ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ
ಕೋವಿಡ್ ಲಸಿಕೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಸಲ್ಲ
Team Udayavani, Oct 24, 2020, 2:25 PM IST
ಚಿತ್ರದುರ್ಗ: ಕೋವಿಡ್ ಚಿಕಿತ್ಸೆ, ನಿರ್ವಹಣೆಯಲ್ಲಿ ಈಗಾಗಲೇ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಈಗ ವ್ಯಾಕ್ಸಿನ್ ನೀಡುವ ನೆಪದಲ್ಲಿ ಮತ್ತೆ ಅವ್ಯವಹಾರಕ್ಕೆ ಮುಂದಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಭಾರತಕ್ಕೆ ಕೋವಿಡ್ ಬಂದಿದೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ. ಈ ಶಾಪ ಬಿಜೆಪಿಗೆ ತಟ್ಟುತ್ತದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತಾನಾಡಿದರ ಅವರು, ವಿವಿಧ ರಾಜ್ಯಗಳ ಚುನಾವಣೆ ಸಮಯದಲ್ಲಿಯೂ ಸಹಾ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಜನ ಸಂಕಷ್ಟದಲ್ಲಿರುವಾಗ ಬಿಜೆಪಿಯವರು ಕೋವಿಡ್ ಲಸಿಕೆ ವಿತರಣೆಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಬಿಹಾರ ಚುನಾವಣೆ2020: ಹತ್ತು ಲಕ್ಷ ಉದ್ಯೋಗ,ನಿರುದ್ಯೋಗಿಗಳಿಗೆ 1,500 ಭತ್ಯೆ: RJD ಪ್ರಣಾಳಿಕೆ
ಬಿಹಾರದಲ್ಲಿ ಚುನಾವಣೆ ಬಂದಿದೆ ಇದನ್ನು ಮನಗಂಡ ಸರ್ಕಾರ ಅಲ್ಲಿ ಮಾತ್ರ ಕೋವಿಡ್-19 ವೈರಸ್‍ಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದೆ. ಯಾಕೆ ಅಲ್ಲಿ ಇರುವವರು ಮಾತ್ರ ಜನವೇ ದೇಶದ ಬೇರೆ ಕಡೆಗೆ ಇರುವವರು ಜನರಲ್ಲವೇ ಕೊಡುವುದಾದರೆ ಎಲ್ಲರಿಗೂ ಉಚಿತವಾಗಿ ನೀಡಲಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇನ್ನೂ ಲಸಿಕೆ ತಯಾರಾಗಿಲ್ಲ ಅದರ ಬಗ್ಗೆ ಪ್ರಯೋಗದ ಹಂತದಲ್ಲಿದೆ ಇದರ ಬಗ್ಗೆ ಈಗಲೇ ಉಚಿತವಾಗಿ ನೀಡುತ್ತೇನೆ ಎಂದು ಹೇಳುವ ಸರ್ಕಾರ ಅದರಲ್ಲಿಯೂ ಸಹಾ ಹಣವನ್ನು ಮಾಡಲು ಮುಂದಾಗುತ್ತಿದೆ. ಸರ್ಕಾರ ಜನತೆಯ ತೆರಿಗೆಯ ಹಣದಿಂದ ಲಸಿಕೆಯನ್ನು ಖರೀದಿ ಮಾಡಿ ಎಲ್ಲರಿಗೂ ನೀಡುವಂತಾಗಲಿ ಎಂದು ರಾಮಲಿಂಗಾರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.
ಗೂಂಡಾಗಳಿರುವುದೇ ಬಿಜೆಪಿಯಲ್ಲಿ: ಗೂಂಡಾಗಿರಿಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಗೂಂಡಾಗಳೆಲ್ಲರು ಬಿಜೆಪಿಯಲ್ಲಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಶೋಭಾ ಕರಾಂದ್ಲಾಜೆ ಹತ್ರಾಸ್ ನಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೊಲೆಯ ಬಗ್ಗೆ ಮಹಿಳೆಯಾಗಿ ಒಂದು ಮಾತನ್ನು ಸಹಾ ಆಡದೇ ಈಗ ಕಾಂಗ್ರೇಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದ ಅವರು, ಅವರ ಮಾತಿಗೆ ಬೆಲೆ ಇಲ್ಲ ಪಕ್ಷದಲ್ಲಿ ಒಬ್ಬ ಇಬ್ಬರಾದರೆ ಹೇಳಬಹುದು ಅದರಲ್ಲಿ ಇರುವವರಲ್ಲಿ ಬಹುತೇಕರು ಗೂಂಡಾಗಳಾಗಿದ್ದಾರೆ. ಅಲ್ಲದೆ ಬಿಜೆಪಿಯವರು ಹಿಟ್ಲರ್ ಸಂಪುಟದಲ್ಲಿದ್ದ ಸುಳ್ಳು ಹೇಳುವ ಸಚಿವನಾಗಿದ್ದ ಗ್ಲೋಬಲ್ ವಂಶಸ್ಥರಾಗಿದ್ದಾರೆ. ಸುಳ್ಳನ್ನು ಸತ್ಯ ಮಾಡುವುದರಲ್ಲಿ ಅವರು ನಿಸ್ಸೀಮರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.