ಐತಿಹಾಸಿಕ ಕಾದಂಬರಿ ರಚನೆ ಲೇಖಕರಿಗೆ ಸವಾಲು


Team Udayavani, Aug 27, 2018, 5:03 PM IST

cta-1.jpg

ಚಿತ್ರದುರ್ಗ: ಇತಿಹಾಸ ಪುರುಷರ ಚರಿತ್ರೆಗೆ ಧಕ್ಕೆ ಬಾರದಂತೆ ಕಾದಂಬರಿ ಬರೆಯುವುದೆಂದರೆ ಕತ್ತಿ ಮೇಲೆ ನಡೆದಂತೆ ಎಂದು ತುಮಕೂರಿನ ವಿಮರ್ಶಕ ಡಾ| ಜಿ.ವಿ.ಆನಂದಮೂರ್ತಿ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಹಾಗೂ ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಾದಂಬರಿಕಾರ ಡಾ| ಬಿ.ಎಲ್‌. ವೇಣು ಬರೆದ “ರಾಜಾ ಮತ್ತಿ ತಿಮ್ಮಣ್ಣ ನಾಯಕ’ ಐತಿಹಾಸಿಕ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇತಿಹಾಸ ಪುರುಷರ ಆಳ್ವಿಕೆ, ಘಟನೆ ಕುರಿತು ಬರೆಯುವುದು ಲೇಖಕರಿಗೆ ದೊಡ್ಡ ಸವಾಲು. ಬಹಳ ಎಚ್ಚರಿಕೆ ವಹಿಸಿ ಚರಿತ್ರೆಗೆ ಚ್ಯುತಿ ಬಾರದಂತೆ ಕಾದಂಬರಿ ಬರೆಯಬೇಕು. ಆ ಕೆಲಸವನ್ನು ಬಿ.ಎಲ್‌. ವೇಣು ಈ ಕಾದಂಬರಿಯಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ. 16ನೇ ಶತಮಾನದಲ್ಲಿ ಚಿತ್ರದುರ್ಗ ಕೋಟೆಯನ್ನು ಆಳಿದ ಪಾಳೆಯಗಾರರನ್ನು ಕೇಂದ್ರೀಕರಿಸಿ “ರಾಜಾ ಮತ್ತಿ ತಿಮ್ಮಣ್ಣ ನಾಯಕ’ ಕಾದಂಬರಿ ಬರೆದಿದ್ದಾರೆ. ಆದರ್ಶ ಸಮಾಜ ಹೇಗಿರಬೇಕೆಂಬುದನ್ನು ಬಹಳ ಸುಂದರವಾಗಿ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಎಲ್ಲ ವಿದ್ಯಮಾನ, ಪಾತ್ರ, ಘಟನೆಗಳು ಕಣ್ಣ ಮುಂದೆ ಬಂದು ನಿಲ್ಲವಷ್ಟು ಕಾದಂಬರಿ ಪ್ರಭಾವಶಾಲಿಯಾಗಿದೆ. ಶ್ರಮಿಕ ವರ್ಗಗಳಾದ ರೈತರು, ದುಡಿಯುವ ಜನ, ಮಹಿಳೆಯರು, ಭೂಮಿ ಸಮಾನ ಹಂಚಿಕೆ ಹೀಗೆ ಎಲ್ಲಾ ರೀತಿಯ ತಲ್ಲಣಗಳಿಗೆ
ಧ್ವನಿಯಾಗಿ ಕೃತಿ ಹೊರಹೊಮ್ಮಿದೆ. ರಾಜಸ್ವ, ಆಳ್ವಿಕೆ ಅರಮನೆಗೆ ಸೀಮಿತವಾಗಿರಬಾರದು ಎನ್ನುವುದನ್ನು ಮಾತು ಕ್ರಿಯೆಗಳ ಮೂಲಕ ಶಕ್ತಿಶಾಲಿಯಾಗಿ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಬುದ್ಧ, ಬಸವ, ಅಲ್ಲಮಪ್ರಭು, ಸರ್ವಜ್ಞ ಎಲ್ಲರೂ ಕಾದಂಬರಿಯಲ್ಲಿ ಬಂದು ಹೋಗಿದ್ದಾರೆ. ಇದೊಂದು ಹೊಸ ಕಾಲದ ಚಿಂತನೆ ಸಮಾನತೆಯ ಸಮಾಜವನ್ನು ಮೈಗೂಡಿಸಿಕೊಂಡಿರುವ ಅದ್ಭುತ ಕಾದಂಬರಿ.

ದುಡಿಯವ ಜನತೆಯ ವಿವೇಚನೆಗಳನ್ನು ದೊಡ್ಡ ದಾಹವನ್ನಾಗಿಸಿಕೊಂಡು ಬರೆದಿರುವ ಈ ಕಾದಂಬರಿಯನ್ನು ಎಲ್ಲರೂ ತಪ್ಪದೇ ಓದಲೇಬೇಕು ಎಂದು ಕೋರಿದರು. ರಾಜಾ ಮತ್ತಿ ತಿಮ್ಮಣ್ಣ ನಾಯಕ ಹಿಂಸೆಯ ವಿರೋಧಿಯಾಗಿದ್ದ ಎನ್ನುವುದು ಈ ಕಾದಂಬರಿಯಿಂದ ತಿಳಿಯುತ್ತದೆ. ಹಿಂಸೆ, ಕೌರ್ಯ, ದಬ್ಟಾಳಿಕೆ ಇಲ್ಲದ ಸಮಾಜವಿರಬೇಕು ಎನ್ನುವುದು ಈ ಕಾದಂಬರಿಯ ಮೂಲ ಉದ್ದೇಶ. 

ಪಾಳೆಯಗಾರರೆಂದರೆ ಬರೀ ಧೈರ್ಯ, ಸಾಹಸಕ್ಕಷ್ಟೆ ಹೆಸರುವಾಸಿಯಾಗಿರಬಾರದು. ಕತ್ತಿ ಹಿಡಿದರೂ ದಯೆ, ಕರುಣೆ ಇರಬೇಕು ಎನ್ನುವುದನ್ನು ಬರವಣಿಗೆಯಲ್ಲಿ ವೇಣು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಸಂಶೋಧಕ ಲಕ್ಷ್ಮಣ ತೆಲಗಾವಿ ಮಾತನಾಡಿ, ಚಿತ್ರದುರ್ಗದ ಭೂ ಪರಿಸರ ಸ್ವಾಭಿಮಾನ, ಛಲವನ್ನು ಕೆರಳಿಸಿತು ಎಂಬುದು ಕಾದಂಬರಿಯಲ್ಲಿ ಸ್ಪಷ್ಟವಾಗುತ್ತದೆ. ದುರ್ಗದಲ್ಲಿ ಕೆರೆ ಕಟ್ಟೆ, ಹೊಂಡ ನಿರ್ಮಿಸಿ ಸಕಲ ಜೀವರಾಶಿಗಳಿಗೂ ನೀರಿನ ದಾಹ ತೀರಿಸುವ ಹಂಬಲ ರಾಜಾ ಮತ್ತಿ ತಿಮ್ಮಣ್ಣ ನಾಯಕರಿಗೆ ಇತ್ತು. ಛಲ ಸಾಧಿಸಿದ ಮತ್ತಿ ತಿಮ್ಮಣ್ಣ ನಾಯಕರ ವ್ಯಕ್ತಿತ್ವವನ್ನು ಬಿ.ಎಲ್‌. ವೇಣು ಸರಿಯಾಗಿ ಗ್ರಹಿಸಿಕೊಂಡು ಕಾದಂಬರಿ ಬರೆದಿದ್ದಾರೆ ಎಂದರು.

ಸಾಹಿತಿ ಶಿವಮೊಗ್ಗದ ಶ್ರೀಕಂಠ ಕೂಡಿಗೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ವೀರೇಶ್‌, ಗೀತಾಂಜಲಿ ಪುಸ್ತಕ ಪ್ರಕಾಶನದ ಮೋಹನ್‌ಕುಮಾರ್‌, ಕಾದಂಬರಿಕಾರ ಡಾ| ಬಿ.ಎಲ್‌. ವೇಣು, ಸಾಹಿತಿ-ಚಿಂತಕ ಕುಂ. ವೀರಭದ್ರಪ್ಪ, ಲೋಕೇಶ್‌ ಅಗಸನಕಟ್ಟೆ, ಪ್ರಾಧ್ಯಾಪಕ ಡಾ| ಕರಿಯಪ್ಪ ಮಾಳಿಗೆ, ಪ್ರೊ| ಲಿಂಗಪ್ಪ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ, ಸಂಗೇನಹಳ್ಳಿ ಅಶೋಕ್‌ಕುಮಾರ್‌, ಆರ್‌. ಸತ್ಯಣ್ಣ, ಭದ್ರಣ್ಣ, ಅಹೋಬಲ ನಾಯಕ, ನಿರಂಜನ ದೇವರಮನೆ, ಲಲಿತಾ ಕೃಷ್ಣಮೂರ್ತಿ ಮತ್ತಿತರರು ಇದ್ದರು. ಪ್ರಾಧ್ಯಾಪಕ ಮಹಂತೇಶ್‌ ನಿರೂಪಿಸಿದರು.

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ;

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ

BYV-yathnal

Talk Fight: ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ

BYV-1

Waqf Property: ಸಚಿವ ಜಮೀರ್‌ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.