ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಶತಃಸಿದ್ಧ
Team Udayavani, Mar 30, 2018, 11:27 AM IST
ಚಿತ್ರದುರ್ಗ: ಸತ್ಯ ಯಾವಾಗಲೂ ಕಠಿಣವಾಗಿರುತ್ತದೆ. ಯಾರೂ ಸಹ ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಾವಣಗೆಯಲ್ಲಿ ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಎಂದಿರುವುದೇ ಇದಕ್ಕೆ ಸಾಕ್ಷಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್ ಲೇವಡಿ ಮಾಡಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಘಟಕದ 15ಕ್ಕೂ ಹೆಚ್ಚು ಮುಖಂಡರನ್ನು ಜೆಡಿಎಸ್‌ಗೆ ಬರ ಮಾಡಿಕೊಂಡು ಅವರು ಮಾತನಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ರಾಜ್ಯದಲ್ಲಿ ಹೇಗೆ ಆಡಳಿತ ಮಾಡಿತು, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಗೆ ಆಡಳಿತ ಮಾಡಿದರು ಎನ್ನುವುದನ್ನು ಮತದಾರರು ನೋಡಿದ್ದಾರೆ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತ ಹೇಗಿತ್ತು ಎನ್ನುವುದೂ ಗೊತ್ತಿದೆ. ಕುಮಾರಸ್ವಾಮಿ ಯವರ ಆಡಳಿತ ಮೆಚ್ಚಿ ಯುವಕರು ಸ್ವಯಂಪ್ರೇರಿತರಾಗಿ ಜೆಡಿಎಸ್ ಪಕ್ಷಕ್ಕೆ ಬರುತ್ತಿರುವುದು ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಚಿತ್ರದುರ್ಗದ ಜನರು ಅಭಿವೃದ್ಧಿ ಕಡೆಗಣಿಸಿದವರನ್ನು ಇನ್ನಾದರೂ ಎಚ್ಚರಿಕೆ
ವಹಿಸಿ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾವ ರಾಷ್ಟ್ರೀಯ ಪಕ್ಷದಿಂದಲೂ ತಪ್ಪಿಸಲಾಗದು. ಎಷ್ಟು ಜನ ಪಕ್ಷ ಬಿಟ್ಟು ಹೋದರೂ ನಾಯಕರನ್ನು ಹುಟ್ಟು ಹಾಕುವ ಕಾರ್ಖಾನೆ ಎಂದರೆ ಅದು ಜೆಡಿಎಸ್ ಪಕ್ಷ ಮಾತ್ರ. ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಸಿ. ವೀರೇಂದ್ರ ಅವರನ್ನು ಬೆಂಬಲಿಸಿದರೆ ಚಿತ್ರದುರ್ಗದ ಬದಲಾವಣೆ ಪರ್ವ ಜೆಡಿಎಸ್ ಪಕ್ಷದಿಂದ ಆರಂಭವಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಚರಣ್, ಪ್ರಜ್ವಲ್ ನೇತೃತ್ವ 15 ಜನರು ಸೇರ್ಪಡೆಯಾದರು. ಜೆಡಿಎಸ್ ಪಕ್ಷದ ಮುಖಂಡರಾದ ಗುರುಸಿದ್ದಪ್ಪ, ಯುವ ಘಟಕದ ಪ್ರತಾಪ ಜೋಗಿ, ಕ್ರಿಶ್ಚಿಯನ್ ಘಟಕದ ರವಿ, ಜಾನಕೊಂಡ ಗ್ರಾಪಂ ಅಧ್ಯಕ್ಷ ನಿಜಲಿಂಗಪ್ಪ, ಅನಿಲ್, ಮಲ್ಲಿಕಾರ್ಜುನ, ಉಮೇಶ್ ಯಾದವ್, ಅಬ್ಬ ಇತರರು ಇದ್ದರು.
ರಾಷ್ಟ್ರೀಯ ಪಕ್ಷಗಳ ಸಾಕಷ್ಟು ಸಂಖ್ಯೆಯ ಯುವಕರು, ಮುಖಂಡರು ಜೆಡಿಎಸ್ ಕಡೆ ಮುಖ ಮಾಡಿರುವುದು ಸಂತೋಷ ಉಂಟು ಮಾಡಿದೆ. ಜೆಡಿಎಸ್ ಪಕ್ಷದ ಯುವಕರು ಮತ್ತು ಮುಖಂಡರು 40 ದಿನಗಳ ಕಾಲ ಪಕ್ಷಕ್ಕಾಗಿ ದುಡಿದರೆ 5 ವರ್ಷಗಳ ಕಾಲ ಪಕ್ಷ ನಿಮ್ಮನ್ನು ಕಾಯುತ್ತದೆ.
ಬಿ. ಕಾಂತರಾಜ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.