ಪಾಕ್ ವಿರುದ್ಧ ದೇಶೀಯ ಮಟ್ಟದಲ್ಲಿ ರಕ್ಷಣಾ ಸಿದ್ಧತೆ: ಜೇಟ್ಲಿ
Team Udayavani, May 29, 2017, 2:37 PM IST
ಚಿತ್ರದುರ್ಗ: ಭಾರತಕ್ಕೆ ನೆರೆಯ ಪಾಕಿಸ್ತಾನ “ಹೊರೆ’ಯಾಗಿದ್ದು, ಕಳೆದ 70 ವರ್ಷಗಳಿಂದಲೂ ಭದ್ರತಾ ಅಪಾಯ ಎದುರಿಸುತ್ತಲೇ ಇದ್ದೇವೆ. ಆದರೂ, ನಾವು ರಕ್ಷಣಾ ಸಿದ್ಧತೆಯನ್ನು ಮಾಡಿಕೊಳ್ಳುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿಯ ನಾಯಕನಹಟ್ಟಿ ಸಮೀಪದ ಕುದಾಪುರದಲ್ಲಿ 4000 ಎಕರೆ ಪ್ರದೇಶದಲ್ಲಿ
ಸ್ಥಾಪಿಸಲಾಗಿರುವ ದೇಶದ ಮೊದಲ ವೈಮಾನಿಕ ಪರೀಕ್ಷಾ ವಲಯ(ಎಟಿಆರ್)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವಲಯದಲ್ಲಿ ಮಾನವ ಸಹಿತ ಮತ್ತು ಮಾನವ ರಹಿತ ಯುದ್ದ ವಿಮಾನಗಳನ್ನು ಪರೀಕ್ಷೆ ನಡೆಸಬಹುದಾಗಿದೆ.
ಪಾಕಿಸ್ತಾನದ ಬೆದರಿಕೆಯನ್ನು ತಡೆಯಬೇಕಾದರೆ, ನಾವು ರಕ್ಷಣಾ ಸಿದ್ಧತೆಗಳನ್ನು ಮಾಡಿಕೊಳ್ಳಲೇಬೇಕು. ಈ ನಿಟ್ಟಿನಲ್ಲಿ ನಮ್ಮ ಕೆಲಸ ಸೂಕ್ತವಾಗಿಯೇ ಇದೆ. ಅಲ್ಲದೆ ಇಂಥ ಸಿದ್ಧತೆಗಳನ್ನು ನಾವು ದೇಶೀಯ ಮಟ್ಟದಲ್ಲೇ ಮಾಡಿಕೊಳ್ಳಬೇಕು ಎಂದು ಜೇಟ್ಲಿ ಅಭಿಪ್ರಾಯಪಟ್ಟರು.
ಡಿಆರ್‌ಡಿಒದಿಂದ ದೇಶದ ರಕ್ಷಣಾ ವ್ಯವಸ್ಥೆಗೂ ಮುನ್ನಡೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥೆ ಸುಧಾರಣೆಯಾಗಲಿದೆ. ನೆರೆಯ ದೇಶ ಹತ್ತಾರು ವರ್ಷಗಳಿಂದ ರಕ್ಷಣಾ ವ್ಯವಸ್ಥೆಗೆ ಧಕ್ಕೆ ನೀಡಿದೆ.
ಹೀಗಾಗಿ, ರಕ್ಷಣಾ ವ್ಯವಸ್ಥೆ ಮತ್ತಷ್ಟು ಶಕ್ತಿಯುತವಾಗಬೇಕಿದೆ ಎಂದು ಹೇಳಿದರು. ಚಿತ್ರದುರ್ಗದ ಡಿಆರ್‌ಡಿಒ ಕೇಂದ್ರ ದೇಶೀಯ ರಕ್ಷಣೆಗೆ ಅಗತ್ಯವಾದ ಉಪಕರಣಗಳನ್ನು ಉತ್ಪಾದಿಸಲು ಅಣಿಯಾಗಿರುವ ದೇಶದ ಮೊದಲ ರಕ್ಷಣಾ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶಲ್ಲಿ ತಲೆಯೆತ್ತಿರುವ ಐಐಎಸ್‌ಸಿ, ಬಾರ್ಕ್ ಸೇರಿ ಇನ್ನಿತರೆ ಸಂಶೋಧನಾ ಕೇಂದ್ರಗಳು ಜಾಗತಿಕ ನೆಲೆಗಟ್ಟಿನಲ್ಲಿ ತೀವ್ರ ಸ್ಪರ್ಧೆಯಿಂದ ಕೆಲಸ ಮಾಡಲಿವೆ. ಇಲ್ಲಿ ಆರಂಭವಾಗಿರುವ ವೈಮಾನಿಕ ಪರೀûಾ ವಲಯ ದೇಶದಲ್ಲೇ ಮೊದಲನೆಯದಾಗಿದ್ದು,ರಕ್ಷಣಾ ಸಿದ್ಧತೆಯ ಎಲ್ಲ ತಾಲೀಮು ಇಲ್ಲಿ ನಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಇದೇ ಸ್ಥಳದಲ್ಲಿ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೆ„ನ್ಸ್, ಇತರೆ ವಿಜ್ಞಾನ ಕೇಂದ್ರಗಳು ಸೇರಿ ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಧಿಸಿದ ಕೆಲಸ ಕಾರ್ಯಗಳು ಇಲ್ಲೇ ನಡೆಯಲಿವೆ. ಡಿಆರ್‌ಡಿಒ 20 ವರ್ಷದ ಗುರಿಯನ್ನು 5ವರ್ಷದಲ್ಲಿ ಪೂರ್ಣಗೊಳಿಸಿ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡಿಆರ್‌ಡಿಒ ಡೈರೆಕ್ಟರ್ ಆಫ್ ಜನರಲ್ ಸಿ.ಪಿ. ರಾಮ ನಾರಾಯಣ್ ಮಾತನಾಡಿದರು. ಡಿಆರ್ ಡಿಒ ಅಧ್ಯಕ್ಷ ಡಾ.ಕ್ರಿಸ್ಟೋಫರ್, ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಸತೀಶ್‌ರೆಡ್ಡಿ, ಮಾಜಿ ಲೋಕಸಭಾ ಸದಸ್ಯ ಜನಾರ್ಧನಸ್ವಾಮಿ, ಶಾಸಕ ಎಸ್.ತಿಪ್ಪೇಸ್ವಾಮಿ, ಡಿಆರ್‌ಡಿಒ ಮುಖ್ಯ ಕಾರ್ಯನಿರ್ವಹಣಾಧಿಧಿಕಾರಿ ಅಜಯ್ ಸಿಂಗ್, ಡಿಆರ್‌ಡಿಒ ಡಿ.ಜಿ ಮಂಜುಳ, ಡಾ.ಸಿ.ಬಿ.ರಾಮನ್ ಮತ್ತಿತರರು ವೇದಿಕೆಯಲ್ಲಿದ್ದರು.
4290 ಎಕರೆ ಪ್ರದೇಶವನ್ನು ಕರ್ನಾಟಕ ಸರ್ಕಾರ ನೀಡಿದ್ದು ಈ ಜಾಗದಲ್ಲಿ ಮಹತ್ವದ ಕೆಲಸ ಮಾಡಲಾಗುತ್ತದೆ. ಸ್ವದೇಶಿ
ತಂತ್ರಜ್ಞಾನ ಬಳಸಿಕೊಂಡು ಯುದ್ಧ ಹಾಗೂ ರಕ್ಷಣಾ ಕಾರ್ಯಗಳಲ್ಲಿ ಸಹಕಾರಿಯಾಗಬಲ್ಲ ಮಾನವ ರಹಿತ ವೈಮಾನಿಕ ಸಾಧನ ಅಭಿವೃದ್ಧಿಪಡಿಸಲು ಅತ್ಯಾಧುನಿಕ ಮಲ್ಟಿ ರೋಲ್ ಕಾಂಬ್ಯಾಕ್ಟ್ ಏರ್ ಕ್ರಾಫ್ಟ್ ಸಿದ್ಧಪಡಿಸಲಾಗುತ್ತಿದೆ.
– ಅರುಣ್ ಜೇಟ್ಲಿ
ಕೇಂದ್ರ ರಕ್ಷಣಾ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.