ಮಳೆಗಾಗಿ ಪ್ರಾರ್ಥಿಸಿ ಹೋಳಿಗೆ ಅಮ್ಮನ ಹಬ್ಬ ಆಚರಣೆ
Team Udayavani, Jul 27, 2017, 11:31 AM IST
ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿ ಜಿಲ್ಲೆಯಲ್ಲಿ ಪ್ರತಿಯೊಂದು ಹಬ್ಬ, ಆಚರಣೆಗೆ ಇಲ್ಲಿ ಅದರದ್ದೇ ಆದ ಪರಂಪರೆ, ನಂಬಿಕೆ ಮತ್ತು ಸಂಸ್ಕೃತಿ ನೆಲೆಯಿದೆ. ಇದರ ಭಾಗವಾಗಿ ಹೋಳಿಗೆ ಅಮ್ಮನ ವಿಶೇಷ ಹಬ್ಬವನ್ನು ಆಚರಿಸಲಾಯಿತು.
ನಗರದ ಕರುವಿನಕಟ್ಟೆ ಸರ್ಕಲ್ ನಲ್ಲಿ ಹೋಳಿಗೆಮ್ಮ ದೇವಿಗೆ ಮೊರೆ ಹೋಗಿ ಸತತ ಬರದಿಂದ ತತ್ತರಿಸಿರುವ ಜಿಲ್ಲೆಗೆ ಉತ್ತಮ ಮಳೆ ಬಂದು ರೈತರ ಬದುಕು ಹಸನಾಗಲಿ, ಡೆಂಘೀ ಜ್ವರ ಸೇರಿದಂತೆ ಮತ್ತಿತರ ಯಾವುದೇ ರೀತಿಯ ರೋಗ ರುಜಿನ ಮಕ್ಕಳಿಗೆ ಕಾಡದಿರಲಿ ಎಂದು ನಗರದ ಮಳೆಯರು
ಮನೆಗಳಲ್ಲಿ ಮಾಡಿಟ್ಟುಕೊಂಡಿದ್ದ ಹೋಳಿಗೆಗಳನ್ನು ಹೋಳಿಗೆಮ್ಮನವರಿಗೆ ಅರ್ಪಿಸಿ ಕೃಪೆ ತೋರುವಂತೆ ಮನವಿ ಮಾಡಿಕೊಂಡರು. ಪ್ರತಿ ವರ್ಷವು ಆಷಾಢ ಮಾಸದಲ್ಲಿ ನಗರದ ಬಹುತೇಕ ನಿವಾಸಿಗಳು ಯಾವುದೇ ಜಾತಿ, ಬೇಧವಿಲ್ಲದೆ ಹೋಳಿಗೆ ಅಮ್ಮನವರಿಗೆ ವಿಶೇಷವಾಗಿ ಹೋಳಿಗೆ ಮಾಡಿಕೊಂಡು ಬಂದು ಅರ್ಪಿಸಲಾಗುತ್ತದೆ. ಭಕ್ತರು ಮೀಸಲು ನೀರಿನಿಂದ ಮಾಡಿದ ಹೋಳಿಗೆಯನ್ನು ಮೊದಲು ದೇವಿಗೆ ಎಡೆಯಾಗಿ ಅರ್ಪಿಸಿದರು. ದೇವರಿಗೆ ಹೋಳಿಗೆ ಅರ್ಪಿಸಿ ಊರಿನ ಹೊರಗಡೆ ದೇವಿಯನ್ನು ಸಾಗಾಕಿ (ದಾಟಿಸಿ) ನಮ್ಮಲ್ಲಿರುವ ಬರ, ರೋಗ, ಮತ್ತಿತರ ಸಮಸ್ಯೆಗಳನ್ನು ತೊಲಗಿಸು ಎಂದು ಹೋಳಿಗೆ ಅಮ್ಮನ ಜೊತೆಯಲ್ಲಿ ತೊಲಗಾಚೆ ಎಂದು ಗ್ರಾಮಸ್ಥರು ಬೇಡಿಕೊಂಡರು.
ಏನಿದು ಹೋಳಿಗೆ ಅಮ್ಮ: ಹೋಳಿಗೆ ಅಮ್ಮ ಅಂದರೆ ಈಕೆ ಮಾರಿದೇವಿ. ಊರಿಗೆ ಅಂಟಿದ ನಾನಾ ರೀತಿಯ ಪೀಡೆ, ರೋಗ, ರುಜಿನಗಳನ್ನು ಆಕೆಯೊಂದಿಗೆ ಊರಾಚೆ ತೊಲಗಿಸಿ ಬರುವುದೇ ಹೋಳಿಗೆ ಅಮ್ಮನ ಹಬ್ಬದ ವೈಶಿಷ್ಟ . ಹಿಂದೆ ಪ್ಲೇಗ್, ಕಾಲರ, ಮಲೇರಿಯಾ ಮುಂತಾದ ರೋಗಗಳು ಕಾಣಿಸಿಕೊಂಡು ಊರಿಗೆ ಊರೇ ಸ್ಮಶಾನವಾಗುತ್ತಿತ್ತು. ಹಾಗಾಗಿ ಇಂಥಹ ಪೀಡೆ ಮತ್ತು ಮಹಾಮಾರಿ ರೋಗಗಳಿಂದು ಜನತೆಯನ್ನು ರಕ್ಷಿಸಲು ಹುಟ್ಟಿಕೊಂಡಿದ್ದೇ ಈ ಹೋಳಿಗೆ ಅಮ್ಮನ ಹಬ್ಬ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.