ಹೊಳಲ್ಕೆರೆ: ಗಾಳಿ-ಮಳೆಗೆ ಅಪಾರ ಹಾನಿ
Team Udayavani, May 6, 2020, 5:41 PM IST
ಸಾಂದರ್ಭಿಕ ಚಿತ್ರ
ಹೊಳಲ್ಕೆರೆ: ತಾಲೂಕಿನಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವೆಡೆ ಬೆಳೆ ಹಾನಿಯಾಗಿದೆ. ಕೆಲವೆಡೆ ದೇವಸ್ಥಾನ, ಅಂಗಡಿ ಮುಂಗಟ್ಟು, ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ.
ಹುಳೆಮಳಲಿ ನ್ಯಾಯಬೆಲೆ ಅಂಗಡಿಯ ಮೇಲ್ಛಾವಣಿಯ ತಗಡು ಹಾರಿಹೋಗಿದೆ. ಹೊಸಹಳ್ಳಿ, ಆಗ್ರಹಾರ, ಹುಳೆಮಳಲಿಗೆ ಗ್ರಾಮಗಳ 600 ಪಡಿತರ ಚೀಟಿಗೆ ವಿತರಣೆ ಮಾಡಬೇಕಾಗಿದ್ದ ಅಕ್ಕಿ, ಗೋಧಿ ಯ 300 ಚೀಲಗಳನ್ನು ಮಳೆಯ ನೀರಿಗೆ ಸಿಗದಂತೆ ರಕ್ಷಣೆ ಮಾಡಲಾಗಿದೆ. ಆದರೂ ಹತ್ತು ಚೀಲ ಅಕ್ಕಿ ನೀರುಪಾಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿತರಿಸುತ್ತಿರುವ ಪಡಿತರವನ್ನು ಸಂರಕ್ಷಣೆ ಮಾಡಿ ಜನರಿಗೆ ಸಕಾಲದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹುಳೆಮಳಲಿ ಸಹಕಾರ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.ನ್ಯಾಯಬೆಲೆ ಅಂಗಡಿ ಮೇಲ್ಛಾವಣಿಗೆ ತಗಡು ಹಾಕಲು ಸರ್ಕಾರ ತಕ್ಷಣ ಅನುದಾನ ನೀಡದ ಕಾರಣ ಸಂಘದ ಎಲ್ಲಾ ಸದಸ್ಯರಿಂದ 2 ಲಕ್ಷ ರೂ. ಸಂಗ್ರಹಿಸಿ ದುರಸ್ತಿ ಮಾಡಿಸುವುದಾಗಿ ಸಂಘದ ಸದಸ್ಯ ಮಾರುತೇಶ್ ಮಾಹಿತಿ ನೀಡಿದರು.
ರಾಮಘಟ್ಟದ ಮಲ್ಲಿಕಾರ್ಜುನ ಅವರ ಮೂರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬಾಳೆ ಗಿಡಗಳು ಗಾಳಿ ಹೊಡೆತಕ್ಕೆ ಉರುಳಿ ಬಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಚಿಕ್ಕಜಾಜೂರು ಗ್ರಾಮದಲ್ಲಿ ದೇವಸ್ಥಾನ ಹಾಗೂ ಗ್ಯಾರೇಜ್ ಮೇಲೆ ಮರಗಳು ಉರುಳಿ ಬಿದ್ದಿವೆ. ಅಪ್ಪರಸನಹಳ್ಳಿಯಲ್ಲಿ ಮಳೆಗೆ ಮನೆ ಮೇಲಿನ ತಗಡು ಹಾರಿಹೋಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುತ್ತದೆ ಎಂದು ತಹಶೀಲ್ದಾರ್ ನಾಗರಾಜ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.