ವಾಣಿವಿಲಾಸ ಸಾಗರದಲ್ಲಿ 107 ಅಡಿ ನೀರು ಸಂಗ್ರಹ
Team Udayavani, Sep 15, 2021, 2:18 PM IST
ಹಿರಿಯೂರು: ಬಯಲುಸೀಮೆಯ ಜೀವನಾಡಿವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವವಾಣಿವಿಲಾಸ ಸಾಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಸೆ. 13ರಂದು 107 ಅಡಿ ನೀರು ಹರಿದು ಬಂದಿದೆ.
ಹತ್ತುವರ್ಷಗಳ ಬಳಿಕ ನೀರಿನ ಮಟ್ಟ 107 ಅಡಿ ಇದೆ.ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಸುತ್ತಮುತ್ತ, ಕಡೂರು, ಬೀರೂರು, ಅಜ್ಜಂಪುರ,ತರೀಕೆರೆ, ಹೊಸದುರ್ಗ ತಾಲೂಕಿನಾದ್ಯಂತ ಸುರಿದಮಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಲ್ಲಿಅಜ್ಜಂಪುರ ಸಮೀಪದ ಪಂಪ್ ಹೌಸ್ ನಿಂದ ನಿತ್ಯನೀರನ್ನು ಲಿಫ್ಟ್ ಮಾಡುತ್ತಿರುವುದರಿಂದಾಗಿ ಬಹುತೇಕಕೆರೆ ಕಟ್ಟೆ, ಬ್ಯಾರೇಜ್ ಗಳು ಭರ್ತಿಯಾಗಿವೆ.
ಈ ನೀರುವಾಣಿ ವಿಲಾಸ ಸಾಗರಕ್ಕೆ ಹರಿದು ಬರುತ್ತಿದೆ. ಮುಂದಿನಒಂದು ವಾರದಲ್ಲಿ 110 ಅಡಿಗೆ ಹೆಚ್ಚುವ ನಿರೀಕ್ಷೆಯಿದೆ ಎಂಬುದು ನೀರಾವರಿ ಇಲಾಖೆ ಅಧಿ ಕಾರಿಗಳಅಭಿಪ್ರಾಯ.ಗುಡ್ಡ, ಬೆಟ್ಟಗಳ ಮಧ್ಯ ಸ್ವಾಭಾವಿಕವಾಗಿನಿರ್ಮಿಸಿರುವ ವಾಣಿವಿಲಾಸ ಸಾಗರಕ್ಕೆ ಹೆಚ್ಚಿನನೀರು ಹರಿದು ಬಂದಿರುವುದರಿಂದ ನೋಡಲುನಯನ ಮನೋಹರವಾಗಿದೆ. ಡ್ಯಾಂ ಬಳಿಇರುವ ಔಷಧ ವನ ಕೂಡ ನೋಡುಗರಿಗೆ ಖುಷಿನೀಡುತ್ತದೆ.
ಹಿರಿಯೂರು ಪಟ್ಟಣದಿಂದಹೊಸದುರ್ಗ ರಸ್ತೆಯಲ್ಲಿ 17 ಕಿಮೀ ಸಾಗಿದರೆಸಿಗುವುದೇ ಭಾರತದ ಭೂಪಟವನ್ನು ಹೋಲುವವಾಣಿವಿಲಾಸ ಸಾಗರ ಸಿಗುತ್ತದೆ. ಕೊರೊನಾಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳಕಡೆ ಮುಖ ಮಾಡಿರುವ ಯುವಕರಿಗೆ ತುಂಬಿಹರಿಯುತ್ತಿರುವ ವಾಣಿವಿಲಾಸ ಸಾಗರ ಕೃಷಿಚಟುವಟಿಕೆಗಳಲ್ಲಿ ತೊಡಗಲು ಪ್ರೇರಣೆ ನೀಡಿದೆ.ಇದರಿಂದ ತಾಲೂಕಿನಲ್ಲಿ ಮತ್ತೆ ಹಸಿರು ಪರಿಸರಸೃಷ್ಟಿಯಾಗುವ ಆಸೆ ಚಿಗುರೊಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.