ರೈತರಿಗೆ ಅನ್ಯಾಯವಾದರೆ ರಾಜೀನಾಮೆ ನೀಡ್ತಿನಿ


Team Udayavani, Nov 22, 2020, 6:58 PM IST

ರೈತರಿಗೆ ಅನ್ಯಾಯವಾದರೆ ರಾಜೀನಾಮೆ ನೀಡ್ತಿನಿ

ಹೊಳಲ್ಕೆರೆ: ರಾಜ್ಯದ ರೈತರಿಗೆ ಅನ್ಯಾಯವಾಗುವಂತ ಕಾಯ್ದೆಗಳನ್ನು ಕೇಂದ್ರಹಾಗೂ ರಾಜ್ಯ ಸರಕಾರ ಜಾರಿಗೆ ಮುಂದಾಗಿದ್ದಲ್ಲಿವಿಧಾನಸಭೆಗೆ ರಾಜೀನಾಮೆ ನೀಡಿ ರೈತಪರವಾಗಿ ಹೋರಾಟಕ್ಕೆ ನಿಲ್ಲುತ್ತೇನೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ತಾಲೂಕಿನ ಉಪ್ಪರಿಗೆನಹಳ್ಳಿಯಲ್ಲಿ ನಬಾರ್ಡ್‌ ಸಹಯೋಗದಲ್ಲಿ ರೈತ ಉತ್ಪಾದಕರ ಕಂಪನಿ ಕಚೇರಿ ಉದ್ಘಾಟನೆ ಹಾಗೂ ಎಚ್‌.ಡಿ.ಪುರದ ಭಾಗದಲ್ಲಿ 8.5.ಕೋಟಿ ವಿವಿಧ ಹಳ್ಳಿಗಳಲ್ಲಿ ವಿವಿಧಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದಅವರು, ರೈತರು ಎಪಿಸಿಎಂಸಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರೈತರಿಗೆ ಅನ್ಯಾಯಮಾಡುತ್ತವೆ ಎನ್ನುವ ರೈತರ ನಿಲುವು ಸರಿಯಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕಾಯ್ದೆಗಳನ್ನು ಪ್ರಯೋಗಿಕವಾಗಿ ಜಾರಿಗೆ ಮುಂದಾಗಿವೆ. ಲೋಷದೋಷಗಳು ಕಂಡು ಬಂದಲ್ಲಿ ಸೂಕ್ತ ತಿದ್ದುಪಡಿಸಿ ಮಾಡಲಿದೆ. ರೈತರು ಕಾಯ್ದೆಗಳನ್ನು ಜಾರಿಗೆ ತರುವ ಮೊದಲೇ ಸರಿಯಲ್ಲ ಎನ್ನುವ ನಿಲುವು ಬೇಡ ಎಂದರು.

ಕ್ಷೇತ್ರದ 493 ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ 450 ಕೋಟಿ ಹಣದಲ್ಲಿ ಮಾರಿಕಣಿವೆಯಿಂದ ಪೈಪ್‌ಲೈನ್‌ ಮೂಲಕಶುದ್ಧ ನೀರನ್ನು ಮನೆ ಬಾಗಿಲಿನ ನಲ್ಲಿಗೆ ಪೂರೈಕೆಗೆ ಒತ್ತು ನೀಡಿದೆ. ರೈತರ ವಿದ್ಯುತ್‌ ಸಮಸ್ಯೆಯಮುಕ್ತಿಗೆ 220 ಕೆವಿ ಸ್ಥಾವರ ನಿರ್ಮಾಣಕ್ಕೆ 500ಕೋಟಿ ಹಣದಲ್ಲಿ ಶರಾವತಿ ಯಿಂದ ನೇರವಾಗಿ ಪೂರೈಕೆಗೆ ಒತ್ತು ನೀಡಿದೆ. ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಪೈಪ್‌ಲೈನ್‌ ಹಾಕುವಕೆಲಸಕ್ಕೆ ಚಾಲನೆ ಸಿಕ್ಕಿದೆ. ಬರಗಾಲದ ಪ್ರದೇಶದ ಎಚ್‌.ಡಿ. ಪುರ ಎಲ್ಲಾ ಕೆರೆಗೆ ಅಪ್ಪರ್‌ ಭದ್ರಾ ನೀರುತುಂಬಿಸಲು ಹೆಚ್ಚುವರಿ 150 ಕೋಟಿ ಅನುದಾನತಂದಿದೆ. ಚೆಕ್‌ ನಿರ್ಮಾಣಕ್ಕೆ 250 ಕೋಟಿನೀಡಿದೆ. ಅಸ್ಪತ್ರೆಗೆ 12 ಕೋಟಿ, 200ಶಾಲಾಕೊಠಡಿ ಸೇರಿದಂತೆ ಕ್ಷೇತ್ರದ ಆಭಿವೃದ್ಧಿ 2 ಸಾವಿರಕೋಟಿ ಅನುದಾನವನ್ನು ಸಾಮಾನ್ಯ ಶಾಸಕನಾಗಿ ತಂದಿದ್ದೇನೆ. ತೃಪ್ತಿ ಇಲ್ಲ. ಇನ್ನಷ್ಟು ಕೆಲಸ ಮಾಡಿ ಮತದಾರರ ಋಣ ತೀರಿಸುವ ಹಂಬಲವಿದೆ ಎಂದರು.

ಜಿ.ಪಂ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ಹಿಂದುಳಿದ ಪ್ರದೇಶವಾಗಿದ್ದು,ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಈನಿಟ್ಟಿನಲ್ಲಿ ಶಾಸಕರು ಶ್ರಮಿಸುತ್ತಿದ್ದಾರೆ ಎಂದರು.ರೈತರ ಸಂಘದ ರಾಜ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ರೈತರ ಸಮಸ್ಯೆಗಳಿಗೆ ಶಾಸಕ ಎಂ.ಚಂದ್ರಪ್ಪ ಧ್ವನಿಯಂತೆ ಕೆಲಸಮಾಡುವ ನಿರೀಕ್ಷೆ ಇದೆ. ಕೆರೆಗಳಿಗೆ ನೀರುತುಂಬಿಸುವುದರ ಜತೆ ಕೃಷಿ ನೀರಾವರಿಗೆ ಆದ್ಯತೆನೀಡಬೇಕು. ವೇದಾವತಿ ನೀರನ್ನು ಕೃಷಿ ಪ್ರದೇಶಕ್ಕೆ ಹರಿಸುವ ಕೆಲಸ ಮಾಡಲು ಶಾಸಕರು ಹೋರಾಟ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ನಬಾರ್ಡ್‌ ವ್ಯವಸ್ಥಾಪಕಿ ಕವಿತ, ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಜಿ.ಸಿ.ನಾಗರಾಜ್‌, ಸಹಾಯಕ ಕೃಷಿ ಅ ಧಿಕಾರಿ ಪ್ರಕಾಶ್‌, ಸಹಾಯಕ ತೋಟಗಾರಿಕೆ ಅಧಿಕಾರಿ ಕುಮಾರನಾಯ್ಕ, ತಾ.ಪಂ ಸದಸ್ಯ ಪರಮೇಶ್ವರಪ್ಪ, ಬಿಜೆಪಿ ಮುಖಂಡ ಚಂದ್ರಪ್ಪ, ಎಚ್‌.ಡಿ. ರಂಗಯ್ಯ,ಇಂಜನಿಯರ್‌ ಮಹಾಬಲೇಶ್ವರ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BYV-yathnal

Talk Fight: ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ

BYV-1

Waqf Property: ಸಚಿವ ಜಮೀರ್‌ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

ಸಿದ್ದರಾಮಯ್ಯ

ByPolls; ಕಾಂಗ್ರೆಸ್‌ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.