂಭ ಮಾಡಲಾಗುತ್ತಿದೆ. ಮಹೀಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಇದು ಮಹಿಳೆಯರ ಶಿಕ್ಷಣ, ಉದ್ಯೋಗಗಳಲ್ಲಿ ಸಬಲೀಕರಣ ಹೊಂದಲು ಅವಕಾಶ ನೀಡುತ್ತದೆ. ಮಹಿಳಾ ಹಾಗೂ ವಿದ್ಯಾರ್ಥಿಗಳಿಗೆ ಓಡಾಟಕ್ಕೆ ಸಹಾಯಕವಾಗಿದೆ. ಜಿಲ್ಲೆಯ ಸಮಸ್ತ ಮಹಿಳೆಯರಿಗೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು‌. ಇದನ್ನು ಕುಟುಂಬ, ಸಮಾಜ ಹಾಗೂ ದೇಶವನ್ನು ಸಧೃಡವಾಗಿಸಲು ಬಳಸಿಕೊಳ್ಳಬೇಕು ಎಂದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿರಾಮ್ಪ್ರಸಾತ್ ಮನೋಹರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್. ದಿವಾಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್, ನಗರ ಸಭಾ ಸದಸ್ಯರಾದ ಮೀನಾಕ್ಷಮ್ಮ, ಸುರೇಶ್ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಚಿತ್ರದುರ್ಗ -ಬೆಂಗಳೂರು ಬಸ್‌ನಲ್ಲಿ ತೆರಳುವ ಮಹಿಳಾ ಪ್ರಯಾಣಿಕರಿಗೆ ಸಚಿವ ಡಿ‌.ಸುಧಾಕರ್ ಉಚಿತ ಬಸ್ ಟಿಕೇಟ್ ನೀಡಿದರು‌. ಬಸ್ ಏರುವ ಮಹಿಳೆಯರಿಗೆ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು. ಸಿಹಿ ಸಹ ಹಂಚಲಾಯಿತು.  ಚಿತ್ರದುರ್ಗ-ದಾವಣಗೆರೆ, ಚಿತ್ರದುರ್ಗ-ಹಿರಿಯೂರು, ಚಿತ್ರದುರ್ಗ-ಚಳ್ಳಕೆರೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಸಾರಿಗ ಸೇವೆಗೆ ಚಾಲನೆ ನೀಡಲಾಯಿತು‌. ಮಹಿಳಾ ಪ್ರಯಾಣಿಕರು ಸಂಭ್ರಮದಿಂದ ಪ್ರಯಾಣ ಬೆಳಸಿದರು.

ಟಾಪ್ ನ್ಯೂಸ್

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

12

Vettaiyan Trailer: ಪಾಪಿಗಳ ಎನ್‌ಕೌಂಟರ್‌ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ

ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಕಿಟ್ ಒದಗಿಸಲು ಬಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

IAF Chopper: ಪ್ರವಾಹದ ನೀರಿನಲ್ಲೇ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್… ತಪ್ಪಿದ ದುರಂತ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

13-sirawara

Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-chitradurga

Politics: ಸೈಟ್ ವಾಪಸ್ ನೀಡಿದ್ದು,ಪಾರ್ವತಿಯವರ ತ್ಯಾಗ ಮನೋಭಾವನೆ ತೋರಿಸುತ್ತೆ: ಡಿ. ಸುಧಾಕರ್

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

13-

ವಿದ್ಯುತ್ ಪರಿವರ್ತಕದ ಬಳಿ ಮೇಯುತ್ತಿದ್ದ 2 ಎಮ್ಮೆಗಳಿಗೆ ವಿದ್ಯುತ್ ಪ್ರವಹಿಸಿ ಸಾವು

karajola

Siddaramaiah ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ: ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

023

Sandalwood: ಶೀಘ್ರಮೇವ ಗೆಲುವು ಪ್ರಾಪ್ತಿರಸ್ತು

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

12

Vettaiyan Trailer: ಪಾಪಿಗಳ ಎನ್‌ಕೌಂಟರ್‌ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ

15-Chincholi

Chincholi: ಬಟ್ಟೆ ಒಗೆಯುವ ವೇಳೆ ‌ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.