ಅಂತರ್ಗತವಾಗಿರುವ ಆತ್ಮವಿಶ್ವಾಸ ಮುಖ್ಯ: ಪುಷ್ಪಲತಾ
Team Udayavani, Nov 10, 2018, 2:50 PM IST
ಸಿರಿಗೆರೆ: ಪ್ರತಿಯೊಬ್ಬರ ಒಳಗೆ ಅಂತರ್ಗತವಾಗಿರುವ, ಎಲ್ಲ ಬಲಗಳಿಗಿಂತ ದೊಡ್ಡ ಬಲ ಆತ್ಮವಿಶ್ವಾಸ. ಜ್ಞಾನ ಇದ್ದಲ್ಲಿ ಆತ್ಮವಿಶ್ವಾಸ ಬಲವರ್ಧನೆಯಾಗುತ್ತದೆ. ಆತ್ಮವಿಶ್ವಾಸವನ್ನು ಕಟ್ಟಿಕೊಡುವ ಶಕ್ತಿ ರಂಗಕಲೆಗಿದೆ. ಅರಿವು, ಕಲಿಕೆ ಬೇರೆಲ್ಲೂ ಇಲ್ಲ; ನಮ್ಮೊಳಗೇ ಇದೆ ಎನ್ನುವುದನ್ನು ತಿಳಿಸುವುದೇ ಆತ್ಮವಿಶ್ವಾಸ ಎಂದು ದಾವಣಗೆರೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಹೇಳಿದರು.
ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಭಗವಂತನ ಸೃಷ್ಟಿಯಲ್ಲಿ ವ್ಯರ್ಥವೆನ್ನುವುದು ಯಾವುದೂ ಇಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿಕೊಂಡು ಮುನ್ನುಗುವುದೇ ಆತ್ಮವಿಶ್ವಾಸ. ಆತ್ಮವಿಶ್ವಾಸದ ಕೊರೆತೆಯೇ ಹಿನ್ನಡೆ, ವೃದ್ಧಿಯೇ ಮುನ್ನಡೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳು ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದರು.
ಭಾರತೀಯ ಪರಂಪರೆಯಲ್ಲಿ ಗುರು ಸ್ಥಾನ ಅತ್ಯಂತ ಮಹತ್ವದ್ದು. ಈ ಗುರುಪರಂಪರೆ ಮಾಡಿದ ಮೊದಲ ಕೆಲಸ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಂಥದ್ದು. ಗುರುವೋರ್ವ ಹುಲಿ ಬಂದಾಗ ತನ್ನ ಶಿಷ್ಯ “ಸಳ ನಿಗೆ “ಹೊಯ್? ಹೇಳಿ ಪ್ರೇರೇಪಿಸಿದ್ದರ ಪರಿಣಾಮ ಮುಂದೆ ಹೊಯ್ಸಳ
ಸಾಮ್ರಾಜ್ಯವಾಯಿತು. ತಾಯಿ ಜೀಜಾಬಾಯಿ ಮಗ ಶಿವಾಜಿಗೆ “ನನಗೆ ನೀನು ಕೊಡುಗೆಯೊಂದನ್ನು ಕೊಡಲೇ ಬೇಕೆಂದರೆ ರಾಯಘಡದ ಕೋಟೆಯನ್ನು ಗೆದ್ದು ತಾ ಎನ್ನುವ ಮಾತು ಪ್ರೇರಣೆ ಮುಂದೆ ಮರಾಠ ಸಾಮ್ರಾಜ್ಯಕ್ಕೆ ಭದ್ರ ಬುನಾದಿಯಾಯಿತು ಎಂದರು.
ಸಾಮಾನ್ಯ ಕುಟುಂಬಗಳಲ್ಲಿ ನೋವು ಮತ್ತು ಅವಮಾನಗಳನ್ನೇ ಅನುಭವಿಸುತ್ತ ಬಂದಿರುವ ಹಲವರು ಅಸಮಾನ್ಯವಾದುದನ್ನು ಸಾಧಿಸಿರುವುದಕ್ಕೆ ಅವರಲ್ಲಿನ ಆತ್ಮವಿಶ್ವಾಸವೇ ಕಾರಣವಾಗಿದೆ. ಸಾಧಿಸಬೇಕೆಂಬ ಛಲ ಮತ್ತು ಮನೋಬಲವಿದ್ದರೆ ಏನೆಲ್ಲವನ್ನೂ ಮಾಡಬಹುದು ಎಂದು ಹೇಳಿದರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಛಲ ಮತ್ತು ಮನೋಬಲವಿದ್ದರೆ ಸಂಪತ್ತು ತಾನಾಗಿಯೇ ತನ್ನ ಕಾಲಬಳಿ ಬಂದು ನಿಲ್ಲುವುದು. ಸಾಧನೆ ಮಾಡಿದ ಬಹುತೇಕರು ಬಡತನ, ಅಜ್ಞಾನ, ಅವಮಾನಗಳಲ್ಲೇ ಹುಟ್ಟಿದವರೂ ಅವರು ಅಸಾಮಾನ್ಯವಾದುದನ್ನು ಸಾಸಿದ್ದಾರೆ.
ಇದಕ್ಕೆ ಕಾರಣ ಅವರ ಅತ್ಮವಿಶ್ವಾಸ ಎಂದರು. ನಮ್ಮ ಹಳ್ಳಿಗರು ಮನಸ್ಸಿದ್ದಲ್ಲಿ ಮಾರ್ಗ ಎನ್ನುವರು. ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಏಕಮಾತ್ರ
ಸಾಧನ ಆತ್ಮವಿಶ್ವಾಸ. ದೇಹದ ಮೇಲಿನ ಹತೋಟಿ ಸಾಧ್ಯ. ಮನಸ್ಸಿನ ಹತೋಟಿ ಕಷ್ಟಸಾಧ್ಯ. ಇಂದು ಬಾಹ್ಯವಾಗಿ ಹೆಚ್ಚು ಚಲನಶೀಲತೆ ಕಾಣುವೆವು. ಆದರೆ, ಆಂತರಿಕವಾಗಿ ಇಂಥ ಚಲನಶೀಲತೆ ಕಡಿಮೆಯಾಗಿದೆ. ಆದುದರಿಂದಲೇ ನಿರೀಕ್ಷಿತ ಫಲಿತಾಂಶ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಎಷ್ಟೇ ಬಡತನವಿದ್ದರೂ ನಮ್ಮ ಹಿರಿಯರು ಆತ್ಮಹತ್ಯೆಯ ದಾರಿ ಹಿಡಿಯಲಿಲ್ಲ. ಆದರೆ ಇಂದು ಏನೆಲ್ಲ ಸೌಲಭ್ಯಗಳು ಇದ್ದರೂ ಸಣ್ಣಪುಟ್ಟ ವಿಷಯಗಳಿಗೆ
ವಿದ್ಯಾರ್ಥಿಗಳು, ಯುವಕ-ಯುವತಿಯರು ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ಅವರಲ್ಲಿನ ಆತ್ಮವಿಶ್ವಾಸದ ಕೊರತೆ ಕಾರಣವಾಗಿದೆ. ಸಕಾರಾತ್ಮಕ ಚಿಂತನೆಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.