ಮಾನವೀಯ ಮೌಲ್ಯದ ಶಿಕ್ಷಣ ಅಗತ್ಯ:ದಿನೇಶ್‌


Team Udayavani, Nov 1, 2021, 3:12 PM IST

ಮಾನವೀಯ ಮೌಲ್ಯದ ಶಿಕ್ಷಣ ಅಗತ್ಯ:ದಿನೇಶ್‌

ಹೊಳಲ್ಕೆರೆ: ಸ್ವಸ್ಥ ಹಾಗೂ ಸುಸ್ಥಿತರ ಸಮಾಜಕ್ಕಾಗಿ ಭಾರತೀಯ ಸಂಸ್ಕೃತಿಯಶಿಕ್ಷಣ ರೂಪಿಸುವ ಗುರಿ ಹೊಂದಿರುವರಾಷ್ಟ್ರೋತ್ಥಾನ ಪರಿಷತ್‌ ಉತ್ತಮ ಶಿಕ್ಷಣನೀಡಲು ಶ್ರಮಿಸುತ್ತಿದೆ ಎಂದು ಪರಿಷತ್‌ಪ್ರಧಾನ ಕಾರ್ಯದರ್ಶಿ ದಿನೇಶ್‌ ಹೆಗ್ಡೆ ಹೇಳಿದರು.

ಪಟ್ಟಣದ ಸದ್ಗುರು ಆಶ್ರಮದ ಆವರಣದಲ್ಲಿ ತಾಲೂಕಿನ ಶಿಕ್ಷಕರಿಗೆಏರ್ಪಡಿಸಿರುವ ಪ್ರಶಿಕ್ಷಣ ತರಬೇತಿಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ವಿಶ್ವಕ್ಕೆಶಿಕ್ಷಣ ನೀಡುವಂತಹ ಸಾಮರ್ಥ್ಯವನ್ನುಹೊಂದಿದೆ. ಸನಾತನ ಕಾಲದಲ್ಲಿ ವಿಶ್ವದಮಹಾನ್‌ ಜ್ಞಾನಿಗಳು, ಮೇಧಾವಿಗಳುಭಾರತದಲ್ಲಿರುವಂತ ಶಿಕ್ಷಣ ಪದ್ಧತಿಯನ್ನುಇನ್ನೆಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಬ್ರಿಟಿಷರು ಸಾಮ್ರಾಜ್ಯಶಾಹಿಯ ಅಸ್ತಿತ್ವಕ್ಕಾಗಿ ದೇಶಿಯ ಶಿಕ್ಷಣದಲ್ಲಿದ್ದ ಪದ್ಧತಿಗಳನ್ನು ಪರಿವರ್ತಿಸಿದರು. ಲಾರ್ಡ್‌ ಮೆಕಾಲೆ ಭಾರತೀಯರಲ್ಲಿ ಭಾವನೆಗಳನ್ನು ಒಡೆದು ಹಾಳು ಮಾಡುವ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿದ್ದ. ಶಿಕ್ಷಣಎಂದರೆ ಕೇವಲ ಪಠ್ಯವನ್ನು ಓದಿ ಅಂಕಗಳಿಸುವ ಕೆಲಸವಲ್ಲ. ಅದೊಂದುಭಾವನೆ, ಸಂಸ್ಕೃತಿ, ಸಂಸ್ಕಾರ, ಚಿಂತನೆ,ಮಾನವೀಯ, ಭಾತೃತ್ವ, ರಾಷ್ಟ್ರೀಯತೆಗೆಪೂರಕ ಜ್ಞಾನವನ್ನು ಶಿಕ್ಷಣ ಎನ್ನಬೇಕು.ಇಂದಿನ ಶಿಕ್ಷಣದಲ್ಲಿ ಮಾನವೀಯತೆಹಾಗೂ ಸಂಸ್ಕಾರದ ಅವಶ್ಯಕತೆ ಇದೆ ಎಂದರು.

ರಾಷ್ಟ್ರೋತ್ಥಾನ ಪರಿಷತ್‌ ಸದಸ್ಯಬಸವನಗೌಡ ಮಾತನಾಡಿ, ವಿಶ್ವದಗಮನ ಸೆಳೆಯುವಂತಹ ಶಿಕ್ಷಣವನ್ನು ನೀಡಿರುವ ಹೆಮ್ಮೆ ಭಾರತ ದೇಶಕ್ಕಿದೆ.ಅದೇ ಮಾದರಿಯಲ್ಲಿ ಪರಿಷತ್‌ ಒಂದಿಷ್ಟುಚಿಂತನೆ ಮಾಡಿದೆ. 1965 ರಿಂದ ಒಂದು ಸ್ವಯಂಸೇವಾ ಸಂಸ್ಥೆಯಾಗಿ ಸದೃಢಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ಇಟ್ಟುಕೊಂಡು ಮುನ್ನಡೆಯುತ್ತಿದೆ. ಅದಕ್ಕಾಗಿ ದೇಶಿಯವಾಗಿರುವ ಶಿಕ್ಷಣವನ್ನು ಕೊಡುವ ಕೆಲಸವನ್ನು ಆರಂಭಿಸಿದೆ. ಪಠ್ಯ ಶಿಕ್ಷಣದ ಜತೆಗೆ ಭಾವನಾತ್ಮಾಕ ಶಿಕ್ಷಣವೂ ವಿದ್ಯಾರ್ಥಿಗಳಿಗೆ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.

ಕಾರ್ಯದರ್ಶಿ ಜಿ.ಪಿ. ಹರೀಶ್‌ ಮಾತನಾಡಿ, ಪ್ರಶಿಕ್ಷಣ ತರಬೇತಿಯನ್ನು ಶಿಕ್ಷಕರಿಗೆ ನೀಡುವ ಮೂಲಕ ಶಿಕ್ಷಣದಲ್ಲಿಹೊಸತನ ಸಂಶೋಧಿ ಸುವ ಕೆಲಸಮಾಡಬೇಕೆಂದರು. ರೋಟರಿ ಕ್ಲಬ್‌ ಅಧ್ಯಕ್ಷ ಪ್ರಕಾಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ , ಶಿಕ್ಷಣ ಎನ್ನುವುದು ನಮ್ಮ ಬದುಕು. ಅದು ಕೇವಲ ಪಠ್ಯದಶಿಕ್ಷಣವಾಗದೆ ಮೌಲ್ಯಗಳನ್ನು ಬಿತ್ತುವ ಶಿಕ್ಷಣ ಆಗಬೇಕು. ಮಣ್ಣಿನ ಋಣತೀರಿಸುವ ಶಕ್ತಿಯನ್ನು ಬೆಳೆಸುವ ಶಿಕ್ಷಣ ಕೊಡಬೇಕೆಂದರು.

ಪರಿಷತ್‌ ಹಿರಿಯರಾದ ರಾಜಲೋಚನ್‌, ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷ ಎಚ್‌. ಶಿವಲಿಂಗಪ್ಪ, ಎ.ಸಿ. ಗಂಗಾಧರಪ್ಪ, ಪ್ರಾಚಾರ್ಯ ರವಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ರಾಜಶೇಖರ್‌ ನಿರೂಪಿಸಿದರು.

ಬಸವರಾಜ ವಂದಿಸಿದರು. ಇದೆ ಸಮಯದಲ್ಲಿ “ಪ್ರಶಿಕ್ಷಣಭಾರತಿ’ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ರಾಷ್ಟ್ರೋತ್ಥಾನ ಪರಿಷತ್‌ ಶಿಕ್ಷಕರಿಗೆ ಪ್ರಶಿಕ್ಷಣ ತರಬೇತಿಗೆ ಮುಂದಾಗಿದೆ. ದೇಶಕ್ಕೆ ಎಂತಹ ಶಿಕ್ಷಣ ಬೇಕು, ಪಠ್ಯವನ್ನು ಹೊರತುಪಡಿಸಿ ವಿದ್ಯಾರ್ಥಿಗಳ ಸರ್ವತೊಮುಖ ಅಭಿವೃದ್ಧಿಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಪ್ರಶಿಕ್ಷಣ ತರಬೇತಿಯನ್ನು ರಾಜ್ಯ ಹಾಗೂ ದೇಶದ ಎಲ್ಲೆಡೆ ನೀಡುವ ಗುರಿ ಹೊಂದಲಾಗಿದ್ದು, ಶಿಕ್ಷಕರು ರಾಷ್ಟ್ರೋತ್ಥಾನ ಶಿಕ್ಷಣದ ಮಹತ್ವ ಅರಿತುಕೊಳ್ಳಬೇಕು.– ದಿನೇಶ್‌ ಹೆಗ್ಡೆ, ರಾಷ್ಟ್ರೋತ್ಥಾನ ಪರಿಷತ್‌ ಪ್ರಧಾನ ಕಾರ್ಯದರ್ಶಿ

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ;

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ

BYV-yathnal

Talk Fight: ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ

BYV-1

Waqf Property: ಸಚಿವ ಜಮೀರ್‌ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.