ಕೋರಂ ಕೊರತೆ; ಮತ್ತೆ ಜಿಪಂ ಸಭೆ ಮುಂದಕ್ಕೆ


Team Udayavani, Feb 22, 2019, 11:53 AM IST

cta-1.jpg

ಚಿತ್ರದುರ್ಗ: ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಪಂ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮತ್ತೆ ಮುಂದೂಡಲಾಯಿತು. ಇದರಿಂದ ಸತತ 8ನೇ ಬಾರಿಗೆ ಸಭೆ ಮುಂದೂಡಿದಂತಾಯಿತು.

ಸಾಮಾನ್ಯ ಸಭೆ ನಡೆಸಲು 51 ಸದಸ್ಯರಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 26 ಸದಸ್ಯರ ಕೋರಂ ಬೇಕು. ಆದರೆ, ಇಂದಿನ ಸಭೆಯಲ್ಲಿ 22 ಸದಸ್ಯರು ಸಹಿ ಹಾಕಿದ್ದಾರೆ. ತಡವಾಗಿ ಆಗಮಿಸಿದ ಒಬ್ಬರು ಸದಸ್ಯರನ್ನು ಪರಿಗಣಿಸಲಿಲ್ಲ. ಕೋರಂ ಲಭ್ಯವಾಗದ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ
ಸಭೆ ನಡೆಸಲು ಬರುವುದಿಲ್ಲ. 

ಕೋರಂ ಕೊರತೆಯಿಂದ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಪ್ರಭಾರೆ ಅಧ್ಯಕ್ಷರ ಸೂಚನೆ ಮೇರೆಗೆ ಮುಂದೂಡಲಾಗಿದೆ ಎಂದು ಸಿಇಒ ಪಿ.ಎನ್‌. ರವೀಂದ್ರ ಹೇಳಿದರು.

ಮಾಜಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸದಲ್ಲಿ ಜಯ ಸಾಧಿಸಿದ್ದರೂ ಮುಂದೂಡಿದ ಸಾಮಾನ್ಯ ಸಭೆ ನಡೆಸುವಷ್ಟು ಕೋರಂ ಕಂಡು ಬಾರದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಬೇಕಿತ್ತು. ಆದರೆ, 11:30 ಗಂಟೆಯಾದರೂ ಅಗತ್ಯ ಸದಸ್ಯರು ಸಭೆಯತ್ತ ಸುಳಿಯಲಿಲ್ಲ. ಸಭೆಗೆ ಹತ್ತು ನಿಮಿಷ ಹೆಚ್ಚುವರಿಯಾಗಿ ಕಾಯೋಣ, ಸದಸ್ಯರು ಬರುತ್ತಾರೆ. ಬಂದ ನಂತರ ಸಭೆ ಆರಂಭಿಸೋಣ ಎಂದು ಪ್ರಭಾರೆ ಅಧ್ಯಕ್ಷೆ ಸುಶೀಲಮ್ಮ ಪ್ರಸ್ತಾಪ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಜ್ಜಪ್ಪ, ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಕಾನೂನು ಇಲ್ಲ. 11:30 ಗಂಟೆಗಿಂತ ಹೆಚ್ಚಿಗೆ ಕಾದಿದ್ದೇ ಕಾನೂನು ವಿರೋ ಧಿಯಾಗಿದೆ. ಕೂಡಲೇ ಸಭೆಯನ್ನು ಮುಂದೂಡುವಂತೆ ವಿರೋಧ ಪಕ್ಷದ ಕೆಲ ಸದಸ್ಯರು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯ ಕೃಷ್ಣಮೂರ್ತಿ, ನಗರಸಿಂಹರಾಜು ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಅಜ್ಜಪ್ಪ, ಕಾಂಗ್ರೆಸ್‌ ಸದಸ್ಯರಾದ ಕೃಷ್ಣಮೂರ್ತಿ, ನರಸಿಂಹ ಮೂರ್ತಿ ಅವರ ಮಧ್ಯೆ ವಾಕ್ಸಮರ ನಡೆಯಿತು. ನಮಗೆ ಜನರು ಕಲ್ಲಿನಲ್ಲಿ ಓಡಿಸಿಕೊಂಡು ಬಂದು ಹೊಡೆಯುತ್ತಾರೆ. ಕ್ಷೇತ್ರಗಳಲ್ಲಿ ತೀವ್ರ ತರಹದ  ಮಸ್ಯೆಗಳಿವೆ. ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲು ಸಾಮಾನ್ಯ ಸಭೆಗೆ ಪ್ರತಿ ಸಲ ಗೈರಾಗುತ್ತಿದ್ದರೆ ಹೇಗೆಂದು ಪ್ರಶ್ನಿಸಿದರು.

ಸಭೆ ಮುಂಡೂತ್ತಿದ್ದಂತೆ ಅದೇ ಜಾಗದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಸಿಇಒ ರವೀಂದ್ರ, ಅಧ್ಯಕ್ಷರು ಸೂಚಿಸಿದರು. ಇದರಿಂದ ಕುಪಿತರಾದ ಬಿಜೆಪಿ ಸದಸ್ಯರು ಸಭೆ ಮುಂದೂಡಲ್ಪಟ್ಟ ಮೇಲೆ ಹೇಗೆ ಈ ಜಾಗದಲ್ಲಿ ಸಭೆ ನಡೆಸುತ್ತೀರ, ಮಿನಿ ಜಿಪಂ ಹಾಲ್‌ನಲ್ಲಿ ಸಭೆ ಮಾಡಿಕೊಳ್ಳಿ ಎಂದರು. 

ಸದಸ್ಯೆ ರಾಜೇಶ್ವರಿ ಮಾತನಾಡಿ, ಈ ಹಿಂದೆ ನಾನು 11:29 ನಿಮಿಷಕ್ಕೆ ಬಂದ ಸಂದರ್ಭದಲ್ಲೂ ಸಮಯ ಮೀರಿ ಬಂದಿದ್ದೀರಿ ಎಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಲು ಅವಕಾಶ ನೀಡಲಿಲ್ಲ. ಆದರೆ, ಇಂದು 11:35 ನಿಮಿಷವಾದರೂ ಏಕೆ ಬರುವವರಿಗಾಗಿ ಕಾಯಲಾಗುತ್ತಿದೆ. ಒಬ್ಬರಿಗೊಂದು, ಮತ್ತೂಬ್ಬರಿಗೊಂದು ಕಾನೂನು ಇಲ್ಲವಾಗಿದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

ಸಮಯ ಮೀರಿ ಆಗಮಿಸಿರುವ ಯಾವುದೇ ಸದಸ್ಯರಿಗೆ ಹಾಜರಾತಿಗೆ ಸಹಿ ಮಾಡಲು ಅವಕಾಶ ನೀಡಬಾರದು. ಕೋರಂ ಇಲ್ಲ ಎಂದಾದ ಮೇಲೆ ಸಭೆಯನ್ನು ಮುಂದೂಡಬೇಕು ಎಂದು ಅಧ್ಯಕ್ಷರು, ಸಿಇಒ ಅವರಿಗೆ ತಾಕೀತು ಮಾಡಿದರು.

ಸದಸ್ಯ ಕೃಷ್ಣಮೂರ್ತಿ ನಡೆ ಕುರಿತು ಸದಸ್ಯ ಅಜ್ಜಪ್ಪ ಮಗುವನ್ನು ಚಿವುಟಿ ನಂತರ ತೊಟ್ಟಿಲು ತೂಗುವ ನಾಟಕ ಮಾಡುತ್ತೀರಾ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಾದ ನಂತರ ಮಹಿಳಾ ಸದಸ್ಯರು ಏರು ಧ್ವನಿಯಲ್ಲಿ ಆರೋಪ ಪ್ರತ್ಯಾರೋಪ ಮಾಡಿದರು.

ಸಭೆಯಲ್ಲಿ ಗದ್ದಲ, ಗಲಾಟೆ ಹೆಚ್ಚಾಗಿದ್ದರಿಂದ ಯಾರು ಏನು ಹೇಳುತ್ತಾರೆ, ಏನು ಕೇಳುತ್ತಾರೆ ಎನ್ನುವುದು ತಿಳಿಯದಾಯಿತು. ಗಲಾಟೆಯ ವಿಷಯ ತಿಳಿದು ಪೊಲೀಸರು ಆಗಮಿಸಿದರು. ವಿಧಿ ಯಿಲ್ಲದೆ ಸಭೆಯನ್ನು ಜಿಪಂ ಸಿಇಒ ಪಿ.ಎನ್‌.ರವೀಂದ್ರ ಅಧ್ಯಕ್ಷರ ಅನುಮತಿ ಮೇರೆಗೆ ಅನಿರ್ದಿಷ್ಟಾವಧಿಗೆ ಮುಂದೂಡಿದರು. 

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ;

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ

BYV-yathnal

Talk Fight: ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ

BYV-1

Waqf Property: ಸಚಿವ ಜಮೀರ್‌ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.