ನಮ್ಮೊಳಗಿನ ಜಗಳದಿಂದ ಬಿಜೆಪಿ ಅಧಿಕಾರಕ್ಕೆ: ನಿಂಗಯ್ಯ
Team Udayavani, Feb 27, 2021, 3:58 PM IST
ಚಿತ್ರದುರ್ಗ: ನಮ್ಮೊಳಗಿನ ಜಗಳದಿಂದಾಗಿ ದೇಶದಲ್ಲಿ ನೆಲೆಯೇ ಇಲ್ಲವಾಗಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ವೀಕ್ಷಕರ ತಂಡದ ಸಂಚಾಲಕ ಬಿ.ಬಿ. ನಿಂಗಯ್ಯ ಹೇಳಿದರು.
ನಗರದ ಜೆಡಿಎಸ್ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಜಾತ್ಯತೀತ ಜನತಾದಳದ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ, ಮಧ್ಯಪ್ರದೇಶ, ಪಾಂಡಿಚೇರಿಯಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರಗಳನ್ನು ಕೆಡವಿ ಅ ಧಿಕಾರ ಹಿಡಿಯುತ್ತಿರುವುದು ಯಾವ ನ್ಯಾಯ. ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಗಂಡಾಂತರಕ್ಕೆ ಸಿಲುಕಿಸುತ್ತಿದ್ದಾರೆ. ರಾಜ್ಯದಲ್ಲಿ ವ್ಯಭಿಚಾರ ಮಾಡಿ ಅ ಧಿಕಾರ ಹಿಡಿಯುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ದೇಶದ ಆಸ್ತಿಗಳನ್ನು ಶ್ರೀಮಂತರಿಗೆ ಮಾರಾಟ ಮಾಡುವ ಮೂಲಕ ದೇಶವನ್ನು ಅಡವಿಟ್ಟಿರುವ ನರೇಂದ್ರ ಮೋದಿ ಭ್ರಷ್ಟಾಚಾರವನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಿ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮನವಿ ಮಾಡಿದರು. ಮನ್ ಕೀ ಬಾತ್ ಎನ್ನುವ ಪ್ರಧಾನಿಗೆ ದೇಶದ ರೈತರ ಸಮಸ್ಯೆಗಳ ಬಗ್ಗೆ ಮಾನತಾಡಲು ಧ್ವನಿ ಇಲ್ಲವೇ, ಎಪಿಎಂಸಿ ಬಂದ್ ಮಾಡಿ ರೈತರು, ಕಾರ್ಮಿಕರನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಯುವಕರನ್ನು ನಂಬಿಸಿ ಅಧಿ ಕಾರಕ್ಕೆ ಬಂದಿರುವ ಮೋದಿ ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಕೋಮು ಭಾವನೆ ಪ್ರಚೋ ದಿಸುತ್ತಿದ್ದಾರೆ. ಇದನ್ನೇ ನಮ್ಮ ಕಾರ್ಯಕರ್ತರು ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆಗೆ ಸಿದ್ಧರಾಗಬೇಕಿದೆ ಎಂದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಜಿಲ್ಲಾಧ್ಯಕ್ಷ ಯಶೋಧರ ಅವರ ನೇತೃತ್ವದಲ್ಲಿ ಎಲ್ಲ ತಾಲೂಕುಗಳಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಬೇಕಿದೆ. ಒಂದು ಕಾಲದಲ್ಲಿ ಘಟನಾನುಘಟಿಗಳಿದ್ದ ಜೆಡಿಎಸ್ ಸ್ಥಿತಿ ಈಗ ಕಷ್ಟಕರವಾಗಿದೆ. ಅಧಿ ಕಾರ ಸಿಗದೆ ಕೆಲವರು ಪಕ್ಷ ಬಿಟ್ಟು ಹೋಗಿರಬಹುದು. ಬೂತ್ ಕಮಿಟಿಗಳನ್ನು ರಚಿಸಿದರೆ ಪಕ್ಷವನ್ನು ಜಿಲ್ಲೆಯಲ್ಲಿ ಮತ್ತೆ ಸಂಘಟಿಸಿ ಅ ಧಿಕಾರಕ್ಕೆ ತರಬಹುದು ಎಂದರು.
ಜೆಡಿಎಸ್ ಮುಖಂಡ ಬಿ.ಕಾಂತರಾಜ್ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಚಿತ್ರದುರ್ಗದಿಂದ ಸ್ಪ ರ್ಧಿಸಲಿ. ಸೋತೆವೆಂದು ಮನೆಯಲ್ಲಿ ಕೂತರೆ ಪಕ್ಷ ಕಟ್ಟಲು ಆಗುವುದಿಲ್ಲ. 2023 ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಭವಿಷ್ಯವಿದೆ. ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ ಮಾತನಾಡಿ, ಅಧಿಕಾರ ಕಳೆದುಕೊಂಡಿರುವ ಪಕ್ಷಕ್ಕೆ ಇಂದು ಗಟ್ಟಿಯಾಗಿ ನಿಲ್ಲುವವರು ಬೇಕು. ಇಲ್ಲಿ ತ್ಯಾಗಕ್ಕೆ ಸ್ಥಾನಮಾನವಿದೆ. ಚುನಾವಣೆ ಬಂದಾಗ ಅಭ್ಯರ್ಥಿಗಳನ್ನು ಹುಡುಕುವ ಬದಲು ಈಗಲೇ ಅಭ್ಯರ್ಥಿ ಗುರುತಿಸಿದರೆ ಚುನಾವಣೆಗೆ ಉತ್ತಮಸಂಘಟನೆಯಾಗುತ್ತದೆ ಎಂದರು. ಮುಖಂಡರಾದ ವದಿಗೆರೆರಮೇಶ್, ಹೆಚ್.ಟಿ.ಬಳಿಗಾರ್ ಮತ್ತಿತರರು ಮಾತನಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ರಾಮಕೃಷ್ಣ, ಅಮಾನುಲ್ಲಾಖಾನ್, ಜಿಪಂ ಮಾಜಿ ಅಧ್ಯಕ್ಷ ಜಯಣ್ಣ, ಜಿ.ಬಿ.ಶೇಖರ್, ಎತ್ತಿನಹಟ್ಟಿ ಗೌಡ್ರು, ಶಿವಪ್ರಸಾದಗೌಡ, ಗಣೇಶ್‌ಕುಮಾರ್, ತಿಮ್ಮಣ್ಣ, ಲಲಿತಾ ಕೃಷ್ಣಮೂರ್ತಿ, ಪಿ.ತಿಪ್ಪೇಸ್ವಾಮಿ, ಶ್ರೀನಿವಾಸ್ ಗದ್ದಿಗೆ, ಕುಮಾರಸ್ವಾಮಿ, ಗೀತಾ ಮತ್ತಿತರರಿದ್ದರು. ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ ಸ್ವಾಗತಿಸಿದರು. ಪ್ರತಾಪ್‌ಜೋಗಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ
Udupi: ಎಂಜಿಎಂ ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ
MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಐನಾಪೂರ: ಶ್ರೀ ಕೆರಿಸಿದ್ದೇಶ್ವರ ದೇವರ ಭೇಟಿ -ಭಂಡಾರಮಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.