ನಿಗದಿತ ಬೆಲೆಗಾಗಿ ಭತ್ತ ಬೆಳೆಗಾರರ ಕನವರಿಕೆ
ಪ್ರಸಕ್ತ ವರ್ಷ ಬೇಸಿಗೆಯಲ್ಲಿ ಉತ್ತಮ ಇಳುವರಿ ಬಂದಿದ್ದರೂ ಭತ್ತಕ್ಕಿಲ್ಲ ಬೆಲೆ
Team Udayavani, May 3, 2020, 5:30 PM IST
ಸಾಂಧರ್ಭಿಕ ಚಿತ್ರ
ಕುರುಗೋಡು: ಪ್ರಸಕ್ತ ವರ್ಷ ಬೇಸಿಗೆಯ ಸಾಲಿನ ಭತ್ತದ ಬೆಳೆಯ ಇಳುವರಿ ಉತ್ತಮವಾಗಿದ್ದು, ನಿಗದಿತ ಬೆಲೆ ದಿನೇ-ದಿನೇ ಕುಸಿಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಈ ಭಾಗದ ರೈತರ ಪ್ರಮುಖ ಬೆಳೆಯಾಗಿರುವ ಭತ್ತ ಕಳೆದ ಮೂರು ವರ್ಷಗಳಿಂದ ಬೆಂಬಲಿತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಭತ್ತ ಉತ್ತಮ ಇಳುವರಿ ಇದ್ದರೂ ಬೆಲೆಯಲ್ಲಿ ಇಳಿಮುಖೀವಾಗಿ ರೈತರ ಮುಖದಲ್ಲಿ ಸಂತಸ ತೊರದಂತಾಗಿದೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದ ಕಾರಣ ರೈತರು ಆರ್ಥಿಕ ಬಿಕ್ಕಟ್ಟಿನ ಒಳಗಾಗಿದ್ದಾರೆ.
ಭತ್ತ ನಾಟಿ ಮಾಡಿದಾಗಿನಿಂದ ಕಟಾವುಗೆ ಬರುವ ತನಕ ಅತಿ ಹೆಚ್ಚು ಖರ್ಚು ಭರಿಸಿದರೂ ಅದಕ್ಕೆ ಪ್ರತಿಯಾಗಿ ತಕ್ಕಂತೆ ಬೆಲೆ ದೊರೆಯದ ಪರಿಣಾಮ ರೈತರ ಸ್ಥಿತಿ ಚಿಂತಾಜನಕವಾಗಿದೆ.
ಕೇಂದ್ರ ಸರಕಾರ ಭತ್ತಕ್ಕೆ ಕ್ವಿಂಟಲ್‌ಗೆ 1,815 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಪ್ರಸಕ್ತ ಮಾರುಕಟ್ಟೆಯಲ್ಲಿ ದಲ್ಲಾಳಿಗಳು 215 ರೂ. ಕಡಿಮೆ ಮಾಡಿದ್ದು, 1,600 ರೂ. ವರೆಗೆ ಭತ್ತವನ್ನು ರೈತರಿಂದ ಖರೀದಿ ಮಾಡಲು ಮುಂದಾಗಿದ್ದಾರೆ.
ಕುರುಗೋಡು ವ್ಯಾಪ್ತಿಯಲ್ಲಿ ಗೆಣಿಕೆಹಾಳ್, ಗುತ್ತಿಗನೂರು, ಓರ್ವಾಯಿ, ಮುಷ್ಟಗಟ್ಟಿ, ಸಿಂದಿಗೇರಿ, ಕ್ಯಾದಿಗೆಹಾಳ್, ಎಚ್. ವೀರಾಪುರ, ಮಣ್ಣೂರು, ಸೂಗೂರು ಭಾಗದಲ್ಲಿ ಬೇಸಿಗೆಯಲ್ಲಿ ಅತಿ ಹೆಚ್ಚು ಭತ್ತ ನಾಟಿ ಮಾಡಿದ್ದಾರೆ. ಬೆಳೆ ಕಟಾವು ಕೊನೆ ಹಂತದಲ್ಲಿ ಸಾಗಿದ್ದು, ಹಲವಾರು ರೈತರು ಒಕ್ಕಲು ಮಾಡಿದ್ದಾರೆ. ಉತ್ತಮ ದರಕ್ಕಾಗಿ ಕನವರಿಸುತ್ತಿದ್ದಾರೆ.
ಒಂದು ಎಕರೆ ಭತ್ತ ನಾಟಿ ಮಾಡಿ ಬೆಳೆದು ಮಾರಾಟ ಮಾಡುವವರೆಗೆ ರೈತರಿಗೆ ಕನಿಷ್ಠ 30 ರಿಂದ 40 ಸಾವಿರ ವೆಚ್ಚವಾಗುತ್ತದೆ. ಖರೀದಿದಾರ ಹಾಗೂ ಮಧ್ಯವರ್ತಿಗಳಿಂದ ಬೆಲೆ ಕುಸಿತಗೊಂಡು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಸರಕಾರ ತಕ್ಷಣ ಭತ್ತಕ್ಕೆ ಸೂಕ್ತ ದರ ನಿಗದಿ ಮಾಡಬೇಕು.
ಮುಷ್ಟಗಟ್ಟಿ ಭೀಮನಗೌಡ,
ತುಂಗಭದ್ರಾ ರೈತ ಸಂಘದ ತಾಲೂಕು ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.