ಸರ್ಕಾರಗಳು ರೈತರ ನೆರವಿಗೆ ಧಾವಿಸಲಿ
Team Udayavani, Jul 29, 2017, 2:22 PM IST
ಚಿತ್ರದುರ್ಗ: ಭೀಕರ ಬರಗಾಲಕ್ಕೆ ತುತ್ತಾಗಿರುವ ರೈತರ ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಬಣದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಹೇಳಿದರು.
ಗುಡ್ಡದರಂಗವ್ವನಹಳ್ಳಿ ಗ್ರಾಮದಲ್ಲಿ ರೈತಸಂಘದ ಗ್ರಾಮ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಕಳೆದ 20 ವರ್ಷಗಳಿಂದೀಚೆಗೆ 3 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಕಾರಣಗಳು ಒಂದರೆಡಲ್ಲ. ಕೇಂದ್ರ ಸರ್ಕಾರ ವಿಶ್ವ ವಾಣಿಜ್ಯ ಸಂಸ್ಥೆಯೊಂದಿಗೆ ಮಾಡಿಕೊಂಡ ವ್ಯಾಪಾರದ ಒಪ್ಪಂದದ ಕೃಷಿ ಉತ್ಪನ್ನಗಳಿಗೂ ಹಾಗೂ ಕೈಗಾರಿಕೆಯ ಉತ್ಪನ್ನಗಳಿಗೂ ಇರುವ ಬೆಲೆ ವ್ಯತ್ಯಾಸ. ಬೆಳೆ ಬೆಳೆಯಲು ನೀರು ಮುಂತಾದ ಮೂಲ ಸೌಕರ್ಯ, ಮಾರುಕಟ್ಟೆಯಲ್ಲಿ ಬೆಲೆ ಭದ್ರತೆ ಇಲ್ಲದಾಗಿದೆ ಎಂದರು.
ಪ್ರತಿವರ್ಷ ರೈತನ ತಲೆಯ ಮೇಲೆ ಸಾಲ ಏರುತ್ತಲೇ ಹೋಗುತ್ತದೆ. ಪರಿಣಾಮವಾಗಿ ರೈತರ ಮಕ್ಕಳು ಕೃಷಿಯಿಂದ ದೂರವಾಗಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಅಲ್ಲದೇ ಬೀಜ, ಗೊಬ್ಬರ, ಔಷ ಧ ಮುಂತಾದ ಕಂಪನಿಗಳು ಮತ್ತು ವರ್ತಕರು ಜಿಗಣೆಗಳಂತೆ ರೈತರ ರಕ್ತ ಹೀರುತ್ತಿದ್ದಾರೆ. ಹೆಚ್ಚು
ದುಡಿದ ರೈತ ಹೆಚ್ಚೆಚ್ಚು ಸಾಲಗಾರನಾಗುತ್ತಿದ್ದಾನೆ. ರೈತ ಬೆಳೆದ ಎಲ್ಲ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಂಡು ಉದ್ದಿಮೆದಾರರು ಶ್ರೀಮಂತಿಕೆಯಲ್ಲಿ ಬೀಗುತ್ತಿದ್ದಾರೆ. ಕೃಷಿ ಉಳಿಸುವ ಯಾವುದೇ ಆಲೋಚನೆಗಳು ಸರ್ಕಾರಗಳಿಗಿಲ್ಲ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಒಳಗೊಂಡತೆ ಎಲ್ಲಾ ಮೂಲಗಳನ್ನು ಬಳಸಿ ಎಲ್ಲಾ ಗ್ರಾಮಗಳ ರೈತರ ಜಮೀನಿಗೆ ನೀರು ಹಾಯಿಸಲು ಸಮಗ್ರ ನೀರಾವರಿ ಪೂರೈಸಬೇಕು ಎಂದು ಒತ್ತಾಯಿಸಿದರು. ಪಟೇಲ್ ಚಂದ್ರಶೇಖರಪ್ಪ, ಹೊನ್ನೂರು ಮುನಿಯಪ್ಪ, ರಾಜು, ರೆಡ್ಡಿಹಳ್ಳಿ ವೀರಣ್ಣ, ಕಬ್ಬಿಗೆರೆ ನಾಗರಾಜ್, ಮಲ್ಲಿಕಾರ್ಜುನ್, ಡಿ.ಎಸ್.ಹಳ್ಳಿ, ಬಸವನ ಗೌಡ್ರು, ರಾಮರೆಡ್ಡಿ, ಶ್ರೀನಿವಾಸ್ ಸುಲ್ತಾನಿಪುರ, ಬೈಲಪ್ಪ, ಕರಿಸಿದ್ದಯ್ಯ, ಮುರಿಗೇಂದ್ರಯ್ಯ,
ಶಿವುಕುಮಾರ್, ಮಂಜಣ್ಣ ಪ್ರವೀಣ, ಶಿವಕುಮಾರ್, ಮಾರುತಿ, ಮಲ್ಲಿಕಾರ್ಜುನಪ್ಪ, ಪಾತಣ್ಣ, ನಾಗರಾಜ್, ಸುನೀಲ್, ಎಸ್.ಟಿ. ರವಿ, ದರ್ಶನ್ ಕೆ.ಆರ್.ನವೀನ್ ಕುಮಾರ್, ವಿರೂಪಾಕ್ಷಪ್ಪ, ಆಶೋಕರೆಡ್ಡಿ, ರುದ್ರಸ್ವಾಮಿ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.