ಮೊಳಕಾಲ್ಮೂರಲ್ಲಿ ಭಾರೀ ಮಳೆ
Team Udayavani, Jul 26, 2020, 11:13 AM IST
ಮೊಳಕಾಲ್ಮೂರು: ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, 15 ಮನೆಗಳು ಭಾಗಶಃ ಹಾನಿಗೀಡಾಗಿವೆ. ಮೊಳಕಾಲ್ಮೂರು ಪಟ್ಟಣ ವ್ಯಾಪ್ತಿಯಲ್ಲಿ 62.6 ಮಿಮೀ ಮಳೆಯಾಗಿದೆ.
ರಾಯಾಪುರ 33, ಬಿ.ಜಿ. ಕೆರೆಯಲ್ಲಿ 20, ರಾಂಪುರದಲ್ಲಿ 96.2 ಹಾಗೂ ದೇವಸಮುದ್ರದಲ್ಲಿ 51.2 ಮಿಮೀ ಮಳೆ ಸುರಿದಿದೆ. ಚಿನ್ನಹಗರಿ ನದಿ (ಜಿನಗಿ ಹಳ್ಳ )ದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದೆ. ಪಟ್ಟಣದ ಕೋತಲಗೊಂದಿಕೆರೆ, ದವಳಪ್ಪನಕುಂಟೆ, ಕೂಗೆಗುಡ್ಡದ ಕೆರೆ, ಶ್ರೀನಿವಾಸ ನಾಯಕ ಬಡಾವಣೆ ಬಳಿಯ ಹೊಂಡಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಭರ್ತಿಯಾಗುವ ಹಂತ ತಲುಪಿವೆ. ತಾಲೂಕಿನ ಗುಂಡ್ಲೂರು ಕೆರೆ, ಕೋನಸಾಗರ ಕೆರೆ, ತುಪ್ಪದಕ್ಕನಹಳ್ಳಿ ಕೆರೆ, ಸಿದ್ದಾಪುರ ಕೆರೆ, ನಾಗಸಮುದ್ರ ಕೆರೆ, ದೇವಸಮುದ್ರದಕೆರೆ, ಜೆ.ಬಿ. ಹಳ್ಳಿ ಬಳಿಯ ಫಕ್ಕುರ್ತಿ ಕೆರೆ ಸೇರಿದಂತೆ ಇನ್ನಿತರ ಕೆರೆಗಳಿಗೆ ಭಾರಿ ಪ್ರಮಾಣದ ನೀರು ಹರಿದಿದೆ. ಚಿಕ್ಕೋಬನಹಳ್ಳಿಯ ಗ್ರಾಮದ ಮನೆಗಳಿಗೆ ನೀರು ಹರಿದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಬೊಮ್ಮಲಿಂಗನಹಳ್ಳಿ ಗ್ರಾಮದಲ್ಲಿ 2, ಹಿರೇಕೆರೆಹಳ್ಳಿಯಲ್ಲಿ 2, ಸಿದ್ದಾಪುರ ಗ್ರಾಮದಲ್ಲಿ 3, ಕೆಳಗಿನಕಣಿವೆ ಗ್ರಾಮದಲ್ಲಿ 1, ರಾಂಪುರದಲ್ಲಿ 1, ವೀರಾಪುರದಲ್ಲಿ 2, ವೆಂಕಟಾಪುರದಲ್ಲಿ 2, ತಿಮ್ಮಲಾಪುರದಲ್ಲಿ 1 ಹಾಗೂ ಮುರುಡಿ ಗ್ರಾಮದಲ್ಲಿ 1 ಮನೆಗಳು ಸೇರಿದಂತೆ ಒಟ್ಟು 15 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಶಿರಸ್ತೇದಾರ ಏಳುಕೋಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.