IPL ಬೆಟ್ಟಿಂಗ್ ಜಾಲ; ಗಂಡನಿಗೆ ಸಾಲಗಾರರ ಹಿಂಸೆ: ಪತ್ನಿ ಆತ್ಮಹತ್ಯೆ
ಹೊಳಲ್ಕೆರೆ ಯಲ್ಲಿ ನಡೆದ ದಾರುಣ ಘಟನೆ
Team Udayavani, Mar 20, 2024, 7:04 PM IST
ಹೊಳಲ್ಕೆರೆ: ಬೆಟ್ಟಿಂಗ್ ದಂಧೆ ಮೋಸಕ್ಕೆ ಸಿಲುಕಿದ್ದ ಗಂಡನಿಗೆ ಸಾಲಗಾರರು ನೀಡುತ್ತಿದ್ದ ಹಿಂಸೆಗೆ ಬೇಸತ್ತು ಪತ್ನಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪಟ್ಟಣದಲ್ಲಿ ಶಿವಮೊಗ್ಗ ರಸ್ತೆಯ ಬಸವ ಲೇಔಟ್ ನಿವಾಸಿ ರಂಚಿತಾ (23) ಅತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಬೆಟ್ಟಿಂಗ್ ದಂಧೆಗೆ ಪ್ರೇರಣೆ ನೀಡಿ ಸಾಲ ಕೊಟ್ಟವರ ಕಾಟ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನಲೆಯಲ್ಲಿ ತೀವ್ರ ಮನನೊಂದ ಮಗಳು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ರಂಚಿತಾ ತಂದೆ ವೆಂಕಟೇಶ್ ಅವರು ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಂಚಿತಾ ಐದು ವರ್ಷಗಳ ಹಿಂದೆ ಪಟ್ಟಣದ ಮುಖಂಡ ಬಾಲು ಪ್ರಕಾಶ ಹಾಗೂ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಚಂದ್ರಕಲಾ ದಂಪತಿಯ ಪುತ್ರನಾದ ಇಂಜಿನಿಯರ್ ವೃತ್ತಿ ಮಾಡಿಕೊಂಡಿದ್ದ ದರ್ಶನ್ ಬಾಲು ನನ್ನು ವಿವಾಹವಾಗಿದ್ದು, ನಾಲ್ಕು ವರ್ಷ ಗಂಡು ಮಗುವಿದೆ.
ಹೊಳಲ್ಕೆರೆ ಪಟ್ಟಣದ ನಿವಾಸಿಗಳಾದ ಗಿರೀಶ್, ರಾಘು, ಚಿತ್ರದುರ್ಗ ಸುದೀಪ್, ತಿಪ್ಪೇಸ್ವಾಮಿ, ವೆಂಕಟೇಶ್, ಗುರು, ವಾಗೀಶ್, ರಾಕೇಶ್, ಪಾವಗಡದ ಪೊತರೆಡ್ಡಿ, ಅಜ್ಜಂಪುರ ಕಂಟ್ರಾಕ್ಟರ್ ಹೊನ್ನಪ್ಪ, ಹಿರಿಯೂರು ಮಹಾಂತೇಶ್, ಕಂಟ್ರಾಕ್ಟರ್ ಜಗನ್ನಾಥಶಿರಾ ಮತ್ತಿತರರು ಆಳಿಯ ದರ್ಶನ್ ಇವರಿಗೆ ಐಪಿಎಲ್ ಬೆಟ್ಟಿಂಗ್ ನಿಂದ ಕೋಟಿ ಕೋಟಿ ಸಂಪಾದಿಸಬಹುದು ಎಂದು ಪುಸಲಾಯಿಸಿದ್ದು, ಹಣವಿಲ್ಲ ಎಂದು ಹೇಳಿದರೂ ಖಾಲಿ ಚೆಕ್ ಪಡೆದು ಬೆಟ್ಟಿಂಗ್ ಗೆ ಹಣ ಕಟ್ಟಿಸಿದ್ದಾರೆ. ದಂಧೆಯಲ್ಲಿ ಸೊಲಾದ ಬಳಿಕ ಹಣಕೊಡದಿದ್ದರೆ ಚೆಕ್ ಗಳನ್ನು ಕೋರ್ಟಿಗೆ ಹಾಕಿ ಜೈಲಿಗೆ ಕಳುಸಿವುದಾಗಿ ಬೇದರಿಸಿದ್ದಾರೆ. ಹಣವನ್ನು ದರ್ಶನ್ ತಂದೆ ಪ್ರಕಾಶ್ ಅವರು ತೀರಿಸುವ ಭರವಸೆ ನೀಡಿದ್ದರೂ, ಪದೆಪದೆ ಮನೆಗೆ ಪೋನ್ ಮಾಡಿ, ಬೆದರಿಕೆ ಹಾಕಿ, ಮಾನಸಿಕ ಕಿರಿಕುಳ, ಹಿಂಸೆ ನೀಡಿದ್ದು, ಇದನ್ನು ಸಹಿಸಿಕೊಳ್ಳದೆ ಮಗಳು ರಂಚಿತಾ ಸೋಮವಾರ ಸಂಜೆ ಮನೆಯಲ್ಲಿ ನೇಣುಹಾಕಿಕೊಂಡಿದ್ದಾಳೆ. ನಾವು ತತ್ ಕ್ಷಣವೇ ನೋಡಿ ಅಸ್ಪತ್ರೆಗೆ ಕರೆದುಕೊಂಡು ಹೋದರೂ ಫಲಕಾರಿಯಾಗಿಲ್ಲ. ನಮ್ಮ ಮಗಳ ಸಾವಿಗೆ ಬೆಟ್ಟಿಂಗ್ ದಂಧೆದಾರರೆ ಕಾರಣವಾಗಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಂಚಿತಾ ತಂದೆ ವೆಂಕಟೇಶ್ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಶಿವ ಮತ್ತು ಗಿರೀಶ್ ಎಂಬವರನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ಸುರೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.